Tuesday, November 26, 2024
Tuesday, November 26, 2024

Karnataka Forest Department ತ್ರಿಣವೆ ಗ್ರಾಮದಲ್ಲಿ ಶ್ರೀಗಂಧ ಕಳ್ಳಸಾಗಣೆ: ನಾಲ್ವರ ಬಂಧನ

Date:

Karnataka Forest Department ಹೊಸನಗರ ತಾಲ್ಲೂಕಿನ ನಗರ ವಲಯ ವ್ಯಾಪ್ತಿಯ ಹುಂಚಾ ಹೋಬಳಿ, ತೊಗರೆ ಗ್ರಾಮದ ಸ.ನಂ:97ರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿತಲೆ ಮಾಡಿ ಸಾಗಾಣಿಕೆಗೆ ಪ್ರಯತ್ನಿಸಿದವರನ್ನು ಬಂಧಿಸಲಾಗಿದೆ ಎಂದು ಆರ್‌ಎಫ್ ಸಂಜಯ್ ತಿಳಿಸಿದ್ದಾರೆ.

ಕರ್ನಾಟಕ ಅರಣ್ಯ ಕಾಯೆ ೧೯೬೩ರ ಕಲಂ ೨೪(ಇ), ೬೨, ೮೪, ೮೬, ೮೭, ೭೧(ಎ) ಮತ್ತು ಕರ್ನಾಟಕ ಅರಣ್ಯ ನಿಯಮಗಳು ೧೯೬೯ರ ನಿಯಮ ೧೪೪, ೧೬೫ರ ಉಲ್ಲಂಘನೆಯಾಗಿರುವುದರಿಂದ ಪರಮೇಶ್ವರ ಬಿನ್ ರೇಣುಕಪ್ಪ, ಅಂದಾಜು ೪೭ ವರ್ಷ, ನಿವಣೆ ಗ್ರಾಮ, ನಿವಣೆ ವಾಸಿ, ಹುಂಚಾ ಹೋಬಳಿ, ಹೊಸನಗರ ತಾಲ್ಲೂಕು, ಹರೀಶ ಎಂ.ಕೆ ಬಿನ್ ಕೊಲ್ಲನಾ ಯ್ಕ, ಅಂದಾಜು ೪೨ ವರ್ಷ, ಮಾನಿ ವಾಸ, ತೊಗರೆ ಗ್ರಾಮ, ಹುಂಚಾ ಹೋಬಳಿ, ಹೊಸನಗರ ತಾಲ್ಲೂಕು, ಚಿದಾ ನಂದ ಆರ್ ಬಿನ್ ರಾಮಚಂದ್ರ, ಅಂದಾಜು ೩೫ ವರ್ಷ, ನಾಗರ ಕೊಡಿಗೆ ವಾಸ, ತ್ರಿಣವೆ ಗ್ರಾಮ, ಹುಂಚಾ ಹೋಬಳಿ, ಹೊಸನಗರ ತಾಲ್ಲೂಕು, ಅರುಣ್ ಕುಮಾರ್ ಆರ್ ಬಿನ್ ರಾಜು, ಅಂದಾಜು ೩೦ ವರ್ಷ, ನಾಗರಕೊಡಿಗೆ ವಾಸ, ತ್ರಿಣವೆ ಗ್ರಾಮ, ಹುಂಚಾ ಹೋ ಬಳಿ, ಹೊಸನಗರ ತಾಲ್ಲೂಕಿನ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Karnataka Forest Department ಆರೋಪಿಗಲಿಂದ ಒಟ್ಟು ಗಂಧ ದ ತುಂಡುಗಳು ೦೭ (.೧೭೮ಕೆ.ಜಿ,) ಒಂದು ಹ್ಯಾಂಡ್‌ಸಾ, ಒಂದು ಬ್ಯಾಗ್, ಒಂದು ಬಜಾಜ್ ಸಿ.ಟಿ ೧೦೦ ಬೈಕ್ ಕೆ.ಎ.೧೫. ಡಬ್ಲ್ಯೂ.೫೭೬೨ ಮತ್ತು ಸಿಪ್ಪೆ ಸಹಿತ ಶ್ರೀಗಂಧದ ೦೪ (೨೧.೬೯೦ ಕೆ.ಜಿ) ತುಂಡುಗಳು ಸುಮಾರು ೨೫-೩೦ ಸಾವಿರ ರೂ ಎಂದು ಅಂದಾಜಿ ಸಲಾಗಿದೆ ಮುಂದಿನ ಕ್ರಮಕ್ಕಾಗಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕಾರ್ಯಚರಣೆಯಲ್ಲಿ ನರೇಂದ್ರ, ಪ್ರವೀಣ್, ಅಮೃತ್, ಸತೀಶ್, ಯುವರಾಜ್, ಹಾಲೇಶ್, ಬೀಟ್ ಪಾರೆಸ್ಟರ್‌ಗಳಾದ ಮನೋಜ್ ಕುಮಾರ್, ಮನೋಜ್, ಯೋಗೇಶ್, ಶಶಿಕುಮಾರ್, ಜೆಸ್ಸಿನ ಚಾಲಕರಾದ ರಾಮು ಗಣಿಗ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dandavati Yojana ದಂಡಾವತಿ ಯೋಜನೆ ಬದಲಾಗಿದೆ. ಹೆಚ್ಚುವರಿ ಅನುದಾನದಿಂದ ಬ್ಯಾರೇಜ್ ನಿರ್ಮಾಣ- ಮಧು ಬಂಗಾರಪ್ಪ

Dandavati Yojana ರೈತರ, ಜಮೀನುಗಳಿಗೆ ತೊಂದರೆಯಾಗದೆ ದಂಡಾವತಿ ಯೋಜನೆಗೆ ಪರ್ಯಾಯವಾಗಿ ನೀರಾವರಿ...

Rashtrotthana Sahitya  “ಅಜೇಯ” ಶ್ರೀನಿವಾಸನ್ ಅವರ ” ನನ್ನ ಕೃಷ್ಣ” ಪುಸ್ತಕ ಬಿಡುಗಡೆ

Rashtrotthana Sahitya  ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ನ. 23ರಂದು ಅಜೇಯ...

Lok Sabha ಸಂಸದರ ಹಾಜರಿ ಪುಸ್ತಕಕ್ಕೆ ಈಗ ಡಿಜಿಟಲ್ ರೂಪ

Lok Sabha ಲೋಕಸಭೆಯಲ್ಲಿ ನವೀನ ಮತ್ತು ತಾಂತ್ರಿಕ ಪ್ರಗತಿಗಳು. ಇಂದು...