Friday, November 22, 2024
Friday, November 22, 2024

Kannada Sahitya Parishath ಮಕ್ಕಳಿಗೆ ಕನ್ನಡ ತುಡಿತದ ಅರಿವನ್ನ ಮೂಡಿಸಬೇಕು- ಚಟ್ನಳ್ಳಿ ಮಹೇಶ್

Date:

Kannada Sahitya Parishath ವಿಶ್ವಾದಾದ್ಯಂತ ಪ್ರಚಲಿತದಲ್ಲಿರುವ ಎಂಟು ಸಾವಿರ ಭಾಷೆಗಳ ಪೈಕಿ ಕನ್ನ ಡ ಅತ್ಯಂತ ಸೌಂದರ್ಯ ಹಾಗೂ ಸುಲಲಿತ ಭಾಷೆಯಾಗಿದೆ ಎಂದು ಹಿರಿಯ ವಾಗ್ಮಿ ಚಟ್ನಳ್ಳಿ ಮಹೇಶ್ ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಜಾಗರ ಹೋಬಳಿಯ ಶಿರವಾಸೆ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪ ಡಿಸಿದ್ದ ಕನ್ನಡ ಸಾಹಿತ್ಯೋತ್ಸವ, ಶಿರವಾಸೆ ಕಸಾಪ ಘಟಕದ ಪದಾಧಿಕಾರಿಗಳ ಸೇವಾ ದೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನೆರೆ ರಾಜ್ಯದ ಅನೇಕ ಪರಭಾಷಿಗರು ಕನ್ನಡದಲ್ಲಿ ಆಳವಾಗಿ ಅಧ್ಯಯನ ನಡೆಸಿದ ಪರಿಣಾಮ ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ದೊರೆತಿದೆ. ಇಂತಹ ಮಹಾನ್ ಕವಿಗಳ ಸಾರಥ್ಯದಲ್ಲಿ ಕನ್ನಡ ಅತ್ಯಂತ ವೇಗವಾಗಿ ಬೆಳೆದು ದೇಶ- ವಿದೇಶಗಳಲ್ಲಿ ಪಸರಿಸಿಕೊಂಡಿದೆ ಎಂದು ಹೇಳಿದರು.

ಶಿರವಾಸೆ ಗ್ರಾಮವು ಕನ್ನಡ ಕಟ್ಟಾಳುಗಳನ್ನು ಜನ್ಮವಿತ್ತ ಗ್ರಾಮ. ಈ ಹಿಂದೆ ಮುಳ್ಳೇಗೌಡ, ಶೇಖರ ಶೆಟ್ಟಿಯವರ ನೇತೃತ್ವದಲ್ಲಿ ಬಹಳಷ್ಟು ಮಂದಿ ಕನ್ನಡ ಬೆಳೆವಣ ಗೆಗೆ ಹೋರಾಡಿದವರು. ಅವರ ಮಾರ್ಗದರ್ಶನದಲ್ಲಿ ಇಂದಿಗೂ ಸಹ ಹಲವಾರು ವರ್ಷಗಳಿಂದ ಕಸಾಪದ ಮೂಲಕ ಭಾಷೆಯ ಕಂಪು ಎಲ್ಲೆಡೆ ಹಬ್ಬಿಸುವ ಕಾರ್ಯಕ್ಕೆ ಹೋಬಳಿ ಮುಖಂಡರುಗಳು ಮುಂದಾಗಿದ್ದಾರೆ ಎಂದು ಹೇಳಿದರು.

ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಈ ಭಾಗದಲ್ಲಿ ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮ ರೂಪಿಸಿ ಕಲಾವಿದರಿಗೆ ಉಣಬಡಿಸಲಾಗಿದೆ. ಇವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿಯಿದೆ. ಈ ಬಗ್ಗೆ ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡತುಡಿತದ ಅರಿವನ್ನು ಮೂಡಿ ಸಬೇಕು ಎಂದು ಸಲಹೆ ಮಾಡಿದರು.

ಕನ್ನಡತಾಯಿ ಸೇವೆ ಸಲ್ಲಿಸಿದ ಕವಿ, ಸಂತರು ಹಾಗೂ ಎಲೆಮರೆಕಾಯಿ ಕಾರ್ಯನಿರ್ವಹಿಸಿದ ವ್ಯಕ್ತಿಗಳನ್ನು ಸ್ಮರಿಸಬೇಕು. ಆ ಹಿನ್ನೆಲೆಯಲ್ಲಿ ಕಸಾಪದಿಂದ ಗಾಳಿಗುಡ್ಡೆ ಗ್ರಾಮದಲ್ಲಿ ಕನ್ನಡಕ್ಕಾಗಿ ದುಡಿದ ನಟ ಪುನೀತ್ ರಾಜ್ ಕುಮಾರ್ ಪುತ್ಥಳಿ ಸ್ಥಾಪಿಸಿ ಗೌರವ ಸಲ್ಲಿಸಿರುವುದು ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆಪಡುವ ವಿಷಯ ಎಂದರು.
ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿದ್ದು ಅವಶ್ಯಕತೆಯಿರುವ ಭಾಷೆಯನ್ನು ಕಲಿಯುವುದು ತಪ್ಪಲ್ಲ. ಆದರೆ ಮಾತೃಭಾಷೆಯನ್ನು ಮರೆಯುವ ರೀತಿಯಲ್ಲಿ ಕಲಿಯುವುದು ಸರಿಯಲ್ಲ. ಆ ನಿಟ್ಟಿನಲ್ಲಿ ನಾಡಿನ ಹಿರಿಮೆ, ಗರಿಮೆಗೆ ಕೊಂಚವು ತೊಡಕಾಗದಂತೆ ಕನ್ನಡಕ್ಕೆ ವಿಶೇಷ ಸ್ಥಾನಮಾನ ಹಾಗೂ ಗೌರವ ಸಲ್ಲಿಸುವ ರೀತಿಯಲ್ಲಿ ನಡೆದು ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಕನ್ನಡತನದ ಬಗ್ಗೆ ವಿಶೇಷ ಪ್ರೀತಿ ಹಾಗೂ ಪ್ರೋತ್ಸಾಹಿ ಸುವ ಶಿರವಾಸೆ ಗ್ರಾಮದ ಕಲಾಸಕ್ತರಿಗೆ ಪೂರಕವಾಗಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಸಮ್ಮೇಳನ ನಡೆಸಬೇ ಕಾಗಿದೆ. ಆ ಹಿನ್ನೆಲೆಯಲ್ಲಿ ಸ್ಥಳೀಯ ಹಾಗೂ ಕಸಾಪ ಪದಾಧಿಕಾರಿಗಳ ನೇತೃತ್ವದಲ್ಲಿ ಸಾಹಿತ್ಯಾತ್ಮಕ ಸಮ್ಮೇಳನಕ್ಕೆ ಮುಂದಾಗಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿರವಾಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಆರ್.ರಘುನಾಥ್ ಕಸಾಪದ ಹಲವಾರು ಕಾರ್ಯಕ್ರಮಕ್ಕೆ ಬೆನ್ನುಲುಬಾಗಿ ಮುಳ್ಳೇಗೌಡ ಹಾಗೂ ಶೇಖರಶೆಟ್ಟಿರವರು ಶೈಕ್ಷಣ ಕವಾಗಿ ಕೆಲಸ ಮಾಡಿರುವುದು ಸ್ಮರಿಸಬೇಕು. ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಕನ್ನಡಕ್ಕೆ ಹೆಚ್ಚು ಒತ್ತು ನೀಡಿದೆ. ಜೊತೆಗೆ ಬ್ಯಾಂಕ್, ಸೊಸೈಟಿ ನಿರ್ಮಿಸಿ ಗ್ರಾಮಸ್ಥರಿಗೆ ಅನುವು ಕಲ್ಪಿಸಿದ್ದಾರೆ ಎಂದು ಹೇಳಿದರು.

Kannada Sahitya Parishath ಕನ್ನಡ ಸಾಹಿತ್ಯೋತ್ಸವನ್ನು ಡೋಲು ಬಡಿಯುವ ಮೂಲಕ ಉದ್ಘಾಟಿಸಿದ ಉದ್ಯಮಿ ಸಿ.ಎಂ.ಜಾರ್ಜ್ ಮಾತ ನಾಡಿ ಮೂಲತಃ ತಾವು ಕೇರಳ ರಾಜ್ಯದವರಾಗಿದ್ದರೂ ಕೂಡಾ ಕನ್ನಡ ಬಗ್ಗೆ ವಿಶೇಷ ಅಭಿಮಾನವಿದೆ. ನಾಡು, ನುಡಿಯ ಬಗ್ಗೆ ಕನ್ನಡಿಗರಲ್ಲಿ ಆಸಕ್ತಿ ಅಜಾರಾಮರ. ತಾಯಿಭಾಷೆಯನ್ನು ಹೆತ್ತತಾಯಿಯಂತೆ ಗೌರವಿಸುವ ಗುಣ ಕನ್ನಡಿಗರಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.
ಕಸಾಪ ಜಾಗರ ಹೋಬಳಿ ಘಟಕದ ಅಧ್ಯಕ್ಷ ವಾಸುಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಹಿರಿಯರ ಮಾರ್ಗದರ್ಶನದಲ್ಲಿ ಕಲೆ, ಸಾಹಿತ್ಯ, ಸುಗಮ ಸಂಗೀತ, ನಾಟಕ, ಯಕ್ಷಗಾನ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗ್ರಾಮದಲ್ಲಿ ಆಚರಿಸಿ ಕನ್ನಡ ಬೆಳವಣ ಗೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಸಾಪ ಜಾಗರ ಹೋಬಳಿ ಸಂಸ್ಥಾಪಕ ಅಧ್ಯಕ್ಷ ಕೆ.ಆರ್.ಚಂದ್ರೇ ಗೌಡ ಮಾತನಾಡಿ ವಾಸುಪೂಜಾರಿ ಸೇರಿದಂತೆ ಹಲವಾರು ಸಹಕಾರದಿಂದ ಕನ್ನಡಪರ ಒಲವನ್ನು ಮೂಡಿಸುವ ಕಾರ್ಯಕ್ರಮವನ್ನು ಗ್ರಾಮದಲ್ಲಿ ಹಮ್ಮಿಕೊಂಡಿದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಕೊಂಡೊಯ್ಯಲು ಜವಾ ಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಇದೇ ವೇಳೆ ಕನ್ನಡ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ಗ್ರಾಮಸ್ಥರು ಹಾಗೂ ಶಾಲಾಮಕ್ಕಳ ಜೊತೆಗೂ ಡಿ ಕನ್ನಡಾಂಬೆಗೆ ಜಯಘೋಷಗಳನ್ನು ಹಾಕುತ್ತಾ ಗ್ರಾಮದ ಸುತ್ತಮುತ್ತಲು ಮೆರವಣಿಗೆ ನಡೆಸಲಾಯಿತು.

ಬಳಿಕ ರಾಷ್ಟ್ರಧ್ವಜ ಹಾಗೂ ನಾಡಧ್ವಜಾರೋಹಣವನ್ನು ನೆರವೇರಿಸಲಾಯಿತು. ಶಿರವಾಸೆ ಗ್ರಾಮದ ಮರ‍್ನಾಲ್ಕು ಕಿ.ಮೀ. ಗಳು ಅಂತರಗಳಲ್ಲಿ ಕನ್ನಡ ಭಾವುಟಗಳು ರಾರಾಜಿಸುತ್ತಿದ್ದವು. ಬಳಿಕ ಕಸಾಪ ತಾಲ್ಲೂಕು ಅಧ್ಯಕ್ಷ ಬಿಸಲೇನಹಳ್ಳಿ ಸೋಮಶೇಖರ್ ಕಸಾಪ ಗ್ರಾಮದ ಘಟಕದ ಪದಾಧಿಕಾರಿಗಳ ಸೇವಾದೀಕ್ಷೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶಿರವಾಸೆ ವಿ.ವಿ.ಸಂಸ್ಥೆ ಉಪಾಧ್ಯಕ್ಷ ಎನ್.ಶ್ರೀಕಾಂತ್‌ಶೆಟ್ಟಿ, ಮುಖ್ಯೋಪಾಧ್ಯಾಯ ಅನಿಲ್‌ಕುಮಾರ್, ಬಿ.ಕೆ.ಸುಂದರೇಶ್ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಜಾರ್ಜ್ ಆಸ್ಟಿನ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಜೈಕರ್ನಾಟಕ ಯುವ ಸಂಘದ ಅಧ್ಯಕ್ಷ ಯೋಗೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಕೆ.ಚಂದ್ರಯ್ಯ, ಜಾಗರ ಹೋಬಳಿ ಮಾಜಿ ಅಧ್ಯಕ್ಷ ರವಿ ಕಳವಾಸೆ, ಗ್ರಾ.ಪಂ. ಸದಸ್ಯರಾದ ಉಮಾ, ಗಣೇಶ್, ಪ್ರೇಮಾಕ್ಷಿ, ರವಿ, ವಿಮಲಾ, ಜಿ.ಪಂ. ಮಾಜಿ ಸದಸ್ಯ ಜೆ.ಡಿ.ಲೋಕೇಶ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...