Mahatma Gandhi Narega Scheme ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಲಕ್ಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಜೆಸಿಬಿ ಯಂತ್ರ ಬಳಕೆಯಿಂದ ನಿರ್ವಹಿಸಿರುವ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಒಂಬಡ್ಸ್ಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ತಮ್ಮೇಗೌಡ ಲಕ್ಯಾ ಹೋಬಳಿಯ ಲಕ್ಕಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 2023-24ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಜೆಸಿಬಿ ಯಂತ್ರ ಬಳಸಿ ನಿರ್ವಹಿಸಿರುವ ಪರಿಣಾಮ ಸಂಪೂರ್ಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದ್ದಾರೆ.
ಲಕ್ಕಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೀರನಹಳ್ಳಿ ಗ್ರಾಮದ ಕೆಜಿ ಹಟ್ಟಿ ನಾಗನಕಟ್ಟೆ ಹನುಮಂತೇಗೌಡರ ಜಮೀನಿಂದ ಸಂತೆ ಮರದ ಹಳ್ಳದವರೆಗೆ, ಸಿರಬಡಿಗೆ ಗ್ರಾಮದ ಗುಂಡಿಯಿಂದ ಕಾಲೋನಿವರೆಗೆ, ಕುಬೇರನ ಜಮೀ ನಿಂದ ಕೋಳಿ ಫಾರಂವರೆಗೆ ಮತ್ತು ಭಾಸ್ಕರನ ಕಟ್ಟೆಯಿಂದ ರಾಮೇಗೌಡರ ಜಮೀನಿವರೆಗೆ ರಸ್ತೆ ಅಭಿವೃದ್ದಿಗೆ ಸರ್ಕಾರ ಲಕ್ಷಾಂತರ ರೂ. ವ್ಯಯಿಸಿದ್ದು ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ದೂರಿದ್ದಾರೆ.
Mahatma Gandhi Narega Scheme ಚಿಕ್ಕಮಗಳೂರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕೂಲಿಕಾರ್ಮಿಕರ ಕೆಲಸವನ್ನು ಕೂಡಾ ಜೆಸಿಬಿ ಯಂತ್ರ ಬಳಸಿ ಕಾಮಗಾರಿ ನಿರ್ವಹಿಸಲಾಗಿದೆ. ಜೊತೆಗೆ ಅಕ್ರಮವಾಗಿ ಕೂಲಿಕಾರರ ಜಾಬ್‌ಕಾರ್ಡ್ ಹೆಸರಿನಲ್ಲಿ ವಸೂಲಿಗೆ ಮುಂ ದಾಗಿದ್ದು ಇದೀಗ ಅವರ ಖಾತೆಗೆ ಹಣವನ್ನು ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲನೆ ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.