Forest Department ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಪುಂಡಾನೆಗಳ ಹಾವಳಿಯಿಂದ ಕಾಫಿ ಬೆಳೆಗಾರರು ತತ್ತರಿಸಿ ಜೀವನ ಸಂಕಷ್ಟದ ಸ್ಥಿತಿಗೆ ತಂದೊಡ್ಡಿದೆ ಎಂದು ಎಎಪಿಯ ಕಾಫಿ ಮತ್ತು ತೆಂಗು ಬೆಳೆಗಾರರ ರಾಜ್ಯಾಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಅರಣ್ಯ ಇಲಾಖೆ ಸಚಿವ ಈಶ್ವರ್‌ಖಂಡ್ರೆ ಅವರಿಗೆ ಅಂಚೆ ಮೂಲಕ ಮನವಿ ಸಲ್ಲಿಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಚಿಕ್ಕಮಗಳೂರು, ಹಾಸನ, ಹಾಗೂ ಮಡಿಕೇರಿ ಜಿಲ್ಲೆಗಳಲ್ಲಿ ಪುಂಡಾನೆಗಳ ದಾಳಿಯಿಂದ ಕಾಫಿ ಬೆಳೆಯು ನೆಲಕಚ್ಚಿರುವ ಪರಿಣಾಮ ಬೆಳೆಗಾರರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸುಮಾರು ಎಂಟು ಕೂಲಿಕಾರ್ಮಿಕರ ಬಲಿ ಪಡೆದಿರುವ ಕಾಡಾನೆಗಳನ್ನು ಸೆರೆಹಿಡಿಯಲು ಪ್ರಯ ತ್ನಿಸಿದರೂ ಸೆರೆಸಿಕ್ಕಿಲ್ಲ. ಕಾಡಂಚಿನ ತೋಟಗಳಲ್ಲಿ 50- 60ಆನೆಗಳು ಬೀಡುಬಿಟ್ಟಿದ್ದು ತಿಂಗಳಲ್ಲಿ 3-4 ಮಂದಿ ಕಾರ್ಮಿಕರನ್ನು ಬಲಿ ಪಡೆದಿರುವ ಪರಿಣಾಮ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದಿದ್ದಾರೆ.
ಇದರಿಂದ ಕಾಫಿ ಬೆಳೆಗಾರರು ಕೊಯ್ಯಲು ಪ್ರಾರಂಭಿಸಿದ್ದು ಕೆಲಸಕ್ಕಾಗಿ ಕಾರ್ಮಿಕರ ಬರದೇ ಹಿಂಜರಿಯು ತ್ತಿದ್ದಾರೆ. ಜೊತೆಗೆ ಅಕಾಲಿಕ ಮಳೆಯಿಂದ ಹಣ್ಣು ಉದುರಲಾಂಭಿಸಿದೆ. ಇನ್ನೂ 3-4 ದಿನಗಳಲ್ಲಿ ಕೊಯ್ಲು ಕೆಲಸ ಪೂರ್ಣಗೊಳ್ಳದಿದ್ದರೆ ಕಾಫಿ ಬೆಳೆಗಾರರಿಗೆ ತೀವ್ರ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
Forest Department ಒಂದು ಕಡೆ ಆನೆಗಳ ದಾಳಿಯಿಂದ ಕಾರ್ಮಿಕರು ಧಾವಿಸದೇ ಬೆಳೆ ನಾಶವಾದರೆ, ಇನ್ನೊಂದೆಡೆ ಬ್ಯಾಂಕಿನ ಅಧಿಕಾರಿಗಳು ಸಾಲ ತೀರಿಸಲು ನೋಟಿಸ್ ನೀಡಲಾಗುತ್ತಿರುವುದು ನೋವಿನ ಸಂಗತಿ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಕಾಫಿ ಬೆಳೆಗಾರರ ಸಂಕಷ್ಟಗಳ ಬಗ್ಗೆ ಪರಿಶೀಲನೆ ನಡೆಸಿ ಕಾಫಿ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆನೆದಾಳಿ ದಾಳಿಯಿಂದ ಬಲಿಯಾದ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಘೋಷಿಸಬೇಕು. ಪ್ರಾಣಿಗಳ ಹಾವಳಿ ತಡೆಯಬೇಕಾದರೆ ರೈಲ್ವೆ ಕಂಬಿ 10 ಅಡಿ ಎತ್ತರ ಅಳವಡಿಸದಿದ್ದಲ್ಲಿ ಎಎಪಿ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.