Friday, December 5, 2025
Friday, December 5, 2025

Basava Peetha ಕನ್ನಡದಲ್ಲೇ ನಮ್ಮ ಧರ್ಮ, ಆಧ್ಯಾತ್ಮ, ಮೌಲ್ಯಗಳನ್ನ ಅರ್ಥೈಸಿ ತಿಳಿಸಿದ ಪರಂಪರೆ ನಮ್ಮದು- ಶ್ರೀಬಸವ ಮರುಳಸಿದ್ಧ ಸ್ವಾಮೀಜಿ

Date:

Basava Peetha ಶರಣರು ಜನಭಾಷೆಯನ್ನು ಧರ್ಮದ ಭಾಷೆಯನ್ನಾಗಿ, ದೇವರ ಭಾಷೆಯನ್ನಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮಾಡಿದ್ದಾರೆ ಬಸವ ಮಂದಿರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ಹೇಳಿದರು.

ಚಿಕ್ಕಮಗಳೂರು ನಗರದ ಬಸವತತ್ವ ಪೀಠದ ಸಂಸ್ಥಾಪಕರಾದ ಬಸವಮಂದಿರದ ಶ್ರೀ ಮ.ನಿ.ಪ್ರ ಜಯಚಂದ್ರಶೇಖರ ಸ್ವಾಮಿ ಗಳ 28ನೇ ಸಂಸ್ಮರಣೆಯ ಶಿವಾನುಭವಗೋಷ್ಠಿಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕನ್ನಡದಲ್ಲಿ ಧರ್ಮ, ಕನ್ನಡದಲ್ಲಿ ಆಧ್ಯಾತ್ಮ, ಕನ್ನಡದಲ್ಲಿ ತತ್ವ, ಕನ್ನಡದಲ್ಲಿ ಮೌಲ್ಯಗಳು ಜನರಿಗೆ ಅರ್ಥವಾಗುವ ರೀತಿಯಲ್ಲಿ ಮಾಡಿಕೊಟ್ಟ ಪರಂಪರೆ ನಮ್ಮದು. ಈ ನಾಡಿಗೆ ಶ್ರೀಗಳು ಬಸವತತ್ವ ಪ್ರಚಾರದ ದೊಡ್ಡ ಕೊಡುಗೆ ನೀಡಿದ್ದಾರೆ. ಅವರುಗಳು ಹಾಕಿಕೊಟ್ಟ ಆದರ್ಶಗಳು, ಕಲ್ಯಾಣ ಕಾರ್ಯಗಳನ್ನು ನಾವು ಮುಂದುವರಿಸಿಕೊoಡು ಹೋಗುತ್ತಿದ್ದೇವೆ ಎಂದರು.

ಇಂದು ಕೆಲವು ಆಚರಣೆಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗಿ ನಮ್ಮ ತತ್ವ ತಾತ್ವಿಕತೆಯನ್ನು ಮರೆಯುತ್ತಿರುವುದು ವಿಷಾದನೀಯ, ನಮ್ಮ ಸಂಪ್ರದಾಯಗಳನ್ನು ಮರೆಯಬಾರದು. ಈ ತಿಂಗಳು ಕರ್ನಾಟಕ ರಾಜ್ಯೋತ್ಸವ ಆಚರಣೆ ಆಗಿರುವುದರಿಂದ ಹೆಸರಾಯಿತು ಕನ್ನಡ, ಉಸಿರಾಯಿತು ಕನ್ನಡ ಎಂದು ಅಂದೆ ಕವಿಗಳು ಹೇಳಿದ್ದರು.
ಆದರೆ, ಇಂದು ಕನ್ನಡವನ್ನು ಮರೆಯುತ್ತಿದ್ದೇವೆ ಎಂದರು.

ಕನ್ನಡವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ನಮ್ಮ ನೆಲದ ಭಾಷೆಯನ್ನು ಹೆಮ್ಮೆಯಿಂದ ಬಳಸಿಕೊಂಡು ಕಲಿಯಬೇಕು ಹಾಗೆಂದು ಬೇರೆ ಭಾಷೆ ವಿರೋಧಿಯಲ್ಲ, ಸಾವಿರ ಭಾಷೆ ಕಲಿಯಿರಿ ಆದರೆ ನಮ್ಮ ಮಾತೃಭಾಷೆಯನ್ನು ಮರೆಯಬೇಡಿ ಎಂದು ಹೇಳಿದರು.

Basava Peetha ಸಂದರ್ಭದಲ್ಲಿ ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್ ಉಪಾಧ್ಯಕ್ಷದ ಗಿರೀಶ್, ಸಂಘದ ನಿರ್ದೇಶಕರುಗಳಾದ ಓಂಕಾರಪ್ಪ ಕೆ ಓ.ಜಗದೀಶ್ ಎಲ್ ಸಿ, ಯೋಗಾನಂದ ಸಿ, ಹೇಮಂತ್ ಕುಮಾರ್, ನಂದೀಶ್, ಬಿ.ಸಿ. ಭಾರತಿ, ತನುಜಾ ರಾಜೇಶ್, ಶಿವಕುಮಾರ್ ಕೆ .ವಿ. ಓಂಕಾರ್ ಸ್ವಾಮಿ. ವೀರೇಶ್ ಹಾಗೂ ಉಪನ್ಯಾಸ ಜಯಚೆನ್ನೆಗೌಡ ನೀಡಿದರು.
ಶ್ರೀ ಬಸವ ಕಲಾ ಲೋಕ ದಾವಣಗೆರೆ ವಚನ ಗಾಯನ ನಡೆಸಿಕೊಟ್ಟರು. ಮಠದ ಆವರಣದಲ್ಲಿ ವಿಶೇಷವಾಗಿ ಜೈವಿಕ ಎಂಬುವರ ಹುಟ್ಟುಹಬ್ಬವನ್ನು ಮಹೇಶ್ವರಪ್ಪ ಭಾಗ್ಯದಂಪತಿಗಳು ಆಚರಿಸಿಕೊಂಡರು.

ಕ್ರೀಡಾಪಟು ಲೋಕೇಶ್ ರವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ನಳಿನ ನಿರಂಜನ್ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...