Amrita Yojana ಅಮೃತ ಯೋಜನೆಯಡಿಯಲ್ಲಿ ನಡೆದಿರುವ ನೂರಾರು ಕೋಟಿ ಅವ್ಯವ ಹಾರದ ಕಾಮಗಾರಿಯನ್ನು ಪತ್ತೆಹಚ್ಚಿ ಸೂಕ್ತ ತನಿಖೆ ನಡೆಸಬೇಕು ಎಂದು ನಗರಸಭಾ ಮಾಜಿ ಅಧ್ಯಕ್ಷ ಮುನೀರ್ ಅಹ್ಮದ್ ಅವರು ನ್ಯಾಯಮೂರ್ತಿ ಹೆಚ್.ಎಸ್.ನಾಗಮೋಹನ್‌ದಾಸ್‌ಗೆ ಒತ್ತಾಯಿಸಿದ್ದಾರೆ.
ಈ ಸಂಬoಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಅವ್ಯವಹಾರ ಸಂಬoಧ ನ್ಯಾಯಮೂರ್ತಿಗಳಿಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಲಾಗಿದ್ದು ಕಾಮಗಾರಿ ಉಲ್ಲೇಖ ಸಂಬAಧ ಮೂರು ವರ್ಷಕ್ಕೆ ಗುತ್ತಿಗೆ ತೆಗೆದುಕೊಂಡಿದ್ದರೂ ಏಳು ವರ್ಷವಾದರೂ ಕಾಮಗಾರಿ ಮುಗಿಸದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಇಷ್ಟೆಲ್ಲಾ ಸಮಯ ಬಳಸಿಕೊಂಡಿರುವುದು ಗಮನಿಸಿದರೆ ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವುದು ಸ್ಪಷ್ಟ ವಾಗಿ ಕಂಡುಬರುತ್ತಿದೆ. ಯೋಜನೆಗೆ ಇರಿಸಿದ ಅನುದಾನ ಬಹುತೇಕ ಬಿಡುಗಡೆಯಾಗಿದ್ದರೂ ಚಿಕ್ಕಮಗಳೂರು ನಗರದಲ್ಲಿ ಯಾವ ಭಾಗದಲ್ಲಿ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಇದರಿಂದ ಸಾರ್ವಜನಿಕರ ಹಣ ದುರುಪಯೋಗಪಡಿಸಿ ಕೊಂಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಕಾಮಗಾರಿಯ ಯೋಜನೆಗೆ ಸಂಬoಧಿಸಿದoತೆ ಯಾವ ಹಂತದ ಕೆಲಸವೂ ಸ್ಥಳಪರಿಶೀಲನೆ ನಡೆಸಿದರೂ ಅಂದುಕೊoಡoತೆ ನಡೆದಿಲ್ಲ. ಕೇವಲ ಕಾಗದಪತ್ರಗಳಲ್ಲಿ ಯೋಜನೆ ಜಾರಿಯಾಗಿದೆ ಹೊರತು ಸಾರ್ವಜನಿಕರಿಗೆ ಸೌಲಭ್ಯ ದೊರೆಯದೇ ಅನುದಾನ ಮೊತ್ತ ನೀರಿನಂತೆ ಹರಿದು ಪಟ್ಟಭದ್ರ ಹಿತಾಸಕ್ತಿಗೆ ಸೇರಿಸುತ್ತಿರುವುದು ವಿಪ ರ್ಯಾಸ ಎಂದಿದ್ದಾರೆ.
Amrita Yojana ಕೂಡಲೇ ನ್ಯಾಯಾಮೂರ್ತಿಗಳು ಚಿಕ್ಕಮಗಳೂರು ನಗರದಲ್ಲಿ ಅಮೃತ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಬೇಕು. ಸಂಬoಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿ ಕರ ತೆರಿಗೆ ಹಣಕ್ಕೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.