D. K. Shivakumar ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀಮತಿ ಎಂ.ಲೀಲಾವತಿ ಪಶು ವೈದ್ಯಕೀಯ ಆಸ್ಪತ್ರೆಯನ್ನು ಇಂದು ಉದ್ಘಾಟಿಸಿ, ಮಾತನಾಡಿದರು.
ಹಿರಿಯ ನಟಿ ಶ್ರೀಮತಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್’ರವರು ನನ್ನ ನಿವಾಸಕ್ಕೆ ಬಂದು ತಾವು ಕಟ್ಟಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟಿಸಬೇಕೆಂದು ಕೇಳಿಕೊಂಡಿದ್ದರು. ಅದರಂತೆ ನನ್ನ ಸರ್ಕಾರಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಇಂದು ಈ ಆಸ್ಪತ್ರೆಯನ್ನು ಉದ್ಘಾಟಿಸಿದ್ದೇನೆ. ಪಶು ವೈದ್ಯಕೀಯ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಮೂಲಕ ಇಂದು ಲೀಲಾವತಿಯವರು ಹಾಗೂ ವಿನೋದ್ ರಾಜ್’ರವರು ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.
D. K. Shivakumar ಶ್ರೀಮಂತರು ಹಲವಾರು ರೀತಿಯಲ್ಲಿ ದಾನ, ಧರ್ಮ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಲೀಲಾವತಿಯವರು ಮೂಕ ಪ್ರಾಣಿಗಳಿಗಾಗಿ ಆಸ್ಪತ್ರೆಯೊಂದನ್ನು ನಿರ್ಮಿಸಿ ತೋರಿದ ಸಾಮಾಜಿಕ ಕಳಕಳಿ ಇದೆಲ್ಲವನ್ನು ಮೀರಿದ್ದು. 60 ವರ್ಷಗಳ ಕಾಲ ಕಲಾ ಸೇವೆ ಮಾಡಿರುವ ಲೀಲಾವತಿಯವರು, ಇಂದು ಸಾಮಾಜಿಕ ಸೇವೆಯ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಪಶುಗಳ ಚಿಕಿತ್ಸೆಗಾಗಿ ಕಟ್ಟಿರುವ ಈ ಆಸ್ಪತ್ರೆ ಯಶಸ್ವಿಯಾಗಿ ನಡೆದುಕೊಂಡು ಹೋಗಲಿ ಹಾಗೂ ಇದಕ್ಕೆ ಬೇಕಾದ ಸಹಕಾರ ಹಾಗೂ ಬೆಂಬಲವನ್ನು ನೀಡುತ್ತೇನೆ ಎಂದು ಹೇಳಿ ಅವರಿಗೆ ಶುಭ ಹಾರೈಸಿದರು.