Saturday, December 6, 2025
Saturday, December 6, 2025

Chinthana Karthika ಯುವ ಪೀಳಿಗೆಯಲ್ಲಿ ಧರ್ಮದ ಅರಿವು ಮೂಡಿಸುವ ಚಿಂತನ ಕಾರ್ತೀಕ

Date:

Chinthana Karthika ಮನೆ ಮನಗಳಲ್ಲಿಯೂ ಧಾರ್ಮಿಕ ಚಿಂತನೆ ಜಾಗೃತಿಗೊಳಿಸುವ ಆಶಯದಿಂದ ಚಿಂತನ ಕಾರ್ತಿಕ ಹಮ್ಮಿಕೊಳ್ಳುತ್ತಿದ್ದು, ಮುಂದಿನ ಯುವಪೀಳಿಗೆಯಲ್ಲಿ ಧರ್ಮದ ಮಹ್ವತ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ನಗರದ ಕೃಷಿ ನಗರದಲ್ಲಿರುವ ರೋಟರಿ ಜಿ.ವಿಜಯ್‌ಕುಮಾರ್ ಅವರ ಬಸವೇಶ್ವರ ನಿಲಯದಲ್ಲಿ ಬಸವಕೇಂದ್ರದ ವತಿಯಿಂದ ಆಯೋಜಿಸಿದ್ದ “ಚಿಂತನ ಕಾರ್ತಿಕ” ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಚಿಂತನಾ ಕಾರ್ತಿಕ ಮಾಸ ಪೂರ್ಣ ನಡೆಯುತ್ತಿದ್ದು, ಪ್ರತಿಯೊಂದು ದಿನವು ಒಂದೊಂದು ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸಗಳ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಶಯಗಳ ಬಗ್ಗೆ ತಿಳಿಸುವ ಕೆಲಸ ಆಗುತ್ತಿದೆ. ಇದು ಅತ್ಯಂತ ಸಾರ್ಥಕ ಕಾರ್ಯ ಎಂದು ತಿಳಿಸಿದರು.

ಬೆಂಗಳೂರಿನ ಟೌನ್ ಹಾಲ್ ಕೊಡುಗೆ ನೀಡಿದ ದಾನಿ ಸರ್ ಕೆ.ಪಿ.ಪುಟ್ಟಣ್ಣ ಶೆಟ್ಟರು ಕುರಿತು ಎಂ.ವಿರೂಪಾಕ್ಷಪ್ಪ ಉಪನ್ಯಾಸದ ನೀಡಿದ ನಂತರ ಪಟ್ಟಣ್ಣ ಅವರು ತಮಿಳು ವ್ಯಕ್ತಿ ಎಂಬ ಕಲ್ಪನೆ ಮರೆಯಾಗಿ ಅಚ್ಚ ಕನ್ನಡಿಗರೆಂದು ಅರಿವಾಯಿತು.
ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಚಿಂತನ ಲಹರಿ ಕಾರ್ಯಕ್ರಮ ನಡೆಯಿತು.

ಸೇವಾರ್ಥಿಗಳಾದ ಜಿ.ವಿಜಯ್‌ಕುಮಾರ್ ಮತ್ತು ಬಿಂದು ವಿಜಯ್‌ಕುಮಾರ್ ದಂಪತಿಯನ್ನು ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ವಿಶ್ವಾಸ ಹಾಗೂ ಧೀರಜ್ ಹೊನ್ನವಿಲೆ ಮಾತನಾಡಿದರು. ಮನೆ ಮನಗಳನ್ನು ಬೆಳಗುತ್ತಿರುವ ಚಿಂತನ ಕಾರ್ತಿಕ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ಎಲ್ಲಾ ಬಡಾವಣೆಗಳಲ್ಲಿ ನಡೆಯುತ್ತಿದೆ. ಧಾರ್ಮಿಕ ಜಾಗೃತಿಯನ್ನು ಮೂಡಿಸುವುದರ ಮುಖಾಂತರ ಸಂಸ್ಕಾರವನ್ನು ಕಲಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಇದರಿಂದ ಮನಸ್ಸುಗಳು ಸ್ವಚ್ಛವಾಗುತ್ತವೆ. ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ವೃದ್ಧಿಸುತ್ತದೆ. ಧಾರ್ಮಿಕ ಮನೋಭಾವನೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ವಿಜಯಕುಮಾರ್ ಮತ್ತು ಬಿಂದು ವಿಜಯಕುಮಾರ್ ಅವರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಮಾತನಾಡಿ ಶ್ರೀ ಶಿವಗಂಗಾ ರಾಘವ ಶಾಖೆ ಮತ್ತು ಕೃಷಿ ನಗರ ಯೋಗ ಶಾಖೆಯ ಶಿಕ್ಷಕರಿಗೆ ಪೂಜ್ಯರಿಂದ ಆಶೀರ್ವಾದ ಮತ್ತು ಗೌರವವನ್ನು ಕೊಡಮಾಡಿದರು.

ವಿಭಿನ್ನ ಬಗೆಯ ರುಚಿಕಟ್ಟಾದ ಪ್ರಸಾದ ಸೇವೆಯು ನಡೆಸಲಾಯಿತು. ವೇದಿಕೆ ಕಾರ್ಯಕ್ರಮ ಉತ್ತಮವಾಗಿ ನಿರ್ವಹಿಸಲಾಯಿತು.

ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್, ನೀಲ್ಕಂಠರಾವ್, ಮಲ್ಲಿಕಾರ್ಜುನ್ ಕಾನೂರು, ಗಣೇಶ್, ಸವಿತಾ, ಶ್ರೀ ಶಿವಗಂಗಾ ರಾಘವ ಶಾಖೆ ಮತ್ತು ಕೃಷಿ ನಗರ ಯೋಗ ಶಾಖೆಯ ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...