Shivamogga City Corporation ಗಂಗ ಸ್ನಾನ ತುಂಗಪಾನ ಎಂಬ ನಾಲ್ನುಡಿ ಈಗ ಅಪವಾದವಾಗಿದೆ. ತುಂಗೆಯ ನೀರು ಈಗ ಕುಡಿಯಲು ಯೋಗ್ಯವಾಗಿಲ್ಲ. ನೀರು ಕುಡಿದವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಮಹಾನಗರ ಪಾಲಿಕೆಯಲ್ಲಿ ನಡೆದ ಕೊನೆಯ ವಿಶೇಷ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದ್ದಾರೆ.
ತುಂಗಾ ನದಿಯನ್ನು ಉಳಿಸುವುದು ಮಹಾನಗರ ಪಾಲಿಕೆಯ ಕರ್ತವ್ಯ. ಆದ್ದರಿಂದ ಶಿವಮೊಗ್ಗ ನಗರದ ಮಲಿನ ನೀರು, ನದಿಯ ಬದಲಿಗೆ ಒಳಚರಂಡಿ ಮುಖಾಂತರವೇ ಹರಿಸಬೇಕು ಎಂಬ ನಿರ್ಣಯ ಮಾಡೋಣ ಎಂದು ಮಹಾನಗರ ಪಾಲಿಕೆಯ ಸದಸ್ಯರಾದ ರಮೇಶ್ ಹೆಗ್ಡೆ ಅವರು ಹೇಳಿದ್ದಾರೆ. ಅದಕ್ಕೆ ಸದಸ್ಯರು ಒಪ್ಪಿದ್ದಾರೆ.
ಪಂಪ್ ಹೌಸ್ ಗೆ ನೇರವಾಗಿ ಕಲುಷಿತ ನೀರು ಬರುತ್ತಿದೆ ಎಂದು ಶಂಕರ್ ಗನ್ನಿಯವರು ಪ್ರಸ್ತಾಪಿಸಿದಾಗ ಅವರ ಮಾತಿಗೆ ಉಪಮೇಯರ್ ಲಕ್ಷ್ಮಿ ಶಂಕರ್ ನಾಯಕ್ ಅವರು ಧ್ವನಿ ಗೂಡಿ ಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ನಿತ್ಯ ಮೂವತ್ತೇಳು ಎಂಎಲ್‌ಡಿ ಕೊಳಚೆ ನೀರು ಉತ್ಪತ್ತಿಯಾಗುತ್ತದೆ. ಅದರಲ್ಲಿ ಕೇವಲ 11 ಎಂಎಲ್‌ಡಿ ನೀರು ಮಾತ್ರ ಶುದ್ಧೀಕರಣ ಘಟಕಕ್ಕೆ ಹೋಗುತ್ತಿದೆ. ಉಳಿದ ನೀರು ಎಲ್ಲಿಗೆ ಹೋಗುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಅದನ್ನ ಎಸ್‌ಟಿಪಿ ಘಟಕಕ್ಕೆ ಶುದ್ಧೀಕರಣಕ್ಕೆ ಕಳುಹಿಸುವುದು ನಮ್ಮ ಮುಂದಿನ ಸವಾಲು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಅವರು ಹೇಳಿದ್ದಾರೆ.
Shivamogga City Corporation ತ್ಯಾಜ್ಯ ನೀರು, ಮಳೆ ನೀರು, ಹಾಗೂ ಮಳೆಯ ಕೊಳಚೆ ನೀರು ಎಲ್ಲದಕ್ಕೂ ಬೇರೆ ಬೇರೆ ಸಂಪರ್ಕ ವ್ಯವಸ್ಥೆ ಇದ್ದು, ಯುಜಿಡಿಗೆ ಬಿಡಲಾಗುತ್ತಿದೆ. ಇನ್ನೂ ಶೇ. 30ರಷ್ಟು ಜನ ಯುಜಿಡಿ ಸಂಪರ್ಕ ಹೊಂದಿಲ್ಲ. ಒಳಚರಂಡಿ ವಿಭಾಗವು ಐದು ಹಂತದಲ್ಲಿ ಮಲಿನ ನೀರನ್ನು ಬೇರ್ಪಡಿಸಿ ಶುದ್ಧೀಕರಣ ಗೊಳಿಸಿ ನಂತರ ತುಂಗೆಗೆ ಬಿಡುವ ಕಾರ್ಯ ಮಾಡಬೇಕಿದೆ ಎಂದು ಹೇಳಿದ್ದಾರೆ.
ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ್ ಹಾಜರಿದ್ದರು.