Friday, November 22, 2024
Friday, November 22, 2024

Kannada Rajyotsava ಆಟೋ ಸಂಘದವರು ಏರ್ಪಡಿಸಿದ ಕ್ರಿಕೆಟ್ ಪಂದ್ಯಾವಳಿ ಸ್ತುತ್ಯರ್ಹ- ಡಾ.ವಿಕ್ರಮ್ ಅಮ್ಟೆ

Date:

Kannada Rajyotsava ಪ್ರತಿನಿತ್ಯ ಆಟೋ ವೃತ್ತಿಯಲ್ಲಿರುವ ಚಾಲಕರು ಜಂಜಾಟವೆಲ್ಲಾ ಬದಿಗಿರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ಮಾನಸಿಕ ಹಾಗೂ ದೈಹಿಕ ಒತ್ತಡಗಳನ್ನು ಕಡಿಮೆಗೊಳಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಹೇಳಿದರು.

ಶಿವಮೊಗ್ಗ ನಗರ ಹೊರವಲಯದ ಪಟಾಕಿ ಮೈದಾನದಲ್ಲಿ ಜಿಲ್ಲಾ ಮತ್ತು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ೬೮ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಆಟೋ ಕಪ್-2023 ಕ್ರಿಕೇಟ್ ಪಂದ್ಯಾವಳಿಯನ್ನು ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಆಟೋ ಚಾಲಕರು ಮತ್ತು ಮಾಲೀಕರು ವರ್ಷಪೂರ್ತಿ ಬಹಳಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಅನೂಕೂಲವಾಗಲು ಆಟೋ ಸಂಘದವರು ಅನೋನ್ಯತೆಯಿಂದ ಒಗ್ಗಟ್ಟಾಗಿ ಕ್ರಿಕೇಟ್ ಪಂದ್ಯಾವಳಿ ಯನ್ನು ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿರುವುದು ವಿಶೇಷವಾಗಿದೆ ಎಂದರು.

ರಾಜ್ಯೋತ್ಸವ ಎಂಬುದು ಕೇವಲ ನವೆಂಬರ್‌ಗೆ ಸೀಮಿತಗೊಳಿಸದೇ ವರ್ಷಪೂರ್ತಿ ಆಚರಿಸಬೇಕು. ಕನ್ನಡ ಎಂಬುದು ಮನದಾಳದಲ್ಲಿರುವ ವಿಷಯವಾಗಿರುವ ಹಿನ್ನೆಲೆಯಲ್ಲಿ ನಿತ್ಯವು ಭಾಷೆಯ ಬೆಳವಣ ಗೆಗೆ ಮುಂದಾದರೆ ಕರ್ನಾಟಕದ ಬಗ್ಗೆ ಪ್ರತಿಯೊಬ್ಬರು ಹೆಮ್ಮೆಪಡಬಹುದು ಎಂದು ತಿಳಿಸಿದರು.

ಪ್ರಸ್ತುತ ಆಟೋ ಚಾಲಕರು ವೃತ್ತಿಯಲ್ಲಿ ಉತ್ತಮ ಸೇವೆ ನೀಡುತ್ತಿದ್ದು, ಪ್ರವಾಸಿಗರು ಎಲ್ಲಿಂದಲೇ ಬಂದಿದ್ದರೂ ಮೊದಲು ಆಟೋ ಚಾಲಕರ ಜೊತೆ ಮುಖಾಮುಖಿಯಾಗುತ್ತಾರೆ. ಅದೇ ರೀತಿಯಲ್ಲಿ ಆಟೋ ಚಾಲ ಕರು ಕೂಡಾ ಮಾತೃಭಾಷೆಯಲ್ಲಿ ವ್ಯವಹರಿಸಿ ತೆರಳುವ ವಿಳಾಸಕ್ಕೆ ಕರೆದೊಯ್ಯುವ ಮಹತ್ತರ ಜವಾಬ್ದಾರಿ ಮಾಡುತ್ತಿದ್ದಾರೆ ಎಂದರು.

Kannada Rajyotsava ನಗರ ಆಟೋ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ ಆಟೋ ಚಾಲಕರು ಯಾವುದೇ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೇ ನಿತ್ಯದ ಕಾಯಕದಲ್ಲಿ ತೊಡಗಿದ್ದು ಅಂತಹವರಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಿ ಮನೋಲ್ಲಾಸ ಕೆಲಸ ಮಾಡಲಾಗಿದೆ ಎಂದರು.
ರಾಜ್ಯೋತ್ಸವ ಪ್ರಯುಕ್ತ ಆಟೋ ಸಂಘದ ಒಂದು ದಿನದ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಲಾಗಿದ್ದು ನ.25 ರಂದು ಅಂಧಮಕ್ಕಳ ಪಾಠಶಾಲೆ, ಜೀವನಸಂಧ್ಯಾ, ಅನ್ನಪೂರ್ಣವೃದ್ದಾಶ್ರಮದಲ್ಲಿ ಬೋಜನ ವ್ಯವಸ್ಥೆ ಕಲ್ಪಿಸಿದೆ. ನ.26 ರಂದು ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮನರಂಜನಾ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪಂದ್ಯಾವಳಿಯಲ್ಲಿ ಒಟ್ಟು ವಿವಿಧ ತಾಲ್ಲೂಕುಗಳಿಂದ ಒಟ್ಟು 9 ತಂಡಗಳು ಭಾಗವಹಿಸಿದ್ದು ಪ್ರಥಮ ಸ್ಥಾನಕ್ಕೆ 8 ಸಾವಿರ ಹಾಗೂ ಟ್ರೋಫಿ ಮತ್ತು ದ್ವಿತೀಯ 5 ಸಾವಿರ ಹಾಗೂ ಟ್ರೋಫಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆಟೋ ಸಂಘದ ಅಧ್ಯಕ್ಷ ಉದಯ್‌ಕುಮಾರ್, ನಗರ ಅಧ್ಯಕ್ಷ ರಾಮೇಗೌಡ, ಚಾಲಕರಾದ ನಟರಾಜ್, ಮಂಜುನಾಥ್, ಯಶವಂತ್, ಮೂರ್ತಿ, ಈಶ್ವರ್, ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...