Thursday, June 18, 2026
Thursday, June 18, 2026

Sugar Factory ಶುಗರ್ ಫ್ಯಾಕ್ಟರಿ” ಸಿನಿಮಾ ಟ್ರೈಲರ್ ಬಿಡುಗಡೆಗೆ ರೆಡಿ

Date:

Sugar Factory ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಬರ್ಡ್ಸ್, ಕೌಸಲ್ಯ ಸುಪ್ರಜಾ ರಾಮ ಈ ಸಿನಿಮಾಗಳು ಈ ವರ್ಷವೇ ತೆರೆಗೆ ಬಂದಿವೆ… ಅದೇ ರೀತಿ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ… ಹೌದು ವೀಕ್ಷಕರೇ, ಡಾರ್ಲಿಂಗ್ ಕೃಷ್ಣ ನಟಿಸಿರುವ ಶುಗರ್ ಫ್ಯಾಕ್ಟರಿ ಸಿನಿಮಾವೂ ಬಿಡುಗಡೆಗೊಳ್ಳಲು ರೆಡಿಯಾಗಿದೆ. ಈ ಸಿನಿಮಾದ ಟ್ರೈಲರ್ ನ್ನು ನಟ ನಿಖಿಲ್ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದಾರೆ…

ಸಾಮಾನ್ಯವಾಗಿ ನಟ ಡಾರ್ಲಿಂಗ್ ಕೃಷ್ಣ ಅವರು ಅಭಿನಯಿಸಿರುವ ಚಿತ್ರಗಳಲ್ಲಿ ಎರಡು ನಾಯಕಿಯರು ಇರುವುದು ಸಾಮಾನ್ಯವಾಗಿದೆ. ಇತ್ತೀಚಿಗಷ್ಟೇ ತೆರೆಕಂಡ ಕೃಷ್ಣ ಅವರ ನಟನೆಯ ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲೂ ಎರಡು ನಾಯಕಿಯರು ಇದ್ದರು… ಆದ್ರೆ ಇದೀಗ ತೆರಿಗೆ ಸಿದ್ಧವಾಗಿರುವಂತಹ ಶುಗರ್ ಫ್ಯಾಕ್ಟರಿ ಸಿನಿಮಾದಲ್ಲಿ ಮೂರು ನಾಯಕಿಯರು ಅಭಿನಯಿಸಿದ್ದಾರೆ ಎಂಬುದೇ ವಿಶೇಷವಾಗಿದೆ…

ಇದೇ ತಿಂಗಳ ನವೆಂಬರ್ 24ರಂದು ಶುಗರ್ ಫ್ಯಾಕ್ಟರಿ ಸಿನಿಮಾ ತೆರೆ ಮೇಲೆ ಕಾಣಲಿದೆ… ಈ ಸಿನಿಮಾದ ನಿರ್ದೇಶನವನ್ನು ದೀಪಕ್ ಅರಸ್ ಮಾಡಿದ್ದಾರೆ…

ಸಿನಿಮಾ ಕಥೆಗಳು ಜನರೇಶನ್ ನಿಂದ ಜನರೇಶನ್ ಗೆ ಬದಲಾಗುತ್ತಲೇ ಇರುತ್ತವೆ… ದೀಪಕ್ ಅರಸ್ ನಿರ್ದೇಶಕರು ಕೂಡ ಹೊಸ ರೀತಿಯಲ್ಲಿ ಕಥೆಗಳನ್ನ ತೆರೆಯ ಮೇಲೆ ತರಲು ಪ್ರಯತ್ನಿಸುತ್ತಲೇ ಇರುತ್ತಾರೆ… ಈಗ ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ ಸಿನಿಮಾ ಕೂಡ ಈ ಜನರೇಶನ್ ನ ಕಥೆಯನ್ನು ಹೊಂದಿದೆ… ಈ ಸಿನಿಮಾವೂ ಪಕ್ಕಾ ಲವ್ ಸ್ಟೋರಿ ಆಗಿದ್ದು, ಸಿನಿಪ್ರಿಯರ ಅಚ್ಚು ಮೆಚ್ಚಿನ ಕನ್ನಡ ಸಿನಿಮಾವಾಗಲಿದೆ… ಸಿನಿಮಾದಲ್ಲಿ ಶುಗರ್ ಫ್ಯಾಕ್ಟರಿ ಎಂದರೆ ಸಕ್ಕರೆ ಕಾರ್ಖಾನೆ ಅಲ್ಲ.ಇಲ್ಲಿ ಒಂದು ಪಬ್ ಗೆ ಶುಗರ್ ಫ್ಯಾಕ್ಟರಿ ಎಂದು ಹೆಸರಿಡಲಾಗಿದೆಯಂತೆ… ಪಬ್ ಗೆ ಒಂದು ಪಾತ್ರವಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ. ಈ ಸಿನಿಮಾದಲ್ಲಿ ಅಭಿನಯಿಸಿದ ಡಾರ್ಲಿಂಗ್ ಕೃಷ್ಣ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. ಲವ್ ಮಾಕ್ ಟೆಲ್ 1 ಸಿನಿಮಾ ಬಿಡುಗಡೆಯಾದ ತಕ್ಷಣ ನಾನು ಒಪ್ಪಿದ ಕಥೆ ಇದು. ಈ ಸಿನಿಮಾದಲ್ಲಿ ಪರಿಶುದ್ಧ ಪ್ರೇಮಕಥೆ ಬಗ್ಗೆ ವಿವರಿಸಲಾಗಿದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ…

Sugar Factory ನಟ ಕೃಷ್ಣ ಅವರ ಜೊತೆಯಾಗಿ ಸೋನಲ್ ಮೆಂಥೆರೋ, ರುಹಾನಿ ಶೆಟ್ಟಿ, ಅದ್ವಿತ ಶೆಟ್ಟಿ ಅವರು ನಟಿಸಿದ್ದಾರೆ… ಒಟ್ಟಾರೆಯಾಗಿ ಈಗಿನ ಪ್ರೇಕ್ಷಕರು ಇಷ್ಟಪಡುವಂತಹ ಮನೋರಂಜನೆ ಈ ಸಿನಿಮಾದಲ್ಲಿದೆ…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...