Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಿಗುರು, ಯುವಸೌರಭ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳಿಗೆ ಅರ್ಹ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.
ಚಿಗುರು ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ/ಕರ್ನಾಟಕ/ಹಿoದೂಸ್ಥಾನಿ/ಗಾಯನ, ವಾದ್ಯಸಂಗೀತ, ಜನಪದ ಗೀತೆಗಳು, ಸುಗಮ ಸಂಗೀತ/ವಚನ ಸಂಗೀತ, ಸಮೂಹನೃತ್ಯ/ ನೃತ್ಯರೂಪಕ, ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ ಇತ್ಯಾದಿ ಸಮೂಹ ಕಾರ್ಯಕ್ರಮ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳಿಗೆ 8 ರಿಂದ 14ವರ್ಷದೊಳಗಿನ ಮಕ್ಕಳು ಅರ್ಜಿ ಸಲ್ಲಿಸುವುದು.
ಯುವಸೌರಭ ಕಾರ್ಯಕ್ರಮದಲ್ಲಿ ಜನಪದ ಗೀತೆಗಳು, ಸುಗಮ ಸಂಗೀತ/ವಚನ ಸಂಗೀತ, ಸಮೂಹನೃತ್ಯ/ ನೃತ್ಯರೂಪಕ, ನಾಟಕ, ಜನಪದ ಪ್ರದರ್ಶನ ಕಲಾತಂಡ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ ಇತ್ಯಾದಿ ಸಮೂಹ ಕಾರ್ಯಕ್ರಮ ಸ್ಪರ್ಧೆಗಳಿಗೆ 15 ರಿಂದ 30 ವರ್ಷದೊಳಗಿನ ಯುವಕರು ಅರ್ಜಿ ಸಲ್ಲಿಸುವುದು.
ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ/ ಕರ್ನಾಟಕ/ ಹಿಂದೂಸ್ಥಾನಿ/ ಗಾಯನ, ವಾದ್ಯಸಂಗೀತ, ಜನಪದ ಗೀತೆಗಳು, ಸುಗಮ ಸಂಗೀತ/ವಚನ ಸಂಗೀತ, ಸಮೂಹನೃತ್ಯ/ ನೃತ್ಯರೂಪಕ, ಜನಪದ ಪ್ರದರ್ಶನ ಕಲಾತಂಡ, ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ ಇತ್ಯಾದಿ ಸಮೂಹ ಕಾರ್ಯಕ್ರಮ ಹಾಗೂ ಗಮಕ/ ಕಥಾಕೀರ್ಥನೆ ಸ್ಪರ್ಧೆಗಳಿಗೆ 30 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರು ಅರ್ಜಿ ಸಲ್ಲಿಸುವುದು.
Department of Kannada and Culture ಆಸಕ್ತರು ತಮ್ಮ ವಯಸ್ಸಿನ ದೃಢೀಕರಣದ ದಾಖಲೆ, ಸಂಗೀತ ವಿದ್ಯಾಭ್ಯಾಸದ ಪ್ರಥಮ ದರ್ಜೆ, ಪ್ರೌಢ ದರ್ಜೆ, ವಿದ್ವತ್ ಶ್ರೇಣಿ, ಆಕಾಶವಾಣಿ ಬಿ. ಗ್ರೇಡ್ ಹಾಗೂ ಸರ್ಕಾರದಿಂದ ನೀಡುವ ಪ್ರಶಸ್ತಿ ಪುರಸ್ಕೃತ ದಾಖಲೆಗಳೊಂದಿಗೆ ತಮ್ಮ ಸ್ವವಿವರಗಳನ್ನು ಬರೆದು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ರಂಗಮoದಿರ, ಶಿವಮೊಗ್ಗ ಇವರಿಗೆ ಡಿ.13ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-223354ನ್ನು ಸಂಪರ್ಕಿಸಬಹುದು.