Department of Animal Husbandry ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆಯು 2023-24 ನೇ ಸಾಲಿನಲ್ಲಿ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ಉಳಿಕೆ ಅನುದಾನದಲ್ಲಿ ಮಿಶ್ರತಳಿ ಹಸು ಘಟಕ ಯೋಜನೆ ಅನುಷ್ಠಾನಗೊಳಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಸರ್ಕಾರಿ ನಿಯಮಾನುಸಾರ ಮೀಸಲಾತಿಯಂತೆ ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು.
ಒಂದು ಮಿಶ್ರತಳಿ ಘಟಕದ ವೆಚ್ಚ 65,000 ರೂ. ಇದ್ದು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಪಲಾನುಭವಿಗಳಿಗೆ ಶೇ90. 58500ರೂ. ಸಹಾಯಧನ ಮತ್ತು 6500 ರೂ. ಫಲಾನುಭವಿಗಳಿಗೆ ವಂತಿಗೆ ಅಥವಾ ಬ್ಯಾಂಕಿನ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುವುದು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊದಿರುವ ಮಹಿಳೆಯರಿಗೆ ಶೇ.33.3ರಷ್ಟು ಮತ್ತು ಅಂಗವಿಕಲರಿಗೆ ಶೇ.3 ರಷ್ಟು ಆದ್ಯತೆ ನೀಡಲಾಗುವುದು.
ಆಸಕ್ತ ಫಲಾನುಭವಿಗಳು ಈ ಹಿಂದೆ ಸ್ವತಃ ತಾನೇ ಅಥವಾ ಕೃಷಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು ಇಲಾಖೆಯ ಯಾವುದೇ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಅಧಿಕಾರಿಗಳಿಗೆ ಅಗತ್ಯವಿರುವ ಮಾಹಿತಿ ನೀಡಿ ಶಾಶ್ವತ FRUITS ID(ಗುರುತಿನ ಸಂಖ್ಯೆ) ಪಡೆದು, ಅರ್ಜಿಯೊಂದಿಗೆ ನಮೂದಿಸತಕ್ಕದ್ದು. FRUITS ID(ಗುರುತಿನ ಸಂಖ್ಯೆ) ಹೊಂದಿರುವ ಫಲಾನುಭವಿಗಳು ಅದರಲ್ಲಿ ನಮೂದಿಸಿದ ಮಾಹಿತಿಯನ್ನು ಹೊರತುಪಡಿಸಿ ಉಳಿದ ದಾಖಲಾತಿಗಳನ್ನು ಮಾತ್ರ ಅರ್ಜಿಯೊಂದಿಗೆ ಲಗತ್ತಿಸುವುದು.
Department of Animal Husbandry ಆಸಕ್ತ ಅರ್ಜಿದಾರರು ಆಯಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ರವರಿಂದ ಅರ್ಜಿ ನಮೂನೆ ಪಡೆದು ದಿ:28–11-2023ರ ಸಂಜೆ ೪:೦೦ ಗಂಟೆಯೊಳಗಾಗಿ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಇಲಾಖೆಯ ಉಪ ನಿರ್ದೇಶಕ ಡಾ|| ಶಿವಯೋಗಿ ಬಿ.ಯಲಿರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಯನ್ನು ಆಯಾ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ರವರ ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ. ಸಂಪರ್ಕಿಸಬಹುದಾದ ದೂ.ಸಂ.: ಶಿವಮೊಗ್ಗ ತಾಲ್ಲೂಕು: 9448147113, ಭದ್ರಾವತಿ ತಾಲ್ಲೂಕು: 9482635093, ತೀರ್ಥಹಳ್ಳಿ ತಾಲ್ಲೂಕು: 9448165747
, ಹೊಸನಗರ ತಾಲ್ಲೂಕು: 9448165747,ಸಾಗರ ತಾಲ್ಲೂಕು: 9481255897, ಸೊರಬ ತಾಲ್ಲೂಕು: 9900632880, ಶಿಕಾರಿಪುರ ತಾಲ್ಲೂಕು : 94484381142.