Friday, November 22, 2024
Friday, November 22, 2024

Cricket tournament ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ- ಶಾಸಕ ಎಚ್.ಡಿ.ತಮ್ಮಯ್ಯ

Date:

Cricket tournament ಯುವಕರು ಜೀವನದಲ್ಲಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಕ್ಷೇತ್ರಗಳಲ್ಲಿ ಸ್ವಯಂಪ್ರೇರಿ ತರಾಗಿ ಭಾಗವಹಿಸುವ ಮೂಲಕ ಹೆಚ್ಚು ಕಾಳಜಿವಹಿಸಿದರೆ ಮಾತ್ರ ರಾಷ್ಟçಮಟ್ಟದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಲ್ಲಿ ರಾಣಾ ಸ್ಪೋಟ್ಸ್ ಕ್ಲಬ್ ವತಿಯಿಂದ ರಾಜ್ಯಪ್ರಶಸ್ತಿ ವಿಜೇತೆ ದಿ. ಶ್ರೀಮತಿ ಗೌರಮ್ಮ ಬಸವೇಗೌಡರ ಸ್ಮರಣಾರ್ಥ ಆಯೋಜಿಸಿದ 6ನೇ ಆವೃತ್ತಿಯ ಸಿ.ಪಿ.ಎಲ್. ವೈಟ್‌ಲೆದರ್ ಬಾಲ್ ಕ್ರಿಕೇಟ್ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾ ಕ್ಷೇತ್ರ ಯಾವುದಾದರೇನು ಸೋಲು, ಗೆಲುವು ಎಂಬುದು ಸಾಮಾನ್ಯ ವಿಷಯ. ಕ್ರೀಡಾಪಟುಗಳು ಸೋಲುಂಡಾಗ ಕುಂದದೇ ಮುಂದಿನ ಗೆಲುವಿನ ಬಗ್ಗೆ ಶ್ರಮವಹಿಸಿದರೆ ಯಶಸ್ಸು ಲಭಿಸಲಿದೆ. ಕ್ರೀಡೆಯಲ್ಲಿ ಗೆಲುವ ಮುಖ್ಯವಾಗುವುದಿಲ್ಲ, ಭಾಗವಹಿಸಿ ಪಡೆದ ಅನುಭವವೇ ದೊಡ್ಡದೆಂದು ಪರಿಗಣಿಸಬೇಕು ಎಂದರು.

ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ರಾಣಾ ಸ್ಪೋಟ್ಸ್ ಕ್ಲಬ್ ಲೆದರ್ ಪಂದ್ಯಾವಳಿ ಕ್ರಿಕೇಟ್ ಪಂದ್ಯಾವಳಿ ನಡೆ ಸುತ್ತಾ ಬಂದಿದ್ದು ಮುಂದೆ ಇನ್ನಷ್ಟು ಕ್ರೀಡಾಚಟುವಟಿಕೆಗಳನ್ನು ಆಯೋಜಿಸಲಿ ಎಂದ ಅವರು ಇವರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆಯೊಂದಿಗೆ ಚರ್ಚಿಸಿ ನೆಲಬಾಡಿಗೆಯನ್ನು ರಿಯಾಯಿತಿ ದರದಲ್ಲಿ ದೊರಕಿಸಿಕೊ ಡಲಾಗುವುದು ಎಂದು ಭರವಸೆ ನೀಡಿದರು.

ಈಗಾಗಲೇ ಕ್ರೀಡಾ ಇಲಾಖೆ ನಿರ್ವಹಿಸುವ ಜವಾಬ್ದಾರಿಯನ್ನು ಸ್ಪೋಟ್ಸ್ ಕ್ಲಬ್ ವ್ಯವಸ್ಥಾಪಕರು ಕ್ರೀಡಾಚಟು ವಟಿಕೆಗಳಿಗೆ ಪೂರಕವಾಗಿ ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಸಂತಸದ ಸಂಗತಿ. ಇಂತಹ ವ್ಯವಸ್ಥಾಪಕರ ಸಮಿತಿಗೆ ಕ್ರೀಡಾ ಇಲಾಖೆಯಿಂದ ಸವಲತ್ತು ಒದಗಿಸುವ ಮೂಲಕ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಗೋಪಾಲಕೃಷ್ಣ ಮಾತನಾಡಿ ಜಿಲ್ಲಾ ಆಟದ ಮೈದಾನ ದಲ್ಲಿ ವಾರದ ಎರಡ್ಮೂರು ದಿನಗಳು ಕ್ರಿಕೇಟ್ ಪಂದ್ಯಾವಳಿ ಆಯೋಜನೆಗೊಳ್ಳುತ್ತವೆ. ಇಂತಹ ಕ್ರೀಡಾಪಟುಗಳಿಗೆ ಸೂಕ್ತ ಕ್ರೀಡಾಂಗಣದ ವ್ಯವಸ್ಥೆ ಅವಶ್ಯವಿರುವ ಹಿನ್ನೆಲೆಯಲ್ಲಿ ಸಂಬoಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರೀಡಾಂ ಗಣದ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸಮರ್ಪಕವಾದ ಕ್ರೀಡಾಂಗಣವನ್ನು ಒದಗಿಸಿದ್ದಲ್ಲಿ ಕ್ರೀಡಾಸಕ್ತರು ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಭಾಗವಹಿ ಸಲು ಸಾಧ್ಯ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದರು.

Cricket tournament ರಾಣಾ ಸ್ಪೋಟ್ಸ್ ಕ್ಲಬ್ ಖಜಾಂಚಿ ನಟರಾಜ್ ಮಾತನಾಡಿ ಲೆದರ್‌ಬಾಲ್ ಕ್ರಿಕೇಟ್ ಇಂದಿನಿoದ ನ.26ರತನಕ ಒಟ್ಟು ಆರುದಿನಗಳ ಕಾಲ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಒಟ್ಟು ಐದು ತಂಡ ಗಳು ಪಂದ್ಯಾವಳಿ ನೊಂದಣಿ ಮಾಡಿಕೊಂಡಿದೆ. ಇದೇ ವೇಳೆ ವಸಿಷ್ಟ ಇ-ಸ್ಪೋಟ್ಸ್ ಹಾಗೂ ರಕೀನ್ ಸ್ಪೋಟ್ಸ್ ನಡುವೆ ಮೊದಲ ಪಂದ್ಯಾವಳಿಗೆ ಶಾಸಕರು ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌರಮ್ಮ ಬಸವೇಗೌಡ ಸೊಸೆ ಅರ್ಪಿತಾ ಎಲ್ಲಾ ತಂಡಗಳು ಅತ್ಯುತ್ತಮವಾಗಿ ಆಡುವ ಮೂಲಕ ಗೆಲುವಿಗೆ ಶ್ರಮವಹಿಸಬೇಕು. ಗೌರಮ್ಮನವರ ಹೆಸರಿನಲ್ಲಿ ಸ್ಪೋಟ್ಸ್ ಕ್ಲಬ್ ಪ್ರೀತಿ ಪೂರಕವಾಗಿ ಕ್ರೀಡಾಕೂಟ ಆಯೋಜಿಸಿರುವುದು ಖುಷಿಯ ವಿಚಾರ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪಂದ್ಯಾವಳಿ ಆಯೋಜಿಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್, ಚಿಕ್ಕಮಗಳೂರು ಪ್ರಿಮಿಯರ್ ಲೀಣ್‌ನ ಸದಸ್ಯರಾದ ಪ್ರಕಾಶ್, ಹರೀಶ್ ಮತ್ತಿತರರು ಉಪಸ್ಥಿ ತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...

M.B.Patil 2025 ಫೆಬ್ರವರಿ 11.ಜಾಗತಿಕ ಹೂಡಿಕೆದಾರರ ಸಮಾವೇಶ.ಪೂರ್ವಸಿದ್ಧತೆ- ಸಚಿವ ಎಂ.ಬಿ.ಪಾಟೀಲ್

M.B.Patil 2025ರ ಫೆಬ್ರವರಿ 11 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ...