Deepavali Festival ಕರ್ನಾಟಕದಲ್ಲಿ ದೀಪಾವಳಿಯನ್ನು ಸಾಮಾನ್ಯವಾಗಿ
ಮೂರು ದಿನ ಆಚರಿಸುವುದು ವಾಡಿಕೆಯಲ್ಲಿದೆ.
ನರಕ ಚತುರ್ದಶಿ,ಅಮಾವಾಸ್ಯೆ ಹಾಗೂ ಮೂರನೇ ದಿನವೇ ಬಲಿಪಾಡ್ಯಮಿ.ಈ ಬಲಿಪಾಡ್ಯಮಿಯಿಂದ
ಆರಂಭಗೊಳ್ಳುವ ಕಾರ್ತಿಕಮಾಸ ಪೂರ್ತಿ ದೀಪೋತ್ಸವದ ಮಾಸವಾಗಿದೆ.ಬಲಿಪಾಡ್ಯಮಿಯಂದು ದಾನವ ಅರಸನಾದ ಬಲೀಂದ್ರನನ್ನು ಪೂಜಿಸುತ್ತಾರೆ.
ದಾನವ ರಾಜ ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದನ
ಮೊಮ್ಮಗ ಮಹಾಬಲಿ.ಅಸುರ ಕುಲದಲ್ಲಿ ಹುಟ್ಟಿದ ವಿಷ್ಣುಭಕ್ತ ಪ್ರಹ್ಲಾದನಂತೆಯೇ ಮಹಾಬಲಿಯೂ
ಕೂಡ ವಿಷ್ಣು ಭಕ್ತನಾಗಿದ್ದನು.
ದೇವತೆಗಳನ್ನು ಸೋಲಿಸಿ ಮೂರುಲೋಕಗಳಿಗೂ
ಚಕ್ರವರ್ತಿಎನಿಸಿರುತ್ತಾನೆ.ದೇವತೆಗಳು ಮಹಾವಿಷ್ಣುವಿನಮೊರೆಹೋಗುತ್ತಾರೆ.ಮಹಾವಿಷ್ಣುವು ದೇವತೆಗಳನ್ನುಸಮಾಧಾನಪಡಿಸಿ ದೇವತೆಗಳಿಗೆ ತಪ್ಪಿಹೋದ ಪದವಿಯನ್ನು ಕೊಡಿಸುವುದಾಗಿ ಭರವಸೆ ಕೊಡುತ್ತಾನೆ.ಮೂರು ಲೋಕಗಳನ್ನು ಜಯಿಸಿದ ಬಲಿಯು ಮಹಾಯಾಗವೊಂದನ್ನು ಮಾಡುತ್ತಾನೆ.
ಯಾಗ ಮಾಡುವಾಗ ಯಾಚನೆಮಾಡಿದ ವಸ್ತುಗಳೆಲ್ಲವನ್ನು ಬಂದವರಿಗೆ ದಾನ ಮಾಡುತ್ತಾನೆ.
ಈ ಸಂದರ್ಭದಲ್ಲಿ ಮಹಾವಿಷ್ಣುವು ಬಲಿಚಕ್ರವರ್ತಿಯ
ಭಕ್ತಿಯನ್ನು ಪರೀಕ್ಷಿಸಲು ಪುಟ್ಟ ವಾಮನ ವಟುವಿನ ಅವತಾರದಲ್ಲಿ ಬಲಿಯು ಮಾಡುತ್ತಿದ್ದ ಯಾಗಕ್ಕೆ ಬರುತ್ತಾನೆ.ಬಲಿಯು ವಾಮನನಿಗೆ ನೀನು ಕೇಳಿದ್ದೆಲ್ಲವನ್ನು ಕೊಡುತ್ತೇನೆ ,ನಿನಗೇನು ಬೇಕು ಎಂದು
ಕೇಳಿದಾಗ,ಬಾಲಕ ವಾಮನ ನನಗೆ ಮೂರು ಹೆಜ್ಜೆಗಳಷ್ಟು ಜಾಗವನ್ನು ಕೊಡು ಎಂದು ಕೇಳುತ್ತಾನೆ.
ಬಲಿ ಚಕ್ರವರ್ತಿಯು ವಾಮನನಿಗೆ ಮೂರು ಹೆಜ್ಜೆಗಳಷ್ಟು ಜಾಗ ಕೊಡಲು ಒಪ್ಪುತ್ತಾನೆ.ವಾಮನ ರೂಪದ ಮಹಾವಿಷ್ಣುವು ಎತ್ತರಕ್ಕೆ ಬೆಳೆಯುತ್ತಾನೆ.
ಮೊದಲ ಹೆಜ್ಜೆಯಿಂದ ಭೂಮಿಯನ್ನು ಅಳೆದು ತೆಗೆದುಕೊಳ್ಳುತ್ತಾನೆ.ಎರಡನೇ ಹೆಜ್ಜೆಯಿಂದ ಸ್ವರ್ಗಲೋಕವನ್ನುಅಳೆದುಪಡೆಯುತ್ತಾನೆ.
Deepavali Festival ಮೂರನೆಯ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ವಾಮನನು ಕೇಳಿದಾಗ,ಬಲಿಯು ತನ್ನ ಶಿರದಮೇಲೆ ಇಡುವಂತೆ ಬೇಡುತ್ತಾನೆ.ಮೂರನೇ ಹೆಜ್ಜೆಯನ್ನು ಬಲಿಯ ಶಿರದ ಮೇಲಿಡುತ್ತಿದ್ದಂತೆ,ವಿಷ್ಣುವು ಅವನನ್ನು ಪಾತಾಳಕ್ಕೆ
ತಳ್ಳುತ್ತಾನೆ.ಬಲಿ ಚಕ್ರವರ್ತಿಯ ಭಕ್ತಿ ಮತ್ತು ನಿಷ್ಠೆಗೆ
ಮೆಚ್ಚಿದ ಮಹಾವಿಷ್ಣುವು ಪಾತಾಳಲೋಕವನ್ನು
ಆಳುವಂತೆ ಆಶೀರ್ವದಿಸುತ್ತಾನೆ.ವಿಷ್ಣುವಿನ ಭಕ್ತನಾದ
ಬಲೀಂದ್ರನಿಗೆ ಕಾರ್ತಿಕಮಾಸದ ಪಾಡ್ಯದಿನದಂದು
ಭೂಲೋಕದಲ್ಲಿ ಜನರು ಆರಾಧನೆ ಮತ್ತು ಪೂಜೆಯನ್ನು ಮಾಡುವ ವರವನ್ನು ನೀಡುತ್ತಾನೆ.
ಹಾಗಾಗಿ ದೀಪಾವಳಿ ಪಾಡ್ಯವನ್ನು ಬಲಿಪಾಡ್ಯಮಿ
ಎಂದು ಕರೆಯುವುದಲ್ಲದೆ ಬಲೀಂದ್ರನಿಗೆ ಭಕ್ತಿಯಿಂದ
ಭೂಲೋಕದಲ್ಲಿ ಜನರು ಪೂಜೆಯನ್ನು ಮಾಡುವುದು ರೂಢಿಯಲ್ಲಿದೆ.
ಎಲ್ಲರಿಗೂ ಶೋಭನಕೃತ್ ಸಂವತ್ಸರದ ದೀಪಾವಳಿ
ಎಲ್ಲರಿಗೂ ಶುಭವನ್ನು ತರಲಿ
ಲೇ: ಎನ್.ಜಯಭೀಮ ಜೊಯಸ್.
ಶಿವಮೊಗ್ಗ.