Jalapata Movie ಬಾಕಿ ವಿಚಾರ ಏನಾದರಿರಲಿ. ಇವತ್ತು ಬದುಕಿನ ದಾರಿಯಲ್ಲೊಂದು ಅದ್ಭುತ ನೆನಪಿನ ದಿನ.
ನನ್ನ ನಿರ್ದೇಶನದ ಚಿತ್ರವೊಂದು ಸತತ 25 ನೇ ದಿನದ ಪ್ರದರ್ಶನದ ಸೊಗಸು ಜಮೆಯಾದ ಹೊತ್ತಿದು.
ಇವತ್ತಿನ ಗಮ್ಮತ್ತೆಂದರೆ ಒಂದೇ ದಿನ ಪಕ್ಕಾ ಮಾಸ್ ಮತ್ತು ಪಕ್ಕಾ ಕ್ಲಾಸ್ ಶೋ ಗೆ ಸಾಕ್ಷಿಯಾದೆ.
ಬೆಳಿಗ್ಗೆ ಚಿಕ್ಕಮಗಳೂರಿನ ನಾಗಲಕ್ಷ್ಮೀ ಥಿಯೇಟರ್ ನಲ್ಲಿ 450 ಕ್ಕೂ ಅಧಿಕ ಮಕ್ಕಳ ವೀಕ್ಷಣೆಯ ಶೋ. ನಮ್ಮ ಕಲಾವಿದೆ ರೇಖಾ ಪ್ರೇಂ ಕುಮಾರ್ ದಂಪತಿಗಳ ಮುತುವರ್ಜಿಯಿಂದ ಹೌಸ್ ಫುಲ್ ಶೋ. ಮಕ್ಕಳು ಶಿಳ್ಳೆ , ಕೂಗು ಮತ್ತು ಚಪ್ಪಾಳೆಯೊಂದಿಗೆ ಪಕ್ಕಾ ಮಾಸ್ ಅಟ್ಮಾಸ್ಪಿಯರ್ ಕ್ರಿಯೇಟ್ ಮಾಡಿದ್ದರು. ಹಾಗಂತ ಮಕ್ಕಳು ಕಥೆಯನ್ನೂ ಅದರ ಸಂದೇಶವನ್ನೂ ಅರ್ಥಮಾಡಿಕೊಂಡು ಹೊಸ ಅರಿವಿನೊಂದಿಗೆ ಮರಳಿದರು.
ಇನ್ನೊಂದು ಶೋ ಬೆಂಗಳೂರಿನ ಗೋಪಾಲನ್ ಸಿನಿಮಾಸ್ ನಲ್ಲಿ.
ಈ ಪ್ರದರ್ಶನ ಕ್ಕೆ ನನ್ನ ಗುರುಗಳಾದ ಗಿರೀಶ್ ಕಾಸರವಳ್ಳಿ , ಪ್ರಸಿದ್ಧ ನಿರ್ದೇಶಕ ಪಿ ಶೇಷಾದ್ರಿ , ಪ್ರಸಿದ್ಧ ವಿಜ್ಞಾನ ಬರಹಗಾರ ನಾಗೇಶ್ ಹೆಗ್ಡೆ , ಪ್ರಸಿದ್ದ ಲೇಖಕ ಗೋಪಾಲಕೃಷ್ಣ ಪೈ , ಪ್ರಸಿದ್ಧ ಲೇಖಕ ಮಹಾಬಲ ಮೂರ್ತಿ ಕೊಡ್ಲೆಕೆರೆ ಮಲೆನಾಡು ಮೂಲದ ಪ್ರಸಿದ್ಧ ಉದ್ಯಮಿ ಹೊದಲ ಚಂದ್ರಶೇಖರ , ಪ್ರಸಿದ್ಧ ಬರಹಗಾರ್ತಿಯರಾದ ಎಂ ಆರ್ ಕಮಲ , ಮಮತಾ ಅರಸಿಕೆರೆ , ಸುಪ್ರಸಿದ್ಧ ಸುಗಮ ಸಂಗೀತ ಸಂಯೋಜಕ ಉಪಾಸನಾ ಮೋಹನ್ , ಯುವ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಮೊದಲಾದ ದಿಗ್ಗಜರು ಆಗಮಿಸಿದ್ದರು.
ಹಾಗೇ ಅತ್ಯುತ್ತಮ ಜನಸಂದಣಿಯೂ ಪ್ರದರ್ಶನವನ್ನು ಚಂದಗೊಳಿಸಿತು.
ಕೊನೆಯಲ್ಲಿ ಇಂಡಸ್ ಹರ್ಬ್ಸ್ ನ ಹುಡುಗರು ಒಂದು ಚಂದದ ಸೆಲೆಬ್ರೇಷನ್ ಕೂಡಾ ಇಟ್ಟುಕೊಂಡಿದ್ದರು.
Jalapata Movie ಬೆಳಗ್ಗಿನಿಂದ ಇದಕ್ಕಾಗಿ ನಿರಂತರ ಪ್ರಯಾಣ ಮಾಡಿದ್ದ ದಣಿವನ್ನು ಈ ಎಲ್ಲಾ ಸಂಭ್ರಮಗಳು ಮರೆಮಾಚಿದವು. ಚಂದ ಚಂದ…..
Jalapata Movie ಜಲಪಾತ -25 ಸಿನಿಮಾ ನಿರ್ದೇಶಕ ರಮೇಶ್ ಬೇಗಾರ್ ಹರ್ಷ
Date: