Monday, February 2, 2026
Monday, February 2, 2026

Rotary Club Shivamogga ಸಾಂಸ್ಕೃತಿಕ ಶ್ರೇಷ್ಠತೆಯ ಅರಿವು ತುಂಬಾ ಮುಖ್ಯ

Date:

Rotary Club Shivamogga ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಸ್ಕೃತಿ ಪರಂಪರೆಯ ಅನಾವರಣ ಹೆಚ್ಚು ಸಾಧ್ಯವಾಗಲಿದ್ದು, ಮುಂದಿನ ಪೀಳಿಗೆಗೆೆ ಸಾಂಸ್ಕೃತಿಕ ಶ್ರೇಷ್ಠತೆಯ ಅರಿವು ಮೂಡಿಸುವುದು ಮುಖ್ಯ ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ರಮ್ಯದೋಳ್ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೀತಿ ವಿಶ್ವಾಸ ಹೆಚ್ಚಿಸಿರುವುದರ ಜತೆಯಲ್ಲಿ ಮಾನಸಿಕವಾಗಿ ಸದೃಢವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆ ಸ್ನೇಹ ಪ್ರೀತಿ ಸೇವೆಯ ಜೊತೆಗೆ ಸದಸ್ಯರ ಮನೋರಂಜನೆಯು ಅತಿ ಮುಖ್ಯ. ರೋಟರಿ ಸದಸ್ಯರನ್ನು ಸಾಕಷ್ಟು ಪ್ರತಿಭೆ ಇದ್ದು, ಕೆಲವರು ಕಿರುತೆರೆ ಚಲನಚಿತ್ರದಲ್ಲಿ ಅಭಿನಯಿಸಿದಂತ ಉದಾರಣೆಗಳಿವೆ. ರೋಟರಿ ಸದಸ್ಯರು ಇಂತಹ ವೇದಿಕೆಗಳನ್ನ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ. ಭಜರಂಗಿ 2 ಚಲನಚಿತ್ರ ನಟರಾದ ಚೆಲುವರಾಜ್ ಸಿಎಸ್ ಮಾತನಾಡಿ, ಪ್ರತಿಭೆ ಪ್ರತಿಯೊಬ್ಬರ ಸ್ವತ್ತು. ಅದನ್ನು ಅನಾವರಣ ಮಾಡಲು ಬೇಕಾಗುವ ಛಲ ಪರಿಶ್ರಮ ಮುಖ್ಯವಾಗುತ್ತದೆ. ಇಂತಹ ವೇದಿಕೆಯಿಂದ ಸಾಕಷ್ಟು ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಎಲ್ಲರಿಗೂ ಇಂತಹ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳಿವೆ. ರೋಟರಿ ಸೇವಾ ಕಾರ್ಯಗಳನ್ನು ಪ್ರಪಂಚಾದ್ಯಂತ ನೋಡುತ್ತಿದ್ದೇವೆ. ಮನುಕುಲದ ಸೇವೆಯಲ್ಲಿ ರೋಟರಿಯ ಪಾತ್ರ ತುಂಬಾ ಮುಖ್ಯವಾಗಿದೆ. ಈ ದಿನ ನಡೆಯುವ ವಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಜನರಲ್ಲೂ ಚೈತನ್ಯ ಮೂಡಿಸಿದೆ. ಜಿಲ್ಲಾ ಮಟ್ಟದ ಸಂಸ್ಕೃತಿಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

Rotary Club Shivamogga ಶಿವಮೊಗ್ಗ ರಿವರ್‌ಸೈಡ್ ಕ್ಲಬ್ಬಿನ ಸಾರಥ್ಯದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ವಲಯ 10 ಮತ್ತು 11ರ ಕ್ಲಬ್‌ಗಳ ಸಹಕಾರದಿಂದ ಕಾರ್ಯಕ್ರಮ ನಡೆಯುತ್ತಿದೆ. ಶಿವಮೊಗ್ಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿವರ್ ಸೈಡ್ ಕ್ಲಬ್ ಅಧ್ಯಕ್ಷ ಎಸ್ ಮಂಜುನಾಥ್ ಮಾತನಾಡಿದರು.
ವೇದಿಕೆಯಲ್ಲಿ ವಲಯ 10ರ ಸಹಾಯಕ ಗವರ್ನರ್ ರಾಜೇಂದ್ರ ಪ್ರಸಾದ್, ವಲಯ 11ರ ಸಹಾಯಕ ಗವರ್ನರ್ ರವಿ ಕೊಟೋಜಿ, ರೋಟರಿ ರಿವರ್‌ಸೈಡ್ ಕಾರ್ಯದರ್ಶಿ ಟಿ.ಎಂ.ಮಂಜುನಾಥ್, ಜಿಲ್ಲಾ ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷ ಕೆಪಿ ಶೆಟ್ಟಿ, ಕಾರ್ಯಕ್ರಮ ಸಂಚಾಲಕ ಎಂ ಜಗನ್ನಾಥ್, ವಲಯ ಸೇನಾನಿಗಳು ಎಚ್.ಎಸ್. ಮೋಹನ್, ಸಿಎನ್ ಮಲ್ಲೇಶ್, ಧರ್ಮೇಂದ್ರ ಸಿಂಗ್, ಕೆ ಟಿ ಚಂದ್ರಪ್ಪ, ಮಹೇಶ್ ಎ ಹಾಗೂ ಮಾಜಿ ಸಹಾಯಕ ಗವರ್ನರ್ ಜಿ ವಿಜಯಕುಮಾರ್, ವಲಯ ಸಂಯೋಜಕ ಎಸ್ ಪಿ ಶಂಕರ್, ವಲಯ ತರಬೇತುದಾರ ಎಂ.ಪಿ.ಆನಂದಮೂರ್ತಿ, ಡಾ. ಗುಡದಪ್ಪ ಕಸಬಿ, ಮಂಜುನಾಥ್ ರಾವ್ ಕದಂ, ಧನರಾಜ್, ವಲಯ 10 /11ರ ಎಲ್ಲಾ ಕ್ಲಬ್ಬಿನ ಅಧ್ಯಕ್ಷರು ಕಾರ್ಯದರ್ಶಿಗಳು ಕುಟುಂಬದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...