Thursday, December 18, 2025
Thursday, December 18, 2025

KSRTC Bus ಯಗಟಿ ಹೋಬಳಿ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಕಲ್ಪಿಸಲು ಕರವೇ ಒತ್ತಾಯ

Date:

KSRTC Bus ಕಡೂರು ತಾಲ್ಲೂಕಿನ ಯಗಟಿ ಹೋಬಳಿಗೆ ಸೂಕ್ತ ಸಮಯಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಕರವೇ ಮುಖಂಡರುಗಳು ಕಡೂರು ಕೆ.ಎಸ್.ಆರ್.ಟಿ.ಸಿ. ಘಟಕದ ವ್ಯವಸ್ಥಾಪಕ ಪುಟ್ಟಸ್ವಾಮಿ ಅವರಿಗೆ ಗುರುವಾರ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಕರವೇ ಕಡೂರು ಅಧ್ಯಕ್ಷ ಎಂ.ಸತೀಶ್ ಈಗಾಗಲೇ ಹಲವು ತಿಂಗಳಿನಿoದ ಯಗಟಿಗೆ ಸರ್ಕಾರಿ ಬಸ್ ವ್ಯವಸ್ಥೆಯಿಲ್ಲದೇ ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ. ಇದೀಗ ಕೆಲವು ದಿನಗಳ ಬಳಿಕ ಶಾಲಾ-ಕಾಲೇಜುಗಳು ರಜೆಗಳು ಮುಗಿಯುವ ಹಂತಕ್ಕೆ ತಲುಪಿಸಿದ್ದು ಈ ಸಮಯದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿದರೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಬಹುತೇಕ ಯಗಟಿ ಹೋಬಳಿಯ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರಿಗೆ ಸಂಚರಿಸುವ ಯಗಟಿ ಮುಖ್ಯದ್ವಾರವಾ ಗಿದೆ. ಇಲ್ಲಿಂದ ಕಡೂರು, ತರೀಕೆರೆ, ಶಿವಮೊಗ್ಗ ಹಾಗೂ ಬೆಂಗಳೂರಿಗೆ ತೆರಳಲು ಇದೇ ಯಗಟಿ ಗ್ರಾಮಕ್ಕೆ ಬಂದು ತೆರಳಬೇಕಾಗಿದೆ. ಆದರೆ ಇಂತಹ ಹೋಬಳಿಗೆ ಸರ್ಕಾರಿ ಬಸ್ ವ್ಯವಸ್ಥೆಯಿಲ್ಲದೇ ಸಾರ್ವಜನಿಕರು ಖಾಸಗೀ ಬಸ್ ಗಳ ಮೋರೆ ಹೋಗಬೇಕಾಗಿದೆ ಎಂದು ಹೇಳಿದರು.

ಸೂಕ್ತ ಸಮಯಕ್ಕೆ ಸರ್ಕಾರಿ ಬಸ್‌ಗಳು ಬಾರದಿರುವುದು ಹಾಗೂ ಕಾಟಾಚಾರಕ್ಕೆ ಬಿಡುವ ಸ್ಥಿತಿ ಯಗಟಿ ಹೋಬಳಿಗೆ ನಿರ್ಮಾಣವಾಗಿದ್ದನ್ನು ಗಮನಿಸಿ ತಾಲ್ಲೂಕು ಕರವೇ ವತಿಯಿಂದ ಸಂಬoಧಪಟ್ಟ ಕೆ.ಎಸ್.ಆರ್. ಟಿ.ಸಿ. ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾ ಧಾನ ಹೊರಹಾಕಿದರು.

ಇದೇ ವೇಳೆ ಕಡೂರು, ಬೀರೂರು ಮತ್ತು ಯಗಟಿ ಮಾರ್ಗವಾಗಿ ಉಡುಗೆರೆಗೆ ಸಂಪರ್ಕ ಕಲ್ಪಿಸುವ ಹಾಗೂ ಸ್ಥಗಿತಗೊಂಡಿದ್ದ ಯಗಟಿ, ಬೆಂಗಳೂರು ರಾತ್ರಿ ಸಮಯದ ಬಸ್ಸನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಪುನರಾರಂ ಭಿಸುವಂತೆ ಒತ್ತಾಯಿಸಲಾಯಿತು.

KSRTC Bus ಸಂದರ್ಭದಲ್ಲಿ ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ಎಂ.ಭರತ್, ಸದಸ್ಯರಾದ ವೈ ಜೆ ಪ್ರೃಥ್ವಿ. ಮಂಜುನಾಥ್ ವೈ ಹೆಚ್., ನಾಗರಾಜ್ ವೈ ಟಿ. ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿಯವರ ದ್ವೇಷ ರಾಜಕಾರಣ‌ ನ್ಯಾಯದೇವತೆಯೆದುರು ಸೋತಿದೆ- ಸಿದ್ಧರಾಮಯ್ಯ

CM Siddharamaih ಬಿಜೆಪಿಯವರ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋತಿದೆ....

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...