District Consumer Disputes Redressal Commission ಶಿವಮೊಗ್ಗದ ಗೋವಿಂದನ್ ನಾಯರ್ ಎಂಬುವವರು ತಮ್ಮ ವಿದ್ಯುತ್‌ಚಾಲಿತ ಟಾಟಾ ಕಾರಿನ ವಿಮೆಯನ್ನು ದಿ:೦
06/11/2022 ರಿಂದ ದಿ:05/10/2023ರ ಅವಧಿಗೆ ಮೆಚೋಲಮಂಡಲಮ್ ಜನರಲ್ ಇನ್ಸೂರೆನ್ಸ್ ಕಂಪನಿಯಿಂದ ಪಡೆದಿದ್ದು, ದಿ: 26/11/2020 ರಂದು ತಮ್ಮ ಮನೆಯ ಪೋರ್ಟಿಕೋದಲ್ಲಿ ನಿಲ್ಲಿಸಿದ್ದ ಕಾರಿಗೆ ವಿದ್ಯುತ್ ಚಾರ್ಜಿಂಗ್‌ಗಾಗಿ ಚಾರ್ಜರ್‌ನ್ನು ಅಳವಡಿಸಿದ್ದು, ಆಕಸ್ಮಿಕದಿಂದ ವಿದ್ಯುತ್ ಚಾರ್ಜರ್‌ಗೆ ಹಾನಿಯಾಗಿದೆ. ಈ ಬಗ್ಗೆ ವಿಮೆ ಪರಿಹಾರ ಕೋರಿ ಕಾರಿನ ಮಾಲೀಕರು ಇನ್ಸೂರೆನ್ಸ್ ಕಂಪನಿಗೆ ಸಲ್ಲಿಸಿದ ಕ್ಲೈಮ್ ಅನ್ನು ಪುರಸ್ಕರಿಸದ ಕಾರಣ, ಇನ್ಸೂರೆನ್ಸ್ ಸಂಸ್ಥೆಯ ವಿರುದ್ಧ ಸೇವಾ ನ್ಯೂನ್ಯತೆ ಆರೋಪಿಸಿ ಮತ್ತು ಪರಿಹಾರ ಕೋರಿ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
District Consumer Disputes Redressal Commission ಈ ಬಗ್ಗೆ ಎರಡೂ ಪಕ್ಷಗಾರರ ವಿಚಾರಣೆ ನಡೆಸಿದ ಆಯೋಗವು ಇನ್ಸೂರೆನ್ಸ್ ಕಂಪನಿ ವಿಮೆ ಪರಿಹಾರ ಒದಗಿಸುವಲ್ಲಿ ಸೇವಾ ನ್ಯೂನ್ಯತೆ ಎಸಗಿರುವುದು ದೃಢಪಟ್ಟ ಕಾರಣ ಮೆಟೋಲಮಂಡಲಮ್, ಜನರಲ್ ಇನ್ಸೂರೆನ್ಸ್ ಕಂಪನಿಯವರು ವಿದ್ಯುತ್ ಚಾರ್ಜರ್ ಬಾಬು ರೂ.34,840/-ಗಳನ್ನು ಆದೇಶ ದಿನಾಂಕದಿಂದ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇಕಡ 7% ರಂತೆ ಬಡ್ಡಿಯೊಂದಿಗೆ ಪಾವತಿಸಲು ಹಾಗೂ ರೂ.10,000/-ಗಳನ್ನು ದೂರುದಾರರಿಗೆ ಆದ ಮಾನಸಿಕ ಹಿಂಸೆಗಾಗಿ ಮತ್ತು ರೂ.10,000/-ಗಳನ್ನು ವ್ಯಾಜ್ಯ ವೆಚ್ಚವಾಗಿ ಆದೇಶ ದಿನಾಂಕದಿಂದ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇಕಡ 10% ರಂತೆ ಬಡ್ಡಿಯೊಂದಿಗೆ ಪಾವತಿಸುವಂತೆ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ, ಬಿ. ಪಟ್ಟಣಶೆಟ್ಟಿ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಇವರನ್ನು ಒಳಗೊಂಡ ಪೀಠವು ಆದೇಶಿಸಿದೆ.