Kannada Rajyotsava ಕನ್ನಡ ರಾಜ್ಯೋತ್ಸವ ಸುವರ್ಣ ಮಹೋತ್ಸವ ಸಂಭ್ರಮಾಚರಣೆಗಾಗಿ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿರುವ ಭಾವೈಕ್ಯ ಗೀತೆಗಳಿಗೆ ಸಮೂಹ ನೃತ್ಯ ವೈಭವ ಕಾರ್ಯಕ್ರಮ ರೂಪಿಸಲು ಯೋಚಿಸಲಾಗಿದೆ. ಮಕ್ಕಳು, ಯುವಕರು, ಮಹಿಳೆಯರು, ಹಿರಿಯರು ಪ್ರತ್ಯೇಕ ತಂಡಕಟ್ಟಿಕೊಂಡು ನೃತ್ಯ ವೈಭವದಲ್ಲಿ ಭಾಗವಹಿಸಲು ಅವಕಾಶವಿದೆ.
ಆಸಕ್ತಿಯಿರುವವರು ಹಾಡು, ನೃತ್ಯಕ್ಕೆ ಬೇಕಾಗುವ ವಸ್ತ್ರ ವಿನ್ಯಾಸ ಎಲ್ಲವನ್ನೂ ತಾವೇ ಒದಗಿಸಿಕೊಳ್ಳಬೇಕು. ಸಮೂಹದ ಎಲ್ಲರನ್ನೂ ಒಳಗೊಂಡು ಕಾರ್ಯಕ್ರಮ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.
Kannada Rajyotsava ರಾಜ್ಯೋತ್ಸವ ಸಂಭ್ರಮಿಸಲು, ಅರ್ಥಪೂರ್ಣ ಗೊಳಿಸಲು ಎಲ್ಲರೂ ಕೂಡಿ ಕಾರ್ಯಕ್ರಮ ನಡೆಸೋಣ. ಎಲ್ಲರೂ ಭಾಗವಹಿಸಲು ಪ್ರಯತ್ನ ಮಾಡಿರೆಂದು ಡಿ. ಮಂಜುನಾಥ ಮನವಿ ಮಾಡಿದ್ದಾರೆ.
ಆಸಕ್ತಿಯಿರುವವರು ಅಕ್ಟೋಬರ್ 30 ರೊಳಗೆ ದೂರವಾಣಿ ಸಂಖ್ಯೆ, 9449552795 ಸಂಪರ್ಕ ಮಾಡಿ ಮಾಹಿತಿ ನೀಡಲು ಕೋರಿದ್ದಾರೆ.