Wednesday, December 17, 2025
Wednesday, December 17, 2025

Department of Social Welfare ದೀಕ್ಷಾ ಭೂಮಿ ಯಾತ್ರಿಕರು ಅಲ್ಲಿನ ಆದರ್ಶಗಳನ್ನೆಲ್ಲರಿಗೂ ತಿಳಿಸಬೇಕು- ಎಚ್.ಡಿ.ತಮ್ಮಯ್ಯ

Date:

Department of Social Welfare ಅಂಬೇಡ್ಕರ್ ದೀಕ್ಷಾಭೂಮಿ ಯಾತ್ರೆಗೆ ತೆರಳುವವರು ಕೇವಲ ಭೇಟಿ ನೀಡಿ ವಾಪಸಾದರೆ ಸಾಲದು. ಅಲ್ಲಿರುವ ಆದರ್ಶಗಳನ್ನು ಪ್ರತಿಯೊಬ್ಬರಲ್ಲೂ ತಿಳಿಸುವ ಕೆಲಸ ಮಾಡಿದರೆ ಪ್ರವಾಸಕ್ಕೆ ನಿಜವಾದ ಅರ್ಥ ಮೂಡಲು ಸಾಧ್ಯ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಾಲ್ಕು ದಿನಗಳ ಕಾಲ ನಾಗಪುರದ ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಏರ್ಪಡಿಸಿದ್ದ ಪ್ರವಾಸಕ್ಕೆ ಭಾನುವಾರ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ಅಪರೂಪದ ಪ್ರವಾಸ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ಇದರಿಂದ ಜನರು ಬುದ್ಧನ ಜೀವನ ಚರಿತ್ರೆಯನ್ನು ತಿಳಿಯಲು ಸಾಧ್ಯವಾಗಲಿದೆ. ಬುದ್ಧನ ನಾಡಿಗೆ ಪ್ರವಾಸ ತೆರಳು ವವರು ಬುದ್ಧನ ವಿಚಾರಧಾರೆ ಮತ್ತು ಹಾಕಿಕೊಟ್ಟ ದಾರಿಯಲ್ಲಿಯೇ ಸಾಗಬೇಕು ಎಂದು ತಿಳಿಸಿದರು.

ಗೌತಮ ಬುದ್ಧನ ತತ್ವಗಳನ್ನು ಅಳವಡಿಸಿಕೊಳ್ಳುವ ಕೆಲಸ ಪ್ರತಿಯೊಬ್ಬರು ಮಾಡಬೇಕು. ನಿದ್ದೆಯಿಂದ ಎದ್ದ ವನೇ ಬುದ್ಧ, ಅತಿ ಜಾಗೃತ ಮನಸ್ಸಿನವ, ಜ್ಞಾನಿ ಹಾಗೂ ಬೇರೆಯವರಿಗೆ ನೋವುಂಟು ಮಾಡದವರು ತಮ್ಮ ಇಡೀ ಬದುಕನ್ನು ಸಮಾಜಕ್ಕೆ ಮುಡುಪಾಗಿಟ್ಟವರ ಮಾರ್ಗದರ್ಶನದ ಹಾದಿಯಲ್ಲಿ ಇಂದಿನ ಜನತೆ ಮುಂದುವರೆಯ ಬೇಕು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಪ್ರವಾಸದಿಂದ ಜ್ಞಾನಾರ್ಜನೆ ಮಾಡಿಕೊಂಡು ಬುದ್ಧನ ವಿಚಾರಧಾರೆ ಪಸರಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಜೊತೆಗೆ ನೀವುಗಳೇ ಬುದ್ಧನ ಕುರಿತಾದ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್ ಮಾತನಾಡಿ ನಾಗಪುರಕ್ಕೆ ಜಿಲ್ಲೆಯಿಂದ ನಾಲ್ಕು ಬಸ್‌ಗಳಲ್ಲಿ 160 ಮಂದಿ ಪ್ರಯಾಣ ಆರಂಭಿಸಿದ್ದಾರೆ.

Department of Social Welfare ಚಿಕ್ಕಮಗಳೂರು ತಾಲೂಕಿನಿಂದಲೇ ಎರಡು ಬಸ್, ಮೂಡಿಗೆರೆ ಒಂದು ಬಸ್ ಹಾಗೂ ಕೊಪ್ಪ, ಶೃಂಗೇರಿ, ಕಡೂರು, ಅಜ್ಜಂಪುರ, ನರಾಪುರ ಭಾಗದಿಂದ ಒಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಜೊತೆಗೆ ಪ್ರವಾಸಕ್ಕೆ ಹೋಗುವವರೊಂದಿಗೆ ಓರ್ವ ನೋಡಲ್ ಅಧಿಕಾರಿಯನ್ನೂ ನಿಯೋ ಜನೆ ಮಾಡಿ ಕಳುಹಿಸಿಕೊಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಡಿ.ರೇವಣ್ಣ, ದಲಿತ ಮುಖಂಡ ರಾದ ಮರ್ಲೆ ಅಣ್ಣಯ್ಯ, ಆಲ್ದೂರ್ ನವರಾಜ್, ಆಲ್ದೂರ್ ಗಣೇಶ್, ಯಲಗುಡಿಗೆ ಹೊನ್ನಪ್ಪ ಮತ್ತಿತರರು ಹಾಜರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...