Chandragutti Sri Renukamba Devi ಚಂದ್ರಗುತ್ತಿ ಶ್ರೀ ರೇಣುಕಾಂಬ ದಸರಾ ಉತ್ಸವಕ್ಕೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ
ಎಸ್. ಮಧು ಬಂಗಾರಪ್ಪ ಅವರು ಚಾಲನೆ ನೀಡಿದರು.
ನಂತರದಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ಹಬ್ಬ ಹರಿದಿನಗಳು ಬಂದರೆ ನಾವು ಒಗ್ಗೂಡಿ ಮಾಡಿದರೆ ಆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ.
ಸಿಗಂದೂರು ಶ್ರೀ ಕ್ಷೇತ್ರದ ಉದಾಹರಣೆಯನ್ನು ತೆಗೆದುಕೊಂಡು ಆ ಕ್ಷೇತ್ರದಲ್ಲಿ ಯಾವುದೇ ರೀತಿಯ ಒಂದು ಧರ್ಮದವರು ಅಥವಾ ಒಂದು ಜಾತಿಯವರು ಹೋಗುವುದಿಲ್ಲ.
ಅದೇ ರೀತಿಯೂ ಕೂಡ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಭಕ್ತರು ಕೂಡ ಬರುತ್ತಾರೆ. ಇದರಲ್ಲಿ ಯಾವುದೇ ರೀತಿಯ ಜಾತಿ ಧರ್ಮಗಳು ಇರುವುದಿಲ್ಲ. ಬಂದಂತ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಗಳು ಕೂಡ ನಾವು ಒದಗಿಸಿಕೊಡು ಬೇಕಾಗುತ್ತದೆ. ಕಾರ್ಯಕ್ರಮಗಳಲ್ಲಿ ಎಲ್ಲರೂ ಒಗ್ಗೂಡಿ ಕೈಜೋಡಿಸುವಂತ ಕಾರ್ಯಕ್ರಮ ಆಗಬೇಕೆ ಹೊರತು ದ್ವೇಷದ ರಾಜಕ್ಷೀಯ ನಡೆಯಬಾರದು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಕ್ಷೇತ್ರದಲ್ಲಿ ಈ ಚಂದ್ರಗುತ್ತಿ ಅಭಿವೃದ್ಧಿ ಆಗದೆ ಇರುವುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಇನ್ನು ಮುಂದೆ ನಾನು ಶ್ರಮಿಸುವುದಾಗಿ ಹೇಳಿದರು
Chandragutti Sri Renukamba Devi ನಂತರ ಮಾತನಾಡಿದ ಶ್ರೀ ಸಿಗಂದೂರು ಧರ್ಮದರ್ಶಿಗಳಾದ ರಾಮಪ್ಪನವರು
ಯಾವುದೇ ರೀತಿಯ ಒಂದು ಕಾರ್ಯಕ್ರಮ ಮಾಡಬೇಕಾದರೆ ತುಂಬಾ ಕಷ್ಟಗಳು ಅಡಚಣೆಗಳು ಆಗುತ್ತವೆ. ಕಾರ್ಯಕ್ರಮ ಮಾಡಿದಾಗ ಹೋಮ ಹವನಗಳು ಮಾಡಿದರೆ ಶಕ್ತಿ ಬರುತ್ತದೆ. ಎಂದು ಹೇಳುತ್ತಾರೆ ಆದರೆ ಇಂತಹ ಕಾರ್ಯಕ್ರಮ ಮಾಡಿದ್ದಾಗ ಕೂಡ ಕಾರ್ಯಕ್ರಮಕ್ಕೆ ಶಕ್ತಿ ಬರುತ್ತದೆ. ಒಂದು ಊರಿನಲ್ಲಿ ಉತ್ತಮ ದೇವಸ್ಥಾನ ಇದ್ದರೆ ಆ ಊರು ಯಾವಾಗಲೂ ಅಭಿವೃದ್ಧಿಯಲ್ಲಿ ಇರುತ್ತದೆ ಎಂದು ಹೇಳಿದರು.