Saturday, December 6, 2025
Saturday, December 6, 2025

Heavy and Medium Industry ಉದ್ಯಮ ಸ್ಥಾಪನೆಗೆ ಪಡೆದಿರುವ ನಿವೇಶನಗಳ ಬಾಬ್ತು ₹4248 ಕೋಟಿ ಬಾಕಿ

Date:

Heavy and Medium Industry ಉದ್ಯಮ ಸ್ಥಾಪನೆಯ ಉದ್ದೇಶಕ್ಕೆಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ (ಕೆಐಎಡಿಬಿ) ಇದುವರೆಗೆ ಹಂಚಿರುವ ನಿವೇಶನಗಳಿಂದ 4,248 ಕೋಟಿ ರೂ.ಗಳಷ್ಟು ಬೃಹತ್ ಬಾಕಿ ಹಣ ಬರಬೇಕಿದೆ. ಇದನ್ನು ಮುಂದಿನ ನಾಲ್ಕು ತಿಂಗಳಲ್ಲಿ ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಗಡುವು ವಿಧಿಸಿದ್ದಾರೆ.

ಕೆಐಎಡಿಬಿ ಸ್ಥಿತಿಗತಿ ಕುರಿತು ಚಿಂತಿಸಲು ಅದರ ಸಿಇಒ ಸೇರಿದಂತೆ ಇನ್ನಿತರ ಉನ್ನತಾಧಿಕಾರಿಗಳ ಜತೆ ಶುಕ್ರವಾರ ಸುದೀರ್ಘ ಸಭೆ ನಡೆಸಿದ ಅವರು, ಈ ಎಚ್ಚರಿಕೆ ನೀಡಿದ್ದಾರೆ. ಇದರಲ್ಲಿ ವಿಫಲರಾದರೆ ಮಂಡಲಿಯ ಕಾರ್ಯದರ್ಶಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, `ಕೆಐಎಡಿಬಿ ಆರಂಭವಾದಾಗಿನಿಂದಲೂ ಈ ಸಮಸ್ಯೆ ಇದೆ. ಈಗಿನ ಅಂಕಿಅಂಶಗಳ ಪ್ರಕಾರ, ಮಂಡಲಿಯು ಮಂಜೂರು ಮಾಡಿರುವ 5,932 ಕೈಗಾರಿಕಾ ಘಟಕಗಳಿಂದ 4,248 ಕೋಟಿ ರೂ. ಬರಬೇಕಾಗಿದೆ. ಇದರಲ್ಲಿ ಸಾಮಾನ್ಯ ವರ್ಗಗಳ ಅಡಿಯಲ್ಲಿ 2,825 ಕೋಟಿ ರೂ. ಮತ್ತು ಎಸ್ಸಿ-ಎಸ್ಟಿ ವರ್ಗಗಳ ಅಡಿಯಲ್ಲಿ 741 ಕೋಟಿ ರೂ. ಬಾಕಿ ಉಳಿದಿದೆ. ಇದರ ಜತೆಗೆ ಎಸ್ಸಿ-ಎಸ್ಟಿ ವರ್ಗಗಳಿಗೆ ನೀಡುವ ಸಬ್ಸಿಡಿ ಬಾಬ್ತಿನಲ್ಲಿ 680 ಕೋಟಿ ರೂ. ಹಾಗೆಯೇ ನಿಂತಿದೆ. ಇದನ್ನೆಲ್ಲ ವಸೂಲು ಮಾಡದಿದ್ದರೆ ಕೆಐಎಡಿಬಿಯನ್ನೇ ಮುಚ್ಚಬೇಕಾದ ಸ್ಥಿತಿ ಬರುತ್ತದೆ ಅಷ್ಟೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕೆಐಎಡಿಬಿಯಿಂದ ನಿವೇಶನಗಳನ್ನು ಪಡೆದಿರುವವರಲ್ಲಿ ಎಷ್ಟೋ ಜನ ಈ ನಿವೇಶನಗಳನ್ನು ಹಾಗೆಯೇ ಬಿಟ್ಟುಕೊಂಡಿದ್ದಾರೆ. ಶೇ 75-80ರಷ್ಟು ಹಣ ಪಾವತಿಸಿ ಆಬ್ಸಲ್ಯೂಟ್ ಸೇಲ್ ಡೀಡ್ ಮಾಡಿಕೊಳ್ಳಬೇಕು. ಈ ಬಾಬತ್ತಿನಲ್ಲೇ ಕೆಐಡಿಬಿಗೆ 2,100 ಕೋಟಿ ರೂ. ಬಾಕಿ ಇದೆ. ಇಂಥವರ ವಿರುದ್ಧ ನಾಲ್ಕು ತಿಂಗಳೊಳಗೆ ಕಠಿಣ ಕ್ರಮ ಜರುಗಿಸಿ ಬಾಕಿ ಹಣ ವಸೂಲಿ ಮಾಡಲೇಬೇಕು. ಕಾನೂನು ಕ್ರಮದ ಜತೆಗೆ ನಿವೇಶನ ಮಂಜೂರಾತಿಯನ್ನೇ ರದ್ದುಪಡಿಸಬೇಕಾದ ನಿಷ್ಠುರತೆಯನ್ನು ಪ್ರದರ್ಶಿಸಲೇಬೇಕಾಗಿದೆ ಎಂದು ಅವರು ವಿವರಿಸಿದರು.

Heavy and Medium Industry ಕೆಐಎಡಿಬಿ ಮೊದಲಿನಿಂದಲೇ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತ ಬರಬೇಕಾಗಿತ್ತು. ಆಗ ಈ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಈ ವಿಚಾರದಲ್ಲಿ ಮಂಡಲಿಯ ಕಾರ್ಯದರ್ಶಿಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಕೆಐಎಡಿಬಿ ಸಿಇಒ ಮಹೇಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...