Kateel Ashok Pai Memorial College ಶಿವಮೊಗ್ಗ ನಗರದ ಶಿವಪ್ಪನಾಯಕ ಮಾರ್ಕೆಟ್ ( ಸಿಟಿ ಸೆಂಟರ್ ) ನಲ್ಲಿ 13/10/2023, ಸಂಜೆ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳಿಂದ ಫ್ಲ್ಯಾಶ್ ಮಾಬ್ ಮತ್ತು ಬೀದಿನಾಟಕವನ್ನು ಪ್ರದರ್ಶಿಸಲಾಯಿತು.
ದೈಹಿಕ ಆರೋಗ್ಯದಷ್ಟೇ ಮುಖ್ಯವಾದುದು ಮಾನಸಿಕ ಆರೋಗ್ಯ. ಪ್ರತಿ ವರ್ಷ ಅಕ್ಟೋಬರ್ ೧೦ ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಎ೦ದು ಆಚರಿಸಲಾಗುತ್ತದೆ ಇದರ ಪ್ರಯುಕ್ತ ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಮಾನಸ ಟ್ರಸ್ಟ್ ನ ಅಂಗವಾದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮತ್ತು ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ ಮನಃ ಶಾಸ್ತ್ರ ವಿಭಾಗದಿಂದ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಮತ್ತು ಜನರಿಗೆ ಅದರ ಮನವರಿಕೆ ಮಾಡಲು ದಿನಾಂಕ ೦೯, ಸೋಮವಾರದಿಂದ ಇಂದು ೧೩, ಶುಕ್ರವಾರದ ಒಂದು ವಾರದ ಕಾಲ ರಸಪ್ರಶ್ನೆ ಕಾರ್ಯಕ್ರಮ, ಪೊಸ್ಟರ್ ತಯಾರಿಕೆ, ರೀಲ್ಸ್ , ಬೀದಿ ನಾಟಕ ಮತ್ತು ಫ್ಲ್ಯಾಶ್ ಮಾಬ್ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
Kateel Ashok Pai Memorial College ಸೋಮವಾರದಂದು ಸಕಲ ಕಾರ್ಯಕ್ರಮಗಳಿಗೆ ಚಾಲ್ತಿಯನ್ನು ನೀಡಲಾಯಿತು. ಮಂಗಳವಾರದಂದು “ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು” ವಿಷಯದ ಕುರಿತು ತಜ್ಞರ ಚರ್ಚೆ, ಈ ಚರ್ಚೆಯಲ್ಲಿ ಡಾ ಮಹೇಂದ್ರ (ವಿಪತ್ತು ಅಪಾಯ ಮತ್ತು ಸ್ಥಿತಿಸ್ಥಾಪಕ ಅಧಿಕಾರಿ,ಯುನಿಸೆಫ್, ಹೈದರಾಬಾದ್) , ಡಾ ಕಾರ್ತಿಕ್ (ಮನೋವೈದ್ಯರು) , ಡಾ ರಾಜ್ರೇಂದ್ರ ಚೆನ್ನಿ (ಶಿಕ್ಷಣ ತಜ್ಞರು), ಡಾ ಮಾರಿ ಇವೆಲಿನ್ (ಮನಃಶಾಸ್ತ್ರಜ್ಞರು), ಪ್ರೇಮ (ಸದಸ್ಯರು, ಜಿಲ್ಲಾ ಗ್ರಾಹಕ ಆಯೋಗ, ಉಡುಪಿ) ಮತ್ತು ಶ್ರೀ ಸಿ ಎನ್ ಚಂದನ್(ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು) ಮಾನಸಿಕ ಆರೋಗ್ಯದ ಕುರಿತು ಮಾತನಾಡಿದರು. ಬುಧವಾರ ಮತ್ತು ಗುರುವಾರ ಅಂತರ್ ಕಾಲೇಜು ಮಟ್ಟದಲ್ಲಿ ರಸಪ್ರಶ್ನೆ, ಪೊಸ್ಟರ್ ಮತ್ತು ರೀಲ್ಸ್ ತಯಾರಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಒಂದು ವಾರದ ಕಾಲ ಕಾಲೇಜಿನ ಮನಃಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ನಗರದ ಪ್ರಮುಖ ಸ್ಥಳಗಳಲ್ಲಿ ಆಧುನಿಕ ಜೀವನದ ದಿನನಿತ್ಯದಲ್ಲಿ ವಿದ್ಯಾರ್ಥಿಗಳ ಮತ್ತು ಕುಟುಂಬದ ಸದಸ್ಯರಲ್ಲಿ ಆಗುವ ಒತ್ತಡ ಅದರಿಂದ ಮನಸ್ಸಿನ ಮೇಲೆ ಬೀರುವ ಪ್ರಭಾವ ಆ ಸಂದರ್ಭದಲ್ಲಿ ಮನಃಶಾಸ್ತ್ರಜ್ಞರನ್ನು ಭೇಟಿಯಾಗಿ ಸಲಹೆ ಪಡೆಯುವ ಕುರಿತು ಬೀದಿ ನಾಟಕ ಮತ್ತು ಜೀವನದ ಮಹತ್ವ, ಸುಖ-ದುಃಖ, ನೋವು-ನಲಿವಿನ ಭಾವಾರ್ಥ ಹೊಂದಿರುವ ಸಾಲುಗಳಿಗೆ ಪ್ಲ್ಯಾಶ್ ಮಾಬ್ ಅನ್ನು ಪ್ರದರ್ಶಿಸಿದರು.
ಇಂದು ನಗರದ ಸಿಟಿ ಸೆಂಟರ್ ನಲ್ಲಿ ಪ್ರದರ್ಶಿಸಲಾಯಿತು ಮತ್ತು ನೂರಾರು ಜನರು ಜಾಗೃತಿ ಕಾರ್ಯಕ್ರಮವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.