DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಶುಂಠಿ ಬೆಳೆಗೆ ಹೊದಿಕೆಗಾಗಿ ಒಣ ಹುಲ್ಲನ್ನು ಬಳಸುವುದು ಹೆಚ್ಚುತ್ತಿರುವುದರಿಂದ ಜಾನುವಾರುಗಳಿಗೆ ಒಣ ಮೇವಿನ ಕೊರತೆ ಉಂಟಾಗುವ ಸಂಭವ ಇದೆ. ಆದ್ದರಿಂದ ಒಣಹುಲ್ಲಿಗೆ ಬದಲಾಗಿ ಪರ್ಯಾಯ ವಸ್ತುಗಳನ್ನು ಬಳಸುವಂತೆ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ತೋಟಗಾರಿಕೆ ಬೆಳೆ ಕ್ಷೇತ್ರ ಹೆಚ್ಚಾಗುತ್ತಿದ್ದು, ಭತ್ತ ಮತ್ತು ಇನ್ನಿತರೆ ಧಾನ್ಯಗಳ ಕ್ಷೇತ್ರ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಪ್ರಸ್ತುತ ಶಿವಮೊಗ್ಗ ಜಿಲ್ಲೆಯಾದ್ಯಂತ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲ್ಲಿ ಹೊದಿಕೆಗಾಗಿ ಒಣಹುಲ್ಲನ್ನು ಬಳಸುವುದು ಹೆಚ್ಚಾಗುತ್ತಿದೆ. ಇದರಿಂದ ರೈತರ ಜಾನುವಾರುಗಳಿಗೆ ಒಣಮೇವಿನ ಕೊರತೆ ಉಂಟಾಗುವ ಸಂಭವವಿರುವುದರಿಂದ ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನೋಪಾಯ ನಡೆಸುತ್ತಿರುವ ರೈತಾಪಿ ಕುಟುಂಬದ ಜಾನುವಾರುಗಳಿಗೆ ಒಣ ಮೇವಿನ ಲಭ್ಯತೆ ಕಡಿಮೆಯಾಗಿ ಒಣ ಮೇವಿನ ದರ ಹೆಚ್ಚಾಗುವುದರಿಂದ ಆರ್ಥಿಕ ಹೊರೆಯಾಗುತ್ತಿದೆ.
DC Shivamogga ಈ ಕಾರಣದಿಂದಾಗಿ ಜಿಲ್ಲೆಯಾದ್ಯಂತ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲ್ಲಿ ಹೊದಿಕೆಗಾಗಿ ಒಣಹುಲ್ಲನ್ನು ಬಳಸುವುದನ್ನು ನಿಯಂತ್ರಿಸಿ ಪರ್ಯಾಯವಾಗಿ ಅಡಿಕೆ ಗರಿಗಳು/ ಕಾಡಿನಲ್ಲಿ ಸಿಗುವ ದರಗಲೆ/ ಇತ್ಯಾದಿ ಜಾನುವಾರುಗಳ ಮೇವಿಗೆ ಯೋಗ್ಯವಲ್ಲದ ಪದಾರ್ಥಗಳನ್ನು ಹೊದಿಕೆಗಾಗಿ ಬಳಸಲು ಜಿಲ್ಲೆಯ ಶುಂಠಿ ಬೆಳೆಗಾರ ರೈತರಲ್ಲಿ ಕೋರಲಾಗಿದೆ. ಹಾಗೂ ಜಿಲ್ಲೆಯ ರೈತ ಬಾಂಧವರು ತಮ್ಮ ಜಾನುವಾರುಗಳಿಗೆ ಅಗತ್ಯವಿರುವ ಪ್ರಮಾಣದಲ್ಲಿ ಒಣ ಮೇವು ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.