Kannada Sahitya Parishad ಮಾಜಿ ಶಾಸಕರು, ಸರಳ ಸಜ್ಜನಿಕೆಯ ಪಟಮಕ್ಕಿ ರತ್ನಾಕರ ಅವರ ಸ್ಮಾರಕ ದತ್ತಿ ಸ್ಥಾಪಿಸಲು ತೀರ್ಮಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ಪಟಮಕ್ಕಿ ರತ್ನಾಕರ ಅವರ ವೈಚಾರಿಕ ಚಿಂತನೆ ಉಪನ್ಯಾಸ ಕಾರ್ಯಕ್ರಮ ಮತ್ತು ಪರಮಹಂಸ-ವಿವೇಕಾನಂದ ಅವರ ಕುರಿತು ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ನಡೆಸಿ ನಗದು ಪುರಸ್ಕಾರ ನೀಡಲು ತೀರ್ಮಾನ ಮಾಡಲಾಯಿತು.
ಅಕ್ಟೋಬರ್ 9 ರಂದು ತೀರ್ಥಹಳ್ಳಿ ತಾಲ್ಲೂಕು ಪ್ರವಾಸದ ಸಂದರ್ಭದಲ್ಲಿ ಆರಗ ಗ್ರಾಮದಲ್ಲಿರುವ ಪಟಮಕ್ಕಿ ರತ್ನಾಕರ ಅವರ ಗೃಹಕ್ಕೆ ಭೇಟಿನೀಡಿದ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅವರು ಎರಡು ಲಕ್ಷ ರೂ. ದತ್ತಿ ಸ್ವೀಕರಿಸಿದರು.
Kannada Sahitya Parishad ಪಟಮಕ್ಕಿ ರತ್ನಾಕರ ಅವರ ಶ್ರೀಮತಿ ನೈಜಲ ಪಟಮಕ್ಕಿ ರತ್ನಾಕರ ಅವರು ಎರಡು ಲಕ್ಷ ರೂಪಾಯಿಗಳ ಚೆಕ್ ನೀಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಟಿ. ಕೆ. ರಮೇಶ್ ಶೆಟ್ಟಿ, ಕೋಶಾಧ್ಯಕ್ಷರಾದ ಹಾಲಿಗೆ ನಾಗರಾಜ್, ಜಿಲ್ಲಾ ಸಮಿತಿ ಕೋಶಾಧ್ಯಕ್ಷರಾದ ನವೀನ್ ಕುಮಾರ್ ಉಪಸ್ಥಿತರಿದ್ದರು.