Friday, July 10, 2026
Friday, July 10, 2026

Rotary Organization ನಿರಂತರ ಶ್ರಮದಿಂದ ಒಳ್ಳೆಯ ಕಲಾವಿದರಾಗಲು ಸಾಧ್ಯ- ಶೃತಿ ರಾಘವೇಂದ್ರನ್

Date:

Rotary Organization ಪಾಶ್ಚಿಮಾತ್ಯ ಕಲೆಯಿಂದ ದೇಶಿಯ ಸಂಗೀತ ಕಲೆಯ ಕಲಿಕೆಯ ಸಂಖ್ಯೆಯು ಕಡಿಮೆ ಆಗುತ್ತಿದೆ ಎಂದು ಬೆಂಗಳೂರಿನ ಶೃತಿ ಲಯ ಸಂಸ್ಥೆಯ ಸಂಗೀತ ಗುರು, ಆಕಾಶವಾಣಿ ಚಲನಚಿತ್ರ ಹಿನ್ನೆಲೆ ಗಾಯಕಿ ಶೃತಿ ರಾಘವೇಂದ್ರನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕ ಪ್ರಪಂಚದಲ್ಲಿ ಮಕ್ಕಳಿಗೆ ಕೂಡಲೇ ಹಾಡು ಹೇಳಲು ಬರಬೇಕು. ಬೇಗ ವೇದಿಕೆ ಸಿಗುವಂತೆ ಆಗಬೇಕು. ಟಿವಿಯಲ್ಲಿ ಬರಬೇಕು ಎಂಬ ಆಲೋಚನೆ ಇದೆ. ಆದರೆ ಪಾಶ್ಚಿಮಾತ್ಯ ಕಲೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿರುವುದರಿಂದ ದೇಶಿಯ ಸಂಗೀತ ಕಲೆ ಕಲಿಕೆಯು ಕುಂಠಿತವಾಗುತ್ತಿದೆ ಎಂದು ತಿಳಿಸಿದರು.

ಸಂಗೀತಕ್ಕೆ ತನ್ನದೇ ಆದ ಶಾಸ್ತ್ರೀಯ ಸ್ಥಾನಮಾನಗಳಿದ್ದು, ಗುರುಗಳಿಂದ ಕಲಿತ ವಿದ್ಯೆಯು ಶಾಶ್ವತ ಆಗಿರುತ್ತದೆ. ಶ್ರದ್ಧೆ, ಏಕಾಗ್ರತೆ ಹಾಗೂ ಇಚ್ಛಾಶಕ್ತಿಯಿಂದ ಕಲಿಯಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಸಾಧನೆ ಮಾಡಿ ಸಂಗೀತ ಸಾಧಕರಿದ್ದಾರೆ. ನಾನು ಸಹ ಶಿವಮೊಗ್ಗದವಳು ಎನ್ನಲು ಹೆಮ್ಮೆ ಎಂದರು.

ಮಕ್ಕಳು ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡಬೇಕು. ಧ್ವನಿ ಸಂಸ್ಕರಣೆ ಆಗಬೇಕು. ಒಳ್ಳೆಯ ಸಂಗೀತ ಗುರುವಿನಿಂದ ಅಭ್ಯಾಸ ಮಾಡಬೇಕು. ಒಳ್ಳೆಯ ಕಲಾವಿದರಾಗಲು ನಿರಂತರ ಪರಿಶ್ರಮ ವಹಿಸಿ ಕೆಲಸ ಮಾಡಬೇಕು. ನಂತರ ಉತ್ತಮ ಕಲಾವಿದರಾಗಿ ರೂಪುಗೊಳ್ಳಲಬಹುದಾಗಿದೆ ಎಂದು ಹೇಳಿದರು.

Rotary Organization ನಿರೂಪಕ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಸಂಗೀತದಿAದ ಖಿನ್ನತೆ ದೂರವಾಗುತ್ತದೆ, ಮನಸ್ಸಿಗೆ ಸಂತೋಷವಾಗುತ್ತದೆ. ಸಂಗೀತ ಸಾಧಕನ ಸ್ವತ್ತು, ಕಲೆ ಮನುಷ್ಯನಿಗೆ ಬೆಲೆ ತರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಊರಿನ ಪ್ರತಿಭೆ ಉನ್ನತ ಮಟ್ಟಕ್ಕೆ ಬೆಳೆದು ನಮ್ಮ ಜಿಲ್ಲೆಗೆ ಹೆಮ್ಮೆ ತಂದಿರುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆ ವತಿಯಿಂದ ಶೃತಿ ರಾಘವೇಂದ್ರನ್ ಅವರಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು. ರೋಟರಿ ಮಿಡ್‌ಟೌನ್ ಸದಸ್ಯ ಜಿ.ಎನ್.ಎನ್.ಮೂರ್ತಿ, ಅನುರಾಧಾ ಮೂರ್ತಿ, ನಮ್ಮ ಟಿವಿಯ ಶ್ರೀಕಾಂತ್, ಸುಪ್ರಿಯಾ ಗೌತಮಿ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ...

Friends Center Organization ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಪ್ರಸಿದ್ಧಿ ಪಡೆದಿದೆ- ಎಸ್.ಎನ್.ಚನ್ನಬಸಪ್ಪ

Friends Center Organization ಸಮಾಜಮುಖಿ, ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವಾರು ಕಾರ್ಯಕ್ರಗಳನ್ನು...

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....