Saturday, December 6, 2025
Saturday, December 6, 2025

Fisheries Co-operative Society ಬೆಳವಾಡಿ ಕೆರೆ ಹೂಳು ತೆಗೆಸಿ ಮೀನುಗಾರಿಕೆಗೆ ಅನುವು ಮಾಡಿಕೊಡಲು ಮನವಿ

Date:

Fisheries Co-operative Society ಮೀನುಗಾರಿಕೆ ಸಹಕಾರ ಸಂಘಕ್ಕೆ ಸ್ವಂತ ಸಮುದಾಯ ಭವನ ನಿರ್ಮಿ ಸಲು ಸಹಾಯಧನ ಒದಗಿಸಿಕೊಡಬೇಕು ಎಂದು ತಾಲ್ಲೂಕು ಮೀನುಗಾರಿಕೆ ಸಹಕಾರ ಸಂಘದ ಆಡಳಿತ ಮಂಡಳಿ ಮೀನುಗಾರಿಕೆ ಹಾಗೂ ಒಳನಾಡು ಬಂದರು ಸಚಿವ ಮಂಕಾಳು ವೈದ್ಯ ಅವರನ್ನು ಶುಕ್ರವಾರ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ರಾಜ್ ಅಹ್ಮದ್ ಈಗಾಗಲೇ ಮೀನುಗಾರಿಕೆ ಸಂಘದಲ್ಲಿ ಸುಮಾರು 2500 ಸದಸ್ಯರಿದ್ದು ಮೂರು ದಶಕಗಳ ಹೆಚ್ಚು ಕಾಲದಿಂದ ಸಂಘ ಅಸ್ಥಿತ್ವದಲ್ಲಿರುವ ಮೂಲಕ ಉತ್ತಮ ಕಾರ್ಯ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ಬೆಳವಾಡಿ ಗ್ರಾಮದಲ್ಲಿ ಸಂಘದ ನಿವೇಶನವಿದ್ದು ಸಮುದಾಯ ಭವನ ನಿರ್ಮಾಣಕ್ಕೆ ಧನಸಹಾಯ ಹಾಗೂ ಮೀನು ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಇಲ್ಲದಿರುವುದರಿಂದ ಸುಸಜ್ಜಿತವಾದ ಮಾರ್ಕೆಟ್ ಮಾಡಿಕೊಳ್ಳ ಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಬಡ ಮೀನುಗಾರರ ಸದಸ್ಯರಿಗೆ ನಿವೇಶನ ಮಂಜೂರು ಮಾಡಿಕೊಡಲು ಹಲವಾರು ಸದಸ್ಯರು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಸಂಘಕ್ಕೆ 150 ಹೆಕ್ಟೇರ್‌ಗಳ ಬೆಳವಾಡಿ ಕೆರೆಯನ್ನು ಐದು ವರ್ಷಕ್ಕೆ ಗುತ್ತಿಗೆ ಪಡೆದಿದ್ದು ಮೀನು ಹಿಡಿಯುವುದು ಕಷ್ಟಕರವಾಗಿದೆ. ಮುಳ್ಳು ಗಿಡಗಳು ತುಂಬಾ ಆವರಿಸಿಕೊಂಡಿದೆ. ಬಲೆ ಬಿಡಲು ಸಾಧ್ಯವಾಗಿಲ್ಲ. ಹೂಳು ತೆಗೆಸಲು ಧನಸಹಾಯ ಮಾಡಬೇಕು. ಹಾಗೂ ಎಲ್ಲಾ ಕೆರೆಗಳಲ್ಲಿ ಮಳೆ ಬಾರದೆ ಕೆರೆಗಳು ಒಣಗಿ ಹೋಗುತ್ತಿದ್ದು ಮುಂದಿನ ವರ್ಷಕ್ಕೆ ಕೆರೆಗಳ ಗುತ್ತಿಗೆಯನ್ನು ಮುಂದೂಡಿಕೊಡಲು ಒತ್ತಾಯಿಸಿದರು.

Fisheries Co-operative Society ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮತ್, ಸಂಘದ ನಿರ್ದೇಶಕರಾದ ಹಿರೇಮಗಳೂರು ರಾಮಚಂದ್ರ, ಹೆಚ್.ಎಸ್. ಜಗದೀಶ್, ರಸೂಲ್, ಮುರುಗೇಶ್ ಪೂಜಾರ್, ಮುಖಂಡರಾದ ಶಾಂತಕುಮಾರ್, ಸಂತೋಷ್ ಲಕ್ಯಾ, ಸಿಂಸನ್, ಮಹೇಶ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...