Agriculture and Horticulture ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಗೆ ವಿದ್ಯಾರ್ಥಿಗಳಿಗೆ ಬೆಳ್ಳಿ ಹಬ್ಬದ ಪಾರಿತೋಷಕ ಹಾಗೂ ಪದವಿ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಅಥವಾ ಬಿ.ಬಿ.ಎಂ., ಅಥವಾ ಬಿ.ಸಿ.ಎ., ಬಿ.ಎಸ್ಸಿ(ಕೃಷಿ ಅಥವಾ ತೋಟಗಾರಿಕೆ), ಬಿ.ವಿ.ಎಸ್ಸಿ.,/ಬಿ.ಎಫ್.ಎಸ್.ಸಿ.,/ಬಿ.ಟೆಕ್ ಡೈರಿ.,/ ಎಂ.ಬಿ.ಬಿ.ಎಸ್.,/ ಬಿ.ಯು.ಎಂ.ಎಸ್.,/ ಬಿ.ಹೆಚ್.ಎಂ.ಎಸ್.,/ ಬಿ.ಎ.ಎಂ.ಎಸ್.,/ ಬಿ.ಎಸ್.ಎಂ.ಎಸ್.,/ ಬಿ.ಎನ್.ವೈ.ಎಸ್./ ಬಿ.ಡಿ.ಎಸ್.,/ ಬಿ.ಪಿ.ಟಿ.,/ ಬಿ.ಫಾರ್ಮ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸುವರ್ಣ ಮಹೋತ್ಸವದ ಪಾರಿತೋಷಕವನ್ನು ಹಾಗೂ ಸ್ನಾತಕೋತ್ತರ ಪದವಿಗಳಾದ ಎಂ.ಎ.,(ಸಂಸ್ಕೃತ ಅಥವಾ ಯಾವುದೇ ವಿಷಯ), ಎಂ.ಕಾಂ., ಅಥವಾ ಎಂ.ಸಿ.ಎ.,/ಎಂ.ಎಸ್ಸಿ.,/ಎA.ಬಿ.ಎ.,/ಎಂಟೆಕ್., ಅಥವಾ ಎಂ.ಇ.,/ಎಂ.ಫಾರ್ಮ/ಸಿ.ಎ.,/ಇಂಜಿನಿಯರಿಂಗ್ ಪದವಿಗಳಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಜ್ರ ಮಹೋತ್ಸವ ಪಾರಿತೋಷಕವನ್ನು ಹಾಗೇಯೇ ರಾಜ್ಯ ಮಟ್ಟ, ರಾಷ್ಟç ಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪುರಸ್ಕಾರ ಪಡೆದ ಸದಸ್ಯರ ಮಕ್ಕಳಿಗೆ ಪಾರಿತೋಷಕವನ್ನು ಮಾಮ್‌ಕೋಸ್ ವತಿಯಿಂದ ನೀಡಲು ತೀರ್ಮಾನಿಸಿದೆ.
Agriculture or Horticulture ಅದರಂತೆ ಸದಸ್ಯರು ನವೆಂಬರ್ 30ರೊಳಗಾಗಿ ಅರ್ಜಿ ಮತ್ತು ಅಂಕಪಟ್ಟಿಯ ಮೂಲಪ್ರತಿಯ ನಕಲನ್ನು ಸಂಘದ ಶಾಖೆಗಳಿಗೆ ಅಥವಾ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಮಾಮ್‌ಕೋಸ್‌ನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.