ಕೆಲವು ದಿನಗಳ ಹಿಂದೆ ಕೊಪ್ಪಳದ 43 ವರ್ಷದ ಮಹಿಳೆಯರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. 158 ದಿನಗಳ ಚಿಕಿತ್ಸೆ ನಂತರ ನಗರದ ಜಿಲ್ಲಾಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.
ಮಹಿಳೆಯ ಧೈರ್ಯದಿಂದಲೇ ವೈದ್ಯಕೀಯ ತಂಡ ಯಶಸ್ವಿ ಚಿಕಿತ್ಸೆ ನೀಡಲು ಸಾಧ್ಯವಾಯಿತು. 158 ದಿನಗಳ ನಂತರ ಮಹಿಳೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸುಧೀರ್ಘ ಚಿಕಿತ್ಸೆಯಿಂದ ರೋಗ ಚೇತರಿಕೆ ಕಂಡ ಮೊದಲ ಪ್ರಕರಣವಾಗಿದೆ ಎಂದು ಕಿಮ್ಸ್ ವೈದ್ಯಕೀಯ ವಿಭಾಗದ ಡಾ. ವೇಣುಗೋಪಾಲ್ ತಿಳಿಸಿದ್ದಾರೆ.
ಜುಲೈ 13ರಂದು ಯಲಬುರ್ಗಾ ತಾಲೂಕಿನ ಬೇಲೂರು ಗ್ರಾಮದ ಮಹಿಳೆಯೊಬ್ಬರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರು ಕೋವಿಡ್ ನಿಂದ ತೀವ್ರ ಅಸ್ವಸ್ಥರಾಗಿದ್ದರು. ಈಕೆಗೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಶ್ವಾಸಕೋಶದ ಶೇ. 93ರಷ್ಟು ಭಾಗಕ್ಕೆ ಹಾನಿ ಉಂಟಾಗಿರುವುದು ಸ್ಪಷ್ಟವಾಗಿದೆ. ಮಹಿಳೆ ಬದುಕಿ ಉಳಿಯುವ ಸಾಧ್ಯತೆ ಕಡಿಮೆಯಿದೆ ಎಂದು ವೈದ್ಯರು ಭಾವಿಸಿ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಆ ಚಿಕಿತ್ಸೆ ಫಲಕಾರಿಯಾಗಿ ಮಹಿಳೆ ಗುಣಮುಖರಾಗಿದ್ದಾರೆ.
ಈ ಮಹಿಳೆಯು ಆಸ್ಪತ್ರೆಯಲ್ಲಿದ್ದ 158 ದಿನದಲ್ಲಿ 104 ದಿನದವರೆಗೆ ವೆಂಟಿಲೇಟರ್ ಮೇಲೆ ಅವಲಂಬಿತರಾಗಿದ್ದರು. 8 ದಿನದವರೆಗೆ ಎಚ್ಎಫ್ ಎಂಸಿ ಎಲ್ಲಿ ಕಳೆದಿದ್ದಾರೆ. ಒಂದು ದಿನಕ್ಕೆ ಆರಂಭದಲ್ಲಿ 15ರಿಂದ 20 ಲೀಟರ್ ಆಕ್ಸಿಜನ್ ಬೇಕಾಗುತ್ತಿತ್ತು.
ಜಿಲ್ಲಾದ್ಯಂತ ಕೊರೊನಾ ಸೋಂಕು ಇಳಿಮುಖವಾದರೂ, ಮಹಿಳೆಗೆ ಚಿಕಿತ್ಸೆ ಮುಂದುವರಿಸಲಾಗಿತ್ತು.
ಕಿಮ್ಸ್ ನ ವೈದ್ಯಕೀಯ ತಂಡ ನಿರಂತರವಾಗಿ ಚಿಕಿತ್ಸೆ ನೀಡಿದೆ. ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರೂ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಗಿದೆ. ಮನೆಯಲ್ಲೂ ಆಕ್ಸಿಜನ್ ಗೆ ವ್ಯವಸ್ಥೆ ಮಾಡಿಕೊಡಲಾಗಿದೆ. ಮಹಿಳೆಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ತಕ್ಷಣ ಚಿಕಿತ್ಸೆ ಸಿಗಲಿದೆ.