Thursday, October 3, 2024
Thursday, October 3, 2024

M.B.Patil ಬೆಂಗಳೂರಿನಲ್ಲಿ 100 ಮಿ.ಡಾಲರ್ ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು

Date:

M.B.Patil ಅಮೆರಿಕದ ಮುಂಚೂಣಿ ಕಂಪನಿಯಾದ ಕ್ರಿಪ್ಟನ್ ಸೊಲ್ಯೂಷನ್ಸ್ ಬೆಂಗಳೂರಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನೂತನ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಉತ್ಪಾದನಾ ಘಟಕ ಆರಂಭಿಸಲು 100 ಮಿಲಿಯನ್ ಡಾಲರ್ (800 ಕೋಟಿ ರೂ.) ಬಂಡವಾಳ ಹೂಡಲು ಮುಂದೆ ಬಂದಿದೆ. ಜತೆಗೆ ಈ ಕಂಪನಿಯು ಮೈಸೂರು ಮತ್ತು ಚಾಮರಾಜ ನಗರದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ಪರಿಶೀಲಿಸಲು ಒಪ್ಪಿಕೊಂಡಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಸುರೇಶ್ ಪಟೇಲ್ ಮತ್ತು ಇತರ ಉನ್ನತಾಧಿಕಾರಿಗಳೊಂದಿಗೆ ಈ ಸಂಬಂಧ ಸೋಮವಾರ ಚರ್ಚಿಸಲಾಗಿದೆ. ಅದು ಸ್ಥಳೀಯ ಸಹಭಾಗಿತ್ವಕ್ಕೆ ಆಸಕ್ತಿ ಹೊಂದಿದ್ದು, ಕೌಶಲ್ಯಪೂರ್ಣ ಮಾನವ ಸಂಪನ್ಮೂಲದ ಖಾತ್ರಿಯನ್ನು ನಮ್ಮಿಂದ ಬಯಸಿದೆ’ ಎಂದಿದ್ದಾರೆ.

ಕಂಪನಿಯು ಟೆಕ್ಸಾಸ್ ನಲ್ಲಿ ಹೊಂದಿರುವ 40 ಸಾವಿರ ಚದರ ಮೀಟರ್ ವಿಸ್ತೀರ್ಣದ ಉತ್ಪಾದನಾ ಘಟಕಕ್ಕೂ ಈ ಸಂದರ್ಭದಲ್ಲಿ ಭೇಟಿ ನೀಡಿದ್ದು, ಅಲ್ಲಿರುವ ಸೌಲಭ್ಯಗಳನ್ನು ವೀಕ್ಷಿಸಲಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆಬಂದರೆ, ಅಗತ್ಯ ಸೌಲಭ್ಯಗಳನ್ನು ತ್ವರಿತ ಗತಿಯಲ್ಲಿ ಒದಗಿಸಲಾಗುವುದು. ಈ ಸಂಬಂಧದ ಪ್ರಾಥಮಿಕ ಚರ್ಚೆ ಈಗಾಗಲೇ ಮುಗಿದಿದೆ ಎಂದು ಅವರು ತಿಳಿಸಿದ್ದಾರೆ.

M.B.Patil ಇದೇ ಸಂದರ್ಭದಲ್ಲಿ, ಸೆಮಿಕಂಡಕ್ಟರ್ ಕ್ಷೇತ್ರದ ದೈತ್ಯ ಕಂಪನಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಜತೆಗೂ ಮಾತುಕತೆ ನಡೆಸಲಾಗಿದೆ. ಅದು ಬೆಂಗಳೂರಿನಲ್ಲಿರುವ ತನ್ನ ಆರ್ & ಡಿ ಕೇಂದ್ರದ ಚಟುವಟಿಕೆಗಳನ್ನು ವಿಸ್ತರಿಸುವ ಬದ್ಧತೆಯನ್ನು ತೋರಿದೆ. ಅಮೆರಿಕದ ಆಚೆಗೆ ಕಂಪನಿಯು ಹೊಂದಿರುವ ಅತಿದೊಡ್ಡ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸಭೆಯಲ್ಲಿ ಅನಲಾಗ್ ಮತ್ತು ಎಂಬೆಡೆಡ್ ಸೆಮಿಕಂಡಕ್ಟರ್ ಕುರಿತ ಸಂಶೋಧನೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗಿದೆ. ಇದಕ್ಕೆ ಬೆಂಗಳೂರಿನ ವೈಟ್ ಫೀಲ್ಡಿನಲ್ಲಿರುವ ಸೆಮಿಕಂಡಕ್ಟರ್ ಸೂಕ್ತ ಸ್ಥಳವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ಹೂಡಿಕೆಗೆ ಇರುವ ಅಡಚಣೆಗಳನ್ನು ನಿವಾರಿಸಲು ರಾಜ್ಯ ಸರಕಾರ ಹೊಂದಿರುವ ಬದ್ಧತೆಯನ್ನು ಅವರಿಗೆ ತಿಳಿಸಲಾಗಿದೆ. ಭೇಟಿಯ ಸಂದರ್ಭದಲ್ಲಿ ಕಂಪನಿಯು ಹೊಂದಿರುವ 300 ಎಂಎಂ ವೇಫರ್ ಫ್ಯಾಬ್ ಉತ್ಪಾದನಾ ಘಟಕವನ್ನು ವೀಕ್ಷಿಸಲಾಯಿತು ಎಂದು ಪಾಟೀಲ ವಿವರಿಸಿದ್ದಾರೆ.

ಮೇಲಿನ ಕಂಪನಿಗಳ ಜೊತೆಗೆ, ಟೆಕ್ಸಾಸ್ ನಲ್ಲೇ ಕೇಂದ್ರ ಕಚೇರಿ ಹೊಂದಿರುವ ಇ.ಆರ್.ಪಿ. ಲಾಜಿಕ್ ಕಂಪನಿಯೊಂದಿಗೂ ಚರ್ಚಿಸಲಾಯಿತು. ಸ್ಯಾಪ್ ಕೌಶಲ್ಯದಲ್ಲಿ ಪರಿಣತಿ ಹೊಂದಿರುವ ಅದು ಬೆಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಉತ್ಸಾಹ ತೋರಿಸುತ್ತಿದೆ. ಈ ಕಂಪನಿಯು ಈಗಾಗಲೇ ಹೈದರಾಬಾದ್, ಚೆನ್ನೈ, ಸೇಲಂ ಮುಂತಾದ ಕಡೆ ಸಕ್ರಿಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮಾತುಕತೆಯಲ್ಲಿ ಕ್ರಿಪ್ಟನ್ ಕಂಪನಿಯ ಪರವಾಗಿ ಸಿಒಒ ದೀಪಕ್ ಪಟೇಲ್, ಸಿಎಂಒ ಮಹೇಶ್ ಪಟೇಲ್, ಉಪಾಧ್ಯಕ್ಷ ಮುಕೇಶ್ ಪಟೇಲ್, ಆನಂದ್ ಪಟೇಲ್, ಹಿತೇಶ್ ಭಕ್ತಾ, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯ ಪರವಾಗಿ ಜನರಲ್ ಮ್ಯಾನೇಜರ್ ಅಮಿಚಾಯ್ ರೋನ್, ಉಪಾಧ್ಯಕ್ಷ ಸ್ಟೀವ್ ಬೋನರ್, ಇಆರ್ ಪಿಎಲ್ ಪರವಾಗಿ ಕಣ್ಣನ್ ಶ್ರೀನಿವಾಸನ್ ಭಾಗವಹಿಸಿದ್ದರು.

ರಾಜ್ಯ ಸರಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...