ಕೋವಿಡ್-19ನ ರೂಪಾಂತರಿ ವೈರಸ್ ಓಮಿಕ್ರಾನ್ ವಿಶ್ವವನ್ನೇ ಆತಂಕಕ್ಕೆ ನೂಕಿದೆ. ಈ ಬಗ್ಗೆ ಕ್ಷಿಪ್ರವಾಗಿ ಎಲ್ಲಾ ರಾಷ್ಟ್ರಗಳಲ್ಲಿ ಲಸಿಕೆ ಅಭಿಯಾನವನ್ನು ವೇಗವಾಗಿ ಕೈಗೊಳ್ಳಬೇಕು ಜಾಗತಿಕ ತಜ್ಞರು ತಿಳಿಸಿದ್ದಾರೆ.
“ದೇಶಾದ್ಯಂತ 23 ಕೋಟಿ ಡೋಸ್ ಲಸಿಕೆ ಬಾಕಿ ಉಳಿದಿದೆ. ಉತ್ತರ ಪ್ರದೇಶ ಮಹಾರಾಷ್ಟ್ರ ಪಶ್ಚಿಮ ಬಂಗಾಳ ಬಿಹಾರ ಹಾಗೂ ರಾಜಸ್ಥಾನದಲ್ಲಿ 11 ಕೋಟಿಗೂ ಅಧಿಕ ಡೋಸ್ ಗಳನ್ನು ಇನ್ನು ಕೂಡ ಜನರಿಗೆ ನೀಡಿಲ್ಲ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಉತ್ತರಪ್ರದೇಶದಲ್ಲಿ 3.5 ಕೋಟಿ ಜನ ಇನ್ನೂ 1 ಡೋಸ್ ಲಸಿಕೆ ಪಡೆದಿಲ್ಲ. ಬಿಹಾರದಲ್ಲಿ ಕೂಡ 1.89 ಕೋಟಿ, ಮಹಾರಾಷ್ಟ್ರ 1.71 ಕೋಟಿ ಹಾಗೂ ತಮಿಳುನಾಡಿನಲ್ಲಿ 1.54 ಕೋಟಿ ಮಂದಿ ಲಸಿಕೆ ಪಡೆದಿಲ್ಲ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರಗಳು ಲಸಿಕ ಅಭಿಯಾನಕ್ಕೆ ವೇಗ ನೀಡದಿರುವುದೇ ಕೋಟ್ಯಾಂತರ ಲಸಿಕೆ ಉಳಿಯಲು ಕಾರಣ ಎಂದು ತಿಳಿದುಬಂದಿದೆ.