ವಿಜಯ್ ಹಜಾರೆ ಟ್ರೋಪಿ ಕ್ರಿಕೆಟ್ ಟೂರ್ನಿಯು ಇಂದಿನಿಂದ ತಿರುವನಂತಪುರದ ಮಂಗಳಪುರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈಚೆಗಷ್ಟೆ ನಡೆದ ಸೈಯದ್ ಮುಸ್ತಾಕ್ ಅಲಿ ಟಿ – 20 ಕ್ರಿಕೆಟ್ ಟೂರ್ನಿಯಲ್ಲಿ ಮನೀಶ್ ಬಳಗವು ರನ್ನರ್ಸ್ ಅಪ್ ಆಗಿತ್ತು. ರೋಚಕ ಫೈನಲ್ ನಲ್ಲಿ ತಮಿಳುನಾಡು ತಂಡವು ಚಾಂಪಿಯನ್ ಆಗಿದೆ.
‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು ಪುದುಚೇರಿ ಎದುರು ಕಣಕ್ಕಿಳಿಯಲಿದೆ.ಪುದುಚೇರಿ ತಂಡದಲ್ಲಿ ಕನ್ನಡಿಗ ಪವನ್ ದೇಶಪಾಂಡೆ ಇದ್ದಾರೆ. ತಂಡದ ನಾಯಕತ್ವವನ್ನು ದಾಮೋದರನ್ ರೋಹಿತ್ ವಹಿಸಿದ್ದಾರೆ.ಮನೀಶ್ ಬಳಕ್ಕೆ ಮೊದಲ ಗುಂಪಿನಲ್ಲಿ ಬಲಾಡ್ಯ ತಂಡಗಳು ಇವೆ. ಆದರೆ ಪ್ರತಿ ಪಂದ್ಯದಲ್ಲಿ ಜಯಿಸುವುದು ಮಹತ್ವದ್ದಾಗಿದೆ.
ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ ಮತ್ತು ಜೆ. ಸುಚಿತ್ ತಮಗಿರುವ ಅಲ್ಪಸ್ವಲ್ಪ ಅನುಭವವನ್ನು ಟಿ-20 ಟೂರ್ನಿಯಲ್ಲಿ ಸಮರ್ಥವಾಗಿ ಬಳಸಿಕೊಂಡರು. ಆದರೆ 50-50 ಯ ಮಾದರಿಯಲ್ಲಿ ಅನುಭವ ಆಲ್-ರೌಂಡರ್. ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರಿಗೆ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ಶ್ರೇಯಸ್ ಆಡಿದರೆ, ಕಾರ್ಯಪ್ಪನಿಗೆ ಅವಕಾಶ ಸಿಗುವುದು ಅನುಮಾನ. ತಿರುವನಂತಪುರದ ಪಿಚ್ ಸ್ಪಿನ್ನರ್ ಗಳಿಗೆ ನೆರವಾದರೆ 3 ಸ್ಪಿನ್ನರ್ ಮತ್ತು 2 ಮಧ್ಯಮಗಳನ್ನು ಕಣಕ್ಕಿಳಿಸಲು ಪಾಂಡೆ ಮನಸ್ಸು ಮಾಡಬಹುದು.
ಈಚೆಗೆ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡು ವಿರುದ್ಧ ಆಡಿರುವ ಅನುಭವ ಬೌಲರ್ ಗಳಿಲ್ಲದ ತಂಡವನ್ನು ಮನೀಶ್ ಫೈನಲ್ ನವರಿಗೆ ಮುನ್ನಡೆಸಿದ್ದರು. ತಮ್ಮ ಅಮೋಘ ಬ್ಯಾಟಿಂಗ್ ಮತ್ತು ಚುರುಕಾದ ಫಿಲ್ಡಿಂಗ್ ನಿಂದಾಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿದ್ಯಾಧರ್ ಪಾಟೀಲ್, ಎಂ.ಬಿ. ದರ್ಶನ್, ವೈಶಾಖ್ ವಿಜಯ್ ಕುಮಾರ್, ಬೌಲಿಂಗ್ ವಿಭಾಗದ ಉದಯೋನ್ಮುಖ ಪ್ರತಿಭೆ ಗಳಾಗಿವೆ. ಅನುಭವಿ ರೋನಿತ್ ಮೋರೆ ಮತ್ತು ಪ್ರಸಿದ್ಧ ಕೃಷ್ಣ ಮರಳಿದರೆ, ತಂಡದ ಬಲ ಹೆಚ್ಚುವ ನಿರೀಕ್ಷೆ ಇದೆ.
ಪಾಂಡೆ, ಕರುಣ್ ನಾಯರ್, ರೋಹನ್ ಕದಂ, ಆರ್. ಸಮರ್ಥ್ ಇವರುಗಳ ಜವಾಬ್ದಾರಿ ಹೆಚ್ಚಿದೆ. ಹೊಸ ಪ್ರತಿಭೆ ಅಭಿನವ್ ಮನೋಹರ್ ಇಲ್ಲಿಯೂ ಉತ್ತಮವಾಗಿ ಆಡುವ ಭರವಸೆ ಮೂಡಿಸಿದ್ದಾರೆ.