ಕಳೆದ ವರ್ಷ ಕೊರೊನಾತಂಕದ ಕಾರಣ ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳು ರದ್ದಾಗಿದ್ದವು.ಹೀಗಾಗಿ ವಿದ್ಯಾರ್ಥಿಗಳಿಗೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಈ ವರ್ಷವೂ ಓಮಿಕ್ರಾನ್ ಭೀತಿಯಿಂದಾಗಿ ಪ್ರತಿಭಾ ಕಾರಂಜಿ ಸೇರಿದಂತೆ ಪಠ್ಯೇತರ ಚಟುವಟಿಕೆಗಳು ನಡೆಯುವುದು ಕಷ್ಟಕರವಾಗಲಿದೆ. ಹೀಗಾಗಿ ಆನ್ಲೈನ್ ಕಾರ್ಯಚಟುವಟಿಕೆ ಸೇರಿದಂತೆ ಪರಿಹಾರದ ಬೇರೆ ದಾರಿಯನ್ನು ಸರ್ಕಾರ ಕಂಡುಕೊಳ್ಳಬೇಕಿದೆ.
ಗ್ರಾಮೀಣ ಮಾತ್ರವಲ್ಲದೆ ನಗರ ಪ್ರದೇಶಗಳನ್ನು ಬಹುತೇಕ ವಿದ್ಯಾರ್ಥಿಗಳು ರಜೆ ಅವಧಿಯಲ್ಲಿ ಮೊಬೈಲ್ ಗಳ ಮುಂದೆ ಕುಳಿತು ಬೊಜ್ಜು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಒಂದೇ ಪ್ರದೇಶದಲ್ಲಿ ಮೊಬೈಲ್ ಕೇಂದ್ರಿತವಾಗಿ ಕುಳಿತುಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆ ಸೃಷ್ಟಿಯಾಗಿವೆ. ಪೋಷಕರು ಎಷ್ಟೇ ಹೇಳಿದರೂ ಈ ಅಭ್ಯಾಸಗಳನ್ನು ವಿದ್ಯಾರ್ಥಿಗಳು ಬದಲಿಸಿ ಕೊಳ್ಳುತ್ತಿಲ್ಲ. ಹೀಗಾಗಿ ಶಿಕ್ಷಕರು ಅಂಕದ ನೆಪದಲ್ಲಿ ಅಥವಾ ಸ್ಪರ್ಧಾಮನೋಭಾವದಲ್ಲಾದರೂ ಮಕ್ಕಳಿಗೆ ದೈಹಿಕ ಚಟುವಟಿಕೆಗಳನ್ನು ಆಸಕ್ತಿ ನಡೆಸಿಕೊಳ್ಳುವ ಹವ್ಯಾಸಗಳನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ.
ರಾಜ್ಯದಲ್ಲಿ ಕೊರೊನಾತಂಕ ಪೂರ್ಣಪ್ರಮಾಣದಲ್ಲಿ ಇಳಿಮುಖ ಕಾಣದ ಹಿನ್ನೆಲೆ ಈ ವರ್ಷವೂ ಪ್ರತಿಭಾ ಕಾರಂಜಿ ಕಾರ್ಯಕ್ರಮ ರದ್ದು ಮಾಡಲಾಗಿದ್ದು, ಶೈಕ್ಷಣಿಕ ಚಟುವಟಿಕೆಗೆ ಮತ್ತು ನೀಡಲಾಗಿದೆ ಎಂದು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ತಿಳಿಸಿದ್ದಾರೆ.
ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಅಗತ್ಯವಿದ್ದು, ಶಾಲೆಗಳಲ್ಲಿ ಗುಂಪು ಸೇರಿಸದೆ ಆನ್ ಲೈನ್ನ್ ನಲ್ಲಿ ಆಯಾ ಮನೆಗಳಲ್ಲಿ ಪೋಷಕರು ಈ ಕಲೆಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾದ ಡಾ. ಪದ್ಮಾ ಪ್ರಕಾಶ್ ಅವರು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಶಾಲೆಗಳಲ್ಲೂ ಪ್ರತ್ಯೇಕ ವಾಟ್ಸಪ್ ಗ್ರೂಪ್ ಗಳನ್ನು ಮಾಡಿಕೊಂಡಿದ್ದು, ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳತ್ತ ಮುಖ ಮಾಡಿದ್ದರು. ಈ ಗ್ರೂಪ್ ಗಳು ಟೆಸ್ಟ್ ನಡೆಸಲು, ನೋಟ್ಸ್ ಕಳಿಸಲಷ್ಟೇ ಸೀಮಿತಗೊಂಡಿವೆ. ಇದು ಗ್ರೂಪ್ ಗಳನ್ನು ಬಳಸಿಕೊಂಡು ವಾರಾಂತ್ಯದಲ್ಲಿ ಆನ್ಲೈನ್ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಮಾಡಬಹುದು. ಚರ್ಚಾ ಸ್ಪರ್ಧೆ, ಆಶುಭಾಷಣ, ಪ್ರಬಂಧದಂತಹ ಚಟುವಟಿಕೆಗಳ ಮೂಲಕ ನಾಯಕತ್ವ ಗುಣ, ಜ್ಞಾನವೃದ್ಧಿ, ದೇಶಕ್ಕೆ ಉಪಯುಕ್ತ ಸಲಹೆಗಳನ್ನು ನೀಡುವ ಕೌಶಲಗಳನ್ನು ಪ್ರೌಢಾವಸ್ಥೆಯಿಂದಲೇ ಬೆಳವಣಿಗೆ ಕಾಣಲು ಅವಕಾಶ ದಂತಾಗುತ್ತದೆ.
ಪ್ರತಿಭಾ ಕಾರಂಜಿ…ಆನ್ ಲೈನ್ ಆಶ್ರಯ?
Date: