Sports News ಚೀನಾದ ಹಾಂಗ್ ಝೌನಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಕ್ರಿಕೆಟ್ ನಲ್ಲಿ ಭಾರತ ತಂಡ ಚಿನ್ನದ ಪದಕ ಗಳಿಸಿದೆ.
ಮಧ್ಯಮ ವೇಗಿ ತಿತಾಸ್ ಸಾಧು ಅವರ ಅಮೋಘ ಬೌಲಿಂಗ್ ಬಲದಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಜಯಗಳಿಸಿದೆ.
ಫೈನಲ್ ಮಧ್ಯದಲ್ಲಿ ಟೈಟಸ್ ದಾಳಿಯ ಬಲದಿಂದ ಭಾರತ ತಂಡವು ಶ್ರೀಲಂಕಾ ಎದುರು 19 ರನ್ ಗಳ ಗಳಿಸಿದೆ.
ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆಮಾಡಿಕೊಂಡಿತು. ಎರಡು ಪಂದ್ಯಗಳ ಅಮಾನತು ಶಿಕ್ಷೆ ಪೂರೈಸಿ ಮರುಳಿದ ಹರ್ಮನ್ ಪ್ರೀತ್ ಕೌರ್ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದರು.
ಬ್ಯಾಟರ್ ಸ್ಮೃತಿ ಮಂದಾನ 46 ರನ್ ಗಳಿಸಿದರು. ಜಮೀಮಾ ರಾಡ್ರಿಗಸ್ ಅವರ ಉತ್ತಮ ಬ್ಯಾಟಿಂಗ್ ಬಲದಿಂದ 20 ಓವರ್ ಗಳಲ್ಲಿ ಏಳು ವಿಕೆಟ್ ಗಳಿಗೆ 116 ಗಳಿಸಿದರು. ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು 20 ಓವರ್ ಗಳಲ್ಲಿ ಎಂಟು ವಿಕೆಟ್ ಗಳಿಗೆ 97 ರನ್ ಗಳಿಸಿ ಸೋಲನ್ನಪ್ಪಿತು. ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಸಿನಿ ಪಿರೇರಾ ಮತ್ತು ನಿಕಾಶಿ ಬಿಸಿ ಇಲ್ವಾ ಅವರ ಹೋರಾಟ ಫಲ ನೀಡಲಿಲ್ಲ.
Sports News ತಿತಾಸ್ ಪ್ರಮುಖ ಮೂವರು ಬ್ಯಾಟರ್ ಗಳ ವಿಕೆಟ್ ಗಳಿಸಿದರು. ವಿಜಯಪುರದ ರಾಜೇಶ್ವರಿ ಗಾಯಕವಾಡ ಅವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಗೆ ಪೆಟ್ಟು ನೀಡಿದರು. ದೀಪ್ತಿ ಶರ್ಮಾ, ಪೂಜಾ ವಸ್ತ್ರಕರ್ ಹಾಗೂ ದೈವಿಕ ವೈದ್ಯ ತಲ ಒಂದು ವಿಕೆಟ್ ಗಳಿಸಿದರು.