Monday, December 15, 2025
Monday, December 15, 2025

Uttaradi Math ಚಂದ್ರಯಾನದ ಯಶಸ್ಸು ಕಂಡ ವಿಜ್ಞಾನಿಗಳು ರಾಮಚಂದ್ರನ ದರ್ಶನಕ್ಕೆ ಬಂದಿದ್ದಾರೆ- ಶ್ರೀಸತ್ಯಾತ್ಮತೀರ್ಥರು

Date:

Uttaradi Math ಚಂದ್ರಯಾನದ ಮೂಲಕ ಭಾರತೀಯ ವಿಜ್ಞಾನಿಗಳು ಇಡೀ ಭಾರತ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಭಾರತ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ ಎಂದು ಉತ್ತರಾದಿ ಮಠಾ ಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರಿನಲ್ಲಿ ಭಾನುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಇಸ್ರೋ ಇತ್ತೀಚೆಗೆ ಕೈಗೊಂಡ ಚಂದ್ರಯಾನ-3ರ ಯಶಸ್ಸಿನಲ್ಲಿ ಭಾಗಿಯಾದ ವಿಜ್ಞಾನಿಗಳನ್ನು ಅಭಿನಂದಿಸಿ ನಂತರ ಅನುಗ್ರಹ ಸಂದೇಶದ ನೀಡಿದರು.

ಪ್ರಾತಿನಿಧಿಕವಾಗಿ ಇಲ್ಲಿ ಕೆಲ ವಿಜ್ಞಾನಿಗಳನ್ನು ಮಾತ್ರ ಸನ್ಮಾನಿಸಲಾಗಿದೆ.

ಚಂದ್ರಯಾನದ ಸಫಲತೆಗೆ ಕಾರಣಕರ್ತರಾದ ಎಲ್ಲ ವಿಜ್ಞಾನಿಗಳನ್ನೂ ನಾವು ಅಭಿನಂದಿಸುತ್ತಿದ್ದೇವೆ. ಇಲ್ಲಿ ವಿಜ್ಞಾನಿಗಳು ತಮ್ಮ ಅಭಿಪ್ರಾಯ ಹೇಳುವಾಗ ಕೇವಲ ವಿಜ್ಞಾನಿಗಳಾಗಿ ಹೇಳದೆ ತತ್ವಜ್ಞಾನಪೂರ್ವಕವಾಗಿ ಮಾತನಾಡಿದ್ದಾರೆ. ಎಲ್ಲವೂ ಆಗಿದ್ದು ದೇವರ ಅನುಗ್ರಹದಿಂದ ಎಂಬ ಅವರ ಮಾತು ಸತ್ಯವಾದದ್ದು ಎಂದರು.

ಚoದ್ರನ ದಕ್ಷಿಣ ಧೃವಕ್ಕೆ ಇದುವರೆಗೂ ಯಾವ ದೇಶಗಳಿಗೂ ಹೋಗಲು ಸಾಧ್ಯವಾಗಿಲ್ಲ. ಆದರೆ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿರುವುದು ವಿಶೇಷ. ವಿಜ್ಞಾನಿಗಳ ಪರಿಶ್ರಮಕ್ಕೆ ನಾವು ಅಭಿನಂದಿಸಬೇಕು. ದೇವರು ಅವರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಅನುಗ್ರಹಿಸಲಿ ಎಂದರು.

ಎಲ್ಲ ಕ್ಷೇತ್ರದಲ್ಲಿ ವಿಪ್ರರ ಸಾಧನೆ :
ಪಂಡಿತ ಪೂಜ್ಯರಾದ ಸತ್ಯಧ್ಯಾನಾಚಾರ್ಯ ಕಟ್ಟಿ ಮಾತನಾಡಿ, ವೈದ್ಯಕೀಯ, ವಿಜ್ಞಾನ, ರಾಜಕೀಯ, ಆಡಳಿತ, ನ್ಯಾಯಾಂಗ ಹಾಗೂ ಐಟಿಬಿಟಿ ಹೀಗೆ ಎಲ್ಲ ರಂಗಗಳಲ್ಲೂ ಬ್ರಾಹ್ಮಣ ಸಮಾಜದ ಕೊಡುಗೆ ಸಾಕಷ್ಟು ಇದೆ. ಏನಾದರೂ ವಿಶೇಷತೆ ನಡೆದಿದ್ದರೆ ಅಲ್ಲಿ ಬ್ರಾಹ್ಮಣರ ಪಾತ್ರ ಇದ್ದೆ ಇರುತ್ತದೆ. ಅದಕ್ಕೆ ಪ್ರಧಾನವಾದ ಕಾರಣ ಗಾಯತ್ರೀ ಮಂತ್ರದ ಸಿದ್ಧಿ ಎಂದರು.

ಇಡೀ ವಿಶ್ವವೇ ಆಶ್ಚರ್ಯ ಪಡುವಂತಹ ಸುದ್ದಿಗೆ ಕಾರಣರಾದವರು ಇಲ್ಲಿಗೆ ಬಂದಿರುವ ವಿಜ್ಞಾನಿಗಳು. ಇದು ಅವರ ಒಂದೆರಡು ದಿನಗಳ ಫಲವಲ್ಲ. ಅನೇಕ ವರ್ಷಗಳ ಸಾಧನೆಯ ಫಲ. ಚಂದ್ರಯಾನದ ಯಶಸ್ಸು ಕಂಡವರು ಈಗ ಮೂಲರಾಮಚಂದ್ರ ದೇವರ ದರ್ಶನಾಶೀರ್ವಾದಕ್ಕೆ ಬಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಪ್ರೋಗ್ರಾಂ ಡೈರೆಕ್ಟರ್ ವಿ.ಆರ್. ಕಟ್ಟಿ, ಡೆಪ್ಯುಟಿ ಡೈರೆಕ್ಟರ್‌ಗಳಾದ ಡಾ.ಎಂ. ರವೀಂದ್ರ, ರಂಗನಾಥ ಎಕ್ಕುಂಡಿ, ಸುಬ್ರಹ್ಮಣ್ಯ ಉಡುಪ, ಡಾ.ಜಿ. ನಾಗೇಶ್, ಗ್ರೂಪ್ ಡೈರೆಕ್ಟರ್‌ಗಳಾದ ವೈ.ಎಲ್. ಮಧುಸೂಧನ್, ರಾಜೇಂದ್ರ ಕುಮಾರ್, ಬಿ.ಎಸ್. ಶ್ರೀನಿವಾಸ್, ಜಯಸಿಂಹ, ಪ್ರಮೋದ್ ಬೆಳಗೋಂಕರ್, ಎಂ.ಎಸ್. ಶ್ರೀನಿಧಿ ಭಾಗವಹಿಸಲಿದ್ದಾರೆ.

Uttaradi Math ಈ ಪೈಕಿ ಕೆಲವರು ಮಾತನಾಡಿ ದೇವರು ಹಾಗೂ ಗುರುಗಳ ಅನುಗ್ರಹದಿಂದ ಇದೆಲ್ಲವೂ ಸಾಧ್ಯವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Uttaradi Math ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ನವರತ್ನ ರಾಮಾಚಾರ್ಯ, ಕಡೂರು ಮಧುಸೂಧನಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲ್, ಮುರಳಿ, ಸತ್ಯನಾರಾಯಣ ನಾಡಿಗ್, ಧೃವಾಚಾರ್, ಜಯತೀರ್ಥ ಬೆಂಗಳೂರು, ಶ್ರೀಪಾದ್ ಶಿವಮೊಗ್ಗ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...