ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನವಾದ ಸೋಮವಾರ 5 ವಿಕೇಟ್ ಗೆ 140 ರನ್ ಗಳಿಂದ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ತಂಡ, ಹಿಂದಿನ ಮೊತ್ತಕ್ಕೆ 27 ರನ್ ಸೇರಿಸಿ ಕೇವಲ ಒಂದೇ ತಾಸಿನೊಳಗೆ ಸರ್ವ ಪತನಗೊಂಡಿತು.
ಇದರೊಂದಿಗೆ ಆತಿಥೇಯ ತಂಡ ಒಂದುವರೆ ದಿನ ಬಾಕಿ ಇರುವಂತೆಯೇ ಬೃಹತ್ ರನ್ ಅಂತರದ ಜಯ ದಾಖಲಿಸಿದೆ.
ಪ್ರವಾಸಿ ತಂಡಕ್ಕೆ ಭಾರಿ ಅಂತರದ ಸೋಲಾಗಿದೆ. 2015ರಲ್ಲಿ ದೆಹಲಿಯಲ್ಲಿದ್ದ ಆಫ್ರಿಕಾ ವಿರುದ್ಧ 337 ರನ್ ಗಳಿಂದ ಜಯಗಳಿಸಿದ್ದು , ಇದುವರೆಗಿನ ಭಾರತದ ಅತಿ ದೊಡ್ಡ ಗೆಲುವಾಗಿತ್ತು.
ರವಿಚಂದ್ರನ್ ಅಶ್ವಿನ್ 34ಕ್ಕೆ 4 ಮತ್ತು ಜಯಂತ್ ಯಾದವ್49ಕ್ಕೆ 4 ಅವರ ಕರಾರುವಾಕ್ ಬೌಲಿಂಗ್ ನಿರ್ವಹಣೆ ನೆರವು ಪಡೆದ ಭಾರತ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 372 ರನ್ ಗಳ ಅಂತರದಿಂದ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು.
ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿತು.
ಇದಲ್ಲದೆ, ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಾನ್ಸ್ ಸೋಲಿಗೆ ಕೊಹ್ಲಿ ಬಳಗ ಸೇಡು ತೀರಿಸಿಕೊಂಡಿತು. ಈ ಜಯದೊಂದಿಗೆ ಐಸಿಸಿ ಟೆಸ್ಟ್ ರಾಂಕಿಂಗ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಏರಿದರೆ, ಕಿವೀಸ್ ದ್ವಿತೀಯ ಸ್ಥಾನಕ್ಕೆ ಕುಸಿಯಿತು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದ ಪುಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟಿ 20 ಏಕದಿನ ಹಾಗೂ ಟೆಸ್ಟ್ ಸೇರಿ ಮೂರು ಮಾದರಿಯ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಗೆಲುವು ಕಂಡ ಬಳಿಕ ಅವರು ಈ ಹಿರಿಮೆಗೆ ಪಾತ್ರರಾದರು.
ಕೊಹ್ಲಿ 50 ಟೆಸ್ಟ್ ಪಂದ್ಯಗಳು,153 ಏಕದಿನ ಪಂದ್ಯಗಳು ಹಾಗೂ 59 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದ್ದಾರೆ.
Date: