Wednesday, October 2, 2024
Wednesday, October 2, 2024

Uttaradi Math ರಾಜ್ಯ & ರಾಜ ನಿಷ್ಠೆಗಳಿಗೆ ಮಹಾಭಾರತ ಗ್ರಂಥಮಾರ್ಗದರ್ಶಿ- ಶ್ರೀಸತ್ಯಾತ್ಮತೀರ್ಥರು

Date:

Uttaradi Math ರಾಜ್ಯನಿಷ್ಠೆ ಮತ್ತು ರಾಜನಿಷ್ಠೆಗಳು ಹೇಗೆ ಇರಬೇಕು ಎಂಬುದನ್ನು ಮಹಾಭಾರತ ಹೇಳುತ್ತದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಹೊಳೆಹೊನ್ನೂರಿನಲ್ಲಿ
ಮಂಗಳವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶದ ನೀಡಿದರು.

ಕೆಲವರಿಗೆ ರಾಜ್ಯ ನಿಷ್ಠೆ ಇರತ್ತೆ ರಾಜ ನಿಷ್ಠೆ ಇರಲ್ಲ. ಮತ್ತೆ ಕೆಲವರಿಗೆ ರಾಜ ನಿಷ್ಠೆ ಇರುತ್ತದೆ ರಾಜ್ಯದ ಹಿತಚಿಂತನೆ ಇರುವುದಿಲ್ಲ. ತಾನು ನಂಬಿದ ರಾಜನನ್ನು, ನಾಯಕನನ್ನು ಸಂತೋಷಪಡಿಸುವ ಒಂದೇ ಗುರಿಯಲ್ಲಿ ರಾಜ್ಯಕ್ಕೆ ಅಹಿತಾವಾದರೂ ಅದನ್ನು ಸಹನೆ ಮಾಡುವ, ಉದಾಸೀನ ಮಾಡುವಂತಹ ಮಂದ ಬುದ್ಧಿಯವರು ಕೆಲವರು. ರಾಜ್ಯದ ಹಿತವನ್ನು ಮಾತ್ರ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡು ತನ್ನಂತೆಯೇ ರಾಜ್ಯದ ಹಿತವನ್ನು ಬಯಸುವುದಕ್ಕೆ ಮುಖ್ಯ ಅಧಿಕಾರಿಯಾಗಿ ತನ್ನ ಪ್ರಾಣವನ್ನೂ ಅದಕ್ಕಾಗಿ ಮೀಸಲಿಟ್ಟಂತಹ ರಾಜರ ಬಗ್ಗೆ ನಿಷ್ಠೆಯನ್ನು ಇಟ್ಟುಕೊಳ್ಳದಂತಹ ಅಪರಿಪೂರ್ಣ ವಿವೇಕರು ಕೆಲವರು. ಮಹಾಭಾರತ ಎರಡನ್ನೂ ಸರಿದೂಗಿಸಿ ಎನ್ನುತ್ತದೆ ಎಂದರು.

Uttaradi Math ಪ್ರಾಮಾಣಿಕನಾದ, ಧಾರ್ಮಿಕನಾದ, ನಿಸ್ವಾರ್ಥದಿಂದ ಸೇವೆ ಮಾಡುವ, ದೇವರ ಭಕ್ತನಾದ, ಶುದ್ಧವಾದ ರಾಜನೀತಿಯನ್ನು ಪರಿಪಾಲನೆ ಮಾಡುವ ರಾಜನಿದ್ದರೆ ರಾಜನಿಷ್ಠೆ ಇಟ್ಟುಕೊಳ್ಳಬೇಕು. ಮನುಷ್ಯನಿಗೆ ನಾನೇಕೆ ದಾಸನಾಗಬೇಕು ಎಂಬ ಭಾವನೆಯಿಂದಲೇ ಇಂದು ವ್ಯವಸ್ಥೆ ತಲೆಕೆಳಗಾಗಿ ಹೋಗಿದೆ. ಇಲ್ಲಿ ಯಾರೂ ದೊಡ್ಡವರು, ಚಿಕ್ಕವರಲ್ಲ. ಯಾರೂ ಮೇಲು ಕೀಳಲ್ಲ. ಒಂದು ವ್ಯವಸ್ಥೆಯಲ್ಲಿ ಚೆನ್ನಾಗಿ ಇರಬೇಕಾದರೆ ಯರ‍್ಯಾರು ಯಾವ ಯಾವ ಜವಾಬ್ದಾರಿ ತೆಗೆದುಕೊಂಡಿದ್ದಾರೋ ಅವರು ಅದನ್ನು ನಿಭಾಯಿಸಬೇಕು ಎಂದಷ್ಟೇ ಇದರ ಅರ್ಥ. ಶಾಸ್ತ್ರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...

CM Siddharamaih ಸಿದ್ಧರಾಮಯ್ಯ ರಾಜಿನಾಮೆ ಬೇಡ.ಬೆಂಬಲಿಸಿ ಜನಜಾಥಾ-‘ಅಹಿಂದ’ ಮಹೇಶ್

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬೇಡ....