Sri Uttaradi Math ಎಲ್ಲ ಶುಭ ಕಾರ್ಯಗಳಲ್ಲಿ ಬರುವ ವಿಘ್ನಗಳ ಪರಿಹಾರಕ್ಕಾಗಿ ಗಣಪತಿಯನ್ನು ನಾವು ನಿತ್ಯದಲ್ಲಿ ಸ್ಮರಣೆ ಮಾಡಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರಿನಲ್ಲಿ,
ಸೋಮವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವ ಮತ್ತು ಗಣಪತಿ ಹಬ್ಬದ ನಿಮಿತ್ತ ಶಮಂತಕೋಪಾಖ್ಯಾನದ ಅನುಗ್ರಹ ಸಂದೇಶದ ನೀಡಿದರು.
ಭಗವಂತ ಆದೇಶ ಮಾಡಿದ ಸತ್ಕಾರ್ಯಗಳನ್ನು ಮಾಡುವಾಗ ಸಜ್ಜನರಿಗೆ ಬರುವಾಗ ವಿಘ್ನಗಳನ್ನು ತಡೆಯಲು ಗಣಪತಿಗೆ ವಿಶಿಷ ಸ್ಥಾನವನ್ನು ದೇವರು ಕೊಟ್ಟಿದ್ದಾನೆ.
ವಿಶ್ವನಾಮಕನಾದ ಪರಮಾತ್ಮನ 19 ಮುಖದೊಳಗಿನ ಮಧ್ಯದ ಮುಖ ಗಜಮುಖ. ಅಂತಹ ಗಜಮುಖವನ್ನು ಗಣಪತಿ ಪಡೆದಿದ್ದಾನೆ ಎಂದರು.
Sri Uttaradi Math ದೇವರ ಗುಣಗಳ ಚಿಂತನ, ದೇವರ ಸರ್ವೋತ್ತಮತ್ವ, ದೇವರ ಆಜ್ಞೆ ಪಾಲಿಸಬೇಕಾದ ಪ್ರವೃತ್ತಿ ಇದೇ ಮೊದಲಾದ ಸುಜ್ಞಾನಕ್ಕೆ ಬರುವ ವಿಘ್ನವನ್ನು ತಡೆಯಬೇಕೆಂದು ಗಣಪತಿಯಲ್ಲಿ ನಾವು ಪ್ರಾರ್ಥಿಸಬೇಕು. ವೇದವ್ಯಾಸ ದೇವರ ಆಜ್ಞೆಯಂತೆ ಮಹಾಭಾರತವನ್ನು ಬರೆದ ಗಣಪತಿ ನಮ್ಮ ಮಸ್ತಕದಲ್ಲಿಯೂ ಮಹಾಭಾರತದ ಜ್ಞಾನವನ್ನು ನೀಡುವಂತೆ ಪ್ರಾರ್ಥಿಸಬೇಕು ಎಂದರು.