Wednesday, December 17, 2025
Wednesday, December 17, 2025

Poshan Abhiyan ಮಕ್ಕಳು ಹಸಿವಿನಿಂದ ಬಳಲಬಾರದು ಪೌಷ್ಠಿಕ ಆಹಾರ ಸೇವಿಸಬೇಕು-ಮುನೀರ್ ಅಹ್ಮದ್

Date:

Poshan Abhiyan ಮಕ್ಕಳ ದೈಹಿಕ ಕ್ಷಮತೆ ಹಾಗೂ ಕ್ರಿಯಶೀಲತೆಗಳಿಗೆ ಪೌಷ್ಠಿಕ ಆಹಾರಗಳು ಅಗತ್ಯವಿದ್ದು ಮಕ್ಕಳು ಅಪೌಷ್ಠಿಕತೆಯಿಂದ ಬಳಲದಂತೆ ಆಹಾರವನ್ನು ನೀಡುವುದರೊಂದಿಗೆ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು ಚಿಕ್ಕಮಗಳೂರು ನಗರಸಭಾ ಸದಸ್ಯ ಮುನೀರ್ ಅಹ್ಮದ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಶಿಶು ಅಭಿವೃದಿ ಯೋಜನೆ ವತಿಯಿಂದ ನಗರದ ಉಪ್ಪಳ್ಳಿ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನದ ಮಾಸಾಚರಣೆ ಕಾರ್ಯಕ್ರಮವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ತರಕಾರಿಗಳನ್ನು ತೆಗೆದಿಟ್ಟು ಊಟ ಮಾಡುತ್ತಿರುವ ಬೆಳವಣಿಗೆ ಹೆಚ್ಚಾಗುತ್ತಿದೆ. ರಾಗಿ, ನವಣೆ ಸೇರಿದಂತೆ ಮೊದಲಾದ ಧಾನ್ಯಗಳ ಬಳಕೆ ಹೆಚ್ಚಾಗಬೇಕಿದೆ. ಮಕ್ಕಳು ಹಸಿವಿನಿಂದ ಬಳಲಬಾರದು. ಪೌಷ್ಠಿಕಾಂಶ ಆಹಾರವನ್ನು ಸೇವಿಸುವ ಮೂಲಕ ಆಹಾರ ಪದಾರ್ಥಗಳನ್ನು ವ್ಯರ್ಥಗೊಳಿಸಬಾರದು ಎಂದು ಹೇಳಿದರು.

ಪೋಷಣ್ ಅಭಿಯಾನದ ಮೇಲ್ವಿಚಾರಕಿ ಶ್ರೀಮತಿ ಎಸ್.ಮಂಜುಳಾ ಆರೋಗ್ಯವಂತ ಸಮಾಜ ನಿರ್ಮಾಣ ಕ್ಕಾಗಿ ಪೌಷ್ಠಿಕಾಶಂಶಯುಕ್ತ ಆಹಾರ ಬಳಕೆಯ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

Poshan Abhiyan ಸಂದರ್ಭದಲ್ಲಿ ನಗರಸಭಾ ಸದಸ್ಯ ಖಲಂದರ್, ಪೋಷಣ್ ಅಭಿಯಾನದ ಮೇಲ್ವಿಚಾರಕಿ ಶ್ರೀಮತಿ ಎಸ್.ಮಂಜುಳಾ, ಸಂಯೋಜಕಿ ಶ್ರೀಮತಿ ದಿವ್ಯ, ಹಿರಿಯ ಮೇಲ್ವಿಚಾಕಿ ಪುಷ್ಪಾವತಿ ಬಿರಾದರ್, ಮುಖ್ಯೋ ಪಾಧ್ಯಾಯ ಸೋಮಶೇಖರ್, ಅಂಗನವಾಡಿ ಶಿಕ್ಷಕಿರಾದ ಸುಮಿತ, ಕೋಮಲ, ವಸೀಮ ಬಾನು, ಶಬೀನಾ ಬಾನು ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...