Thursday, March 19, 2026
Thursday, March 19, 2026

Tarunodaya Institute ಚಂದ್ರಯಾನ ಯಶಸ್ಸಿನಲ್ಲಿ ಎಲ್ಲರ ಶ್ರಮವಿದೆ- ವಿಜ್ಞಾನಿ ಪುಟ್ಟಮ್ಮ ಶಿವಾನಿ

Date:

Tarunodaya Institute ಪೋಷಕರ ಮಾರ್ಗದರ್ಶನ, ಇಚ್ಛಾಶಕ್ತಿ ಹಾಗೂ ಗುರುಗಳ ಪ್ರೋತ್ಸಾಹದಿಂದ ವಿಜ್ಞಾನ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಚಂದ್ರಯಾನ ಯಶಸ್ವಿ ಉಡಾವಣೆ ಕಾರ್ಯದ, ಇಸ್ರೋ ಸಂಸ್ಥೆಯ ವಿಜ್ಞಾನಿ ಪುಟ್ಟಮ್ಮ ಶಿವಾನಿ ಹೇಳಿದರು.

ಶಿವಮೊಗ್ಗ ನಗರದಲ್ಲಿ ಮಕ್ಕಳ ವಿದ್ಯಾಸಂಸ್ಥೆ ಮತ್ತು ತರುಣೋದಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತದ ಇಸ್ರೋ ಸಂಸ್ಥೆಯಲ್ಲಿ ಇಪ್ಪತ್ತು ಸಾವಿರ ಉದ್ಯೋಗಿಗಳು ಇದ್ದು, ಎಲ್ಲಾ ವಿಷಯಗಳ ವಿದ್ಯಾಭ್ಯಾಸ ಮಾಡಿದವರು ಇದ್ದಾರೆ. ಚಂದ್ರಯಾನ ಯಶಸ್ಸಿನಲ್ಲಿ ಎಲ್ಲರ ಸಹಯೋಗ ಶ್ರಮ ಇದೆ ಎಂದು ತಿಳಿಸಿದರು.

ನನ್ನ ಪ್ರಾಥಮಿಕ ಶಾಲಾ ಸ್ನೇಹಿತರು, ಯೂತ್ ಹಾಸ್ಟೇಲ್ಸ್ ಅಸೋಸಿಯೇಷನ್ ತರುಣೋದಯ ಘಟಕದ ಸನ್ಮಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ನನ್ನ ಸ್ನೇಹಿತರನ್ನು ಕಂಡು ಬಹಳ ಸಂತೋಷ ವಾಗಿದೆ ಎಂದರು.

ಕುಟುಂಬದ ಪ್ರತಿಯೊಬ್ಬರು ನನ್ನ ಏಳಿಗೆಯ ಬೆನ್ನೆಲುಬಾಗಿ ನಿಂತಿದ್ದರು. ಯಾವಾಗಲು ನನ್ನ ಏಳಿಗೆಗೆ ಸಹಕಾರ ಕೊಡುತ್ತಿದ್ದರು. ಇದರಿಂದ ಉನ್ನತ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು. ನನ್ನ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗಿಲ್ಲ ಅಂದುಕೊಂಡಿದ್ದೇನೆ. ನನ್ನ ಕೆಲಸದ ಒತ್ತಡ ಅಂತಹದ್ದು. ನನ್ನ ಇಬ್ಬರು ಮಕ್ಕಳು ಚನ್ನಾಗಿ ಓದಿಕೊಂಡು ಉತ್ತಮ ಜೀವನ ನಡೆಸುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

Tarunodaya Institute ಮಕ್ಕಳ ವಿದ್ಯಾ ಸಂಸ್ಥೆ 1982 ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿ ಮಿತ್ರರು ಹಾಗೂ ಯೂತ್ ಹಾಸ್ಟೆಲ್ ತರುಣೋದಯ ಘಟಕದ ಪದಾಧಿಕಾರಿಗಳ ವತಿಯಿಂದ ಇಸ್ರೋ ಸಂಸ್ಥೆಯ ವಿಜ್ಞಾನಿ, ಕೋಣಂದೂರು ಲಿಂಗಪ್ಪ ಪುತ್ರಿ ಪುಟ್ಟಮ್ಮ ಶಿವಾನಿ ಅವರಿಗೆ ಸನ್ಮಾನಿಸಲಾಯಿತು. ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಗಣೇಶ್ ಅಂಗಡಿ ಸ್ವಾಗತಿಸಿದರು. ರಾಘವೇಂದ್ರ ನಿರೂಪಿಸಿದರು. ಹಳೆಯ ವಿದ್ಯಾರ್ಥಿಗಳು ಕುಟುಂಬದವರು, ಯೂತ್ ಹಾಸ್ಟೆಲ್ಸ್ ಚೇರ್ಮನ್ ವಾಗೇಶ್, ಸುರೇಶ್ ಕುಮಾರ್, ಡಾ. ಕೌಸ್ತುಭ, ಡಾ. ಶೇಖರ್ ಗೌಳೇರ್, ದಿಲೀಪ್ ನಾಡಿಗ್, ನಾಗರಾಜ್, ಲಕ್ಷ್ಮೀ, ರವೀಂದ್ರ, ಜಿ.ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...