Wednesday, December 17, 2025
Wednesday, December 17, 2025

Sunni Youth Association ಸುನ್ನಿ ಯುವಜನ ಸಂಘವು ಸಮಾಜಸೇವೆ ದೇಶಪ್ರೇಮ ಬೆಳೆಸುವ ಕಾರ್ಯ ಮಾಡಲಿ-ಅಬ್ದುಲ್ ಹಫೀಳ್ ಅದಿ

Date:

Sunni Youth Association ಚಿಕ್ಕಮಗಳೂರು ನಗರದ ಉಪ್ಪಳ್ಳಿ ಸಮೀಪ ಶಾದುಲಿ ಜುಮ್ಮಾ ಮಸೀದಿಯಲ್ಲಿ ಜಿಲ್ಲಾ ಸುನ್ನಿ ಯುವಜನ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಎಸ್.ವೈ.ಸ್. ಮೂರು ದಶಕ ದಾಟುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಾಯಕರುಗಳು ಸಂಚರಿಸಿ ಸಮ್ಮೇಳನಕ್ಕೆ ಅಧಿಕೃತ ಭಾಗವಹಿಸಲು ಪ್ರಚಾರ ಕಾರ್ಯದಲ್ಲಿ ತೊಡಗಿದೆ ಎಂದರು.

ಇಂದಿನ ದಿನದಲ್ಲಿ ಯುವಶಕ್ತಿಯ ಯೌವನವನ್ನು ಅದಮ್ಯ ಶಕ್ತಿ ವಿನಾಶಕಾರಿ ಕೃತ್ಯಗಳಲ್ಲಿ ಬಳಸುತ್ತಿರುವುದನ್ನು ತಡೆಯುವ ಮೂಲಕ ಸಮಾಜಸೇವೆ, ದೇಶಪ್ರೇಮ ಮೂಡಿಸುವ ಸಾಮಾಜಿಕ ಚಟುವಟಿಕೆಗಳಲ್ಲಿ ಮಾರ್ಗ ದರ್ಶಕರಾಗಿ ಎಸ್.ವೈ.ಎಸ್. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಯುವಜನತೆಯನ್ನು ಸಮಾಜಘಾತುಕ ಶಕ್ತಿಗಳಿಂದ ಹೊರತರುವ ಮೂಲಕ ಪ್ರತಿಯೊಬ್ಬರಿಗೆ ಸಮಾನ ಧರ್ಮದ ಬಗ್ಗೆ ಚಿಂತಿಸುವ ಕಾರ್ಯಕ್ಕೆ ಕೈಹಾಕಿದೆ. ಇದಕ್ಕೆ ಇಂದಿನ ಯುವಕರು ಸ್ವಯಂ ಪ್ರೇರಿತರಾಗಿ ಎಸ್.ವೈ. ಎಸ್. ಸೇರ್ಪಡೆಗೊಂಡು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

Sunni Youth Association ಎಸ್.ವೈ.ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ಮಾತನಾಡಿ ಮಂಗಳೂರು ಜಿಲ್ಲೆಯಿಂದ ಪ್ರಾರಂಭ ಎಸ್.ವೈ.ಎಸ್. ಸಂಸ್ಥೆ ಇದೀಗ ರಾಜ್ಯಾದ್ಯಂತ ಬೆಳೆಯಲಾರಂಭಿಸಿದೆ. ಪ್ರಸ್ತುತ ಯುವ ಜನತೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರಿದಾರಿ ಕೊಂಡೊಯ್ಯುವ ಮಹತ್ತರ ಜವಾಬ್ದಾ ರಿ ಎಸ್‌ವೈಎಸ್ ಮಾಡುತ್ತಿದೆ ಎಂದು ತಿಳಿಸಿದರು.
ರಾಜ್ಯ ನಾಯಕರಾದ ಸಯ್ಯಿದ್ ಶಾಫೀ ಮಾರ್ನಳ್ಳಿ, ಎಂಬಿಎಂ ಸಾದಿಕ್, ವಕೀಲ ಹಂಝತ್ ಉಡುಪಿ, ಅಬ್ದುಲ್ ರಹ್ಮಾನ್ ರಝ್ವಿ, ಶಾಹುಲ್ ಹಮೀದ್ ಮೌಲಾನಾ ಶಿವಮೊಗ್ಗ, ಹಸೈನಾರ್ ಆನೆಮಹಲ್ ಮಾತನಾಡಿದರು.

ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಾಗುಂಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಯೂಸುಫ್ ಹಾಜಿ ಉಪ್ಪಳ್ಳಿ, ಎಸ್‌ವೈಎಸ್ ರಾಜ್ಯ ಸದಸ್ಯ ಸುಲೈಮಾನ್ ಶೆಟ್ಟಿಕೊಪ್ಪ, ಕಾರ್ಯದರ್ಶಿ ಇಬ್ರಾಹಿಂ, ಕೋಶಾಧಿಕಾರಿ ಉಸ್ಮಾನ್ ಹಂಡುಗುಳಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...