Sri Uttaradi Math ದೇವರಿಗೆ ಭಕ್ತಿ ಪೂರ್ವಕವಾದ ಮನಸ್ಸಿನಿಂದ, ಅರ್ಥಪೂರ್ಣವಾದ ವಚನಗಳಿಂದ ಪೂಜಿಸಬೇಕು. ಯಜ್ಞ ಯಾಗಗಳಿಂದ ಅರ್ಚಿಸಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರಿನಲ್ಲಿ
ಗುರುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶ ನೀಡಿದರು.
ದೇವತೆಗಳಿಗೆ ಯಜ್ಞಯಾಗಗಳಿಂದ ಸಂತೋಷ. ಹೀಗಾಗಿ ಯಜ್ಞ ಮಾಡುವುದು ನಮ್ಮ ಕರ್ತವ್ಯ ಆಗಿದೆ. ಹೀಗಾಗಿ ಇಚ್ಛೆ ಇಟ್ಟುಕೊಂಡು ಯಜ್ಞವನ್ನು ಮಾಡಬಾರದು. ಮಾಡಲೇಬೇಕಾದ ಕರ್ತವ್ಯಕ್ಕೆ ಅಪೇಕ್ಷೆ ಇಟ್ಟುಕೊಳ್ಳಬಾರದು ಎಂದರು.
ವಿದ್ಯೆಗೆ ವಿನಯ ಭೂಷಣ:
ಪ್ರವಚನ ನೀಡಿದ ಪಂಡಿತ ರಂಗಾಚಾರ್ಯ ಜೋಷಿ, ರಾಮಾಯಣ ಮತ್ತು ಸುಂದರಕಾoಡದ ಇಡೀ ವರ್ಣನೆಯನ್ನು ಒಂದೇ ಶ್ಲೋಕದಲ್ಲಿ ಶ್ರೀ ಸತ್ಯಧರ್ಮರು ನೀಡಿದ್ದಾರೆ.
ಅಂತಹ ದೊಡ್ಡ ಪಾಂಡಿತ್ಯ ಅವರದ್ದುಘಿ. ವಿಚಿತ್ರವಾದ ಬುದ್ಧಿಶಕ್ತಿ ಅವರದ್ದು ಎಂದರು.
ಇoದ್ರಿಯ ನಿಗ್ರಹ, ವಿನಯ ಇಲ್ಲದಿದ್ದರೆ ಏನೇ ಜ್ಞಾನ ಇದ್ದರೂ ಪ್ರಯೋಜನ ಇಲ್ಲ. ಇತಿಹಾಸ, ಪುರಾಣ, ಧರ್ಮಶಾಸ ತಿಳಿದಿದ್ದರೂ ವಿನಯ ಬದ್ಧರಾಗಿರಬೇಕು. ಅವರು ಮಾತ್ರ ಪಂಡಿತರೆನಿಸುತ್ತಾರೆ.
ಸನ್ಮಾರ್ಗದಲ್ಲಿ ಮುಳ್ಳು ಬಿದ್ದಂತೆ ಜಗತ್ತಿನಲ್ಲಿ ದುರ್ಜನರು ಇರುತ್ತಾರೆ. ಅವರನ್ನು ನಿಗ್ರಹ ಮಾಡಬೇಕು ಎಂದರು.
Sri Uttaradi Math ಪoಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ವಿದ್ಯಾ ಶಾಚಾರ್ಯ ಗುತ್ತಲ, ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಪ್ರಕಶಾಚಾರ್ಯ, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ, ಮೊದಲಾದವರಿದ್ದರು.