Dalit Conflict Committee ಕಾನೂನು ಬಾಹಿರವಾಗಿ ಖಾತೆ ಬದಲಾವಣೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತ ವನ್ನು ಒತ್ತಾಯಿಸಿದೆ.
ಈ ಸಂಬoಧ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಸಮಿ ತಿಯ ಚಿಕ್ಕಮಗಳೂರು ಜಿಲ್ಲಾ ಮುಖಂಡರುಗಳು ಖಾತೆ ಬದಲು ಮಾಡಿಕೊಟ್ಟಿರುವ ಗ್ರಾಮದ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಸಂಸ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ತಾಲ್ಲೂಕಿನ ಜಾಗರ ಹೋಬಳಿ ಅತ್ತಿಗಿರಿ ಗ್ರಾಮದ ಸರ್ವೆ ನಂ. 25 ರಲ್ಲಿ ಸಿದ್ದಮ್ಮ ಎಂಬುವವರಿಗೆ ಸೇರಿದ 3 ಎಕರೆ ಭೂಮಿಯಿದ್ದು ಅವರಿಗೆ ಐದು ಜನ ಮಕ್ಕಳಿದ್ದಾರೆ. ಈ ಭೂಮಿಯನ್ನು ತಹಶೀಲ್ದಾರ್, ರಾಜಸ್ವ ನಿರೀಕ್ಷರು ಹಾಗೂ ಗ್ರಾಮಲೆಕ್ಕಾಧಿಕಾರಿ ಪರಿಶೀಲನೆ ನಡೆಸದೇ ಏಕಾಏಕಿ ಅದೇ ಗ್ರಾಮದ ಮೂರು ಮಂದಿ ಹೆಸರಿಗೆ ಖಾತೆ ಬದಲಾವಣೆ ಮಾಡಲಾಗಿದೆ ಎಂದು ಆರೋ ಪಿಸಿದರು.
ಖಾತೆ ಬದಲಾವಣೆ ಸಂಬoಧ ಸಿದ್ದಮ್ಮ ಎಂಬುವವರ ಮಕ್ಕಳು ತಕರಾರು ಅರ್ಜಿ ಸಲ್ಲಿಸಿದ್ದು ತಾಲ್ಲೂಕು ಕಚೇರಿಯಿಂದ ನೋಟೀಸ್ ಸಹ ಬಂದಿದೆ. ಖಾತೆ ಸಂಬoಧ ಮೂರು ಬಾರಿ ತಾಲ್ಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದು ಈ ಪ್ರಕರಣವು ತನಿಖೆ ಹಂತದಲ್ಲಿದ್ದರೂ ಖಾತೆ ಬದಲಾವಣೆಯಾಗಿದೆ ಎಂದರು.
ಈ ಹಿಂದೆ ಇದೇ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಳೆದ 40 ವರ್ಷಗಳಿಂದ ಉಳುಮೆ ಮಾಡಿಕೊಂಡ ಬಂದಿದ್ದ ಸಿರವಾಸೆ ಗ್ರಾಮದ ಸಿದ್ದಯ್ಯ ಎಂಬುವವರು 2.6 ಗುಂಟೆ ಜಮೀನನ್ನು ಹಣದ ಆಮಿಷಕ್ಕೆ ಒಳಗಾಗಿ ಕಾನೂನು ಬಾಹಿರವಾಗಿ ನಕಲಿ ದಾಖಲೆ ಸೃಷ್ಟಿಸಿ ಇತರರಿಗೆ ಬದಲಾವಣೆ ಮಾಡಿಕೊಡಲಾಗಿದೆ ಎಂದು ದೂರಿದರು.
Dalit Conflict Committee ಆದ್ದರಿಂದ ಈ ರೀತಿಯ ಅಕ್ರಮ ಕಾರ್ಯಚಟುವಟಿಕೆಯಲ್ಲಿ ತೊಡಗಿರುವ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವ ಮೂಲಕ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ರಮೇಶ್, ಅತ್ತಿಗಿರಿ ಗ್ರಾಮದ ಕುಮಾರ್, ಸುರೇಶ್ ಹಾಜರಿದ್ದರು.