Mangala Gauri Vratha ಶ್ರಾವಣ ಮಾಸ ಬಂದರೆ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಪಂಚಮಿ, ದಾನಮ್ಮ ದೇವಿ, ಗೌರಿ ಗಣೇಶ ಹೀಗೆ ಧಾರ್ಮಿಕ ಪೂಜೆಯ ಆಚರಣೆಗಳು ಶುರುವಾಗುತ್ತವೆ. ಮಹಿಳೆಯರು ಮಂಗಳ ಗೌರಿ ವೃತವನ್ನು ಸಂಭ್ರಮದಿಂದ ಆಚರಿಸುತ್ತಾರೆ ಎಂದು ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್ ಹೇಳಿದರು.
ಶಿವಮೊಗ್ಗ, ವಿನೋಬನಗರದ ಆನಂದ್ ಗೌರಿಶಂಕರ್ ನಂದಿನಿ ನಿವಾಸದಲ್ಲಿ 16 ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಮಂಗಳಗೌರಿ ವಿಶೇಷ ವೃತ ಸಂಪನ್ನಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೂ ಧರ್ಮದ ಹಬ್ಬಗಳಲ್ಲಿ ಮಹಿಳೆಯರು ಮಂಗಳಗೌರಿ ವೃತವನ್ನು ವಿಶೇಷವಾಗಿ ಆಚರಿಸುತ್ತಾರೆ ಎಂದು ತಿಳಿಸಿದರು.
ದೇವರ ಅನುಗ್ರಹವಿದ್ದರೆ ಇಡೀ ಕುಟುಂಬಕ್ಕೆ ಒಳಿತಾಗುವ ಜತೆಯಲ್ಲಿ ಆತ್ಮವಿಶ್ವಾಸ, ಶಕ್ತಿ, ಸಾಮಾರ್ಥ್ಯ, ಧನಾತ್ಮಕ ಆಲೋಚನೆ ವೃದ್ಧಿಸುತ್ತದೆ. ಮಂಗಳಗೌರಿ ವೃತ ಪುಸ್ತಕ ಓದುವುದರಿಂದ, ಆಲಿಸುವುದರಿಂದ ಶ್ರದ್ಧೆ ಭಕ್ತಿ ಹೆಚ್ಚಾಗಿ ಒಳಿತಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವೃತವನ್ನು 16 ವರ್ಷದಿಂದ ಆಚರಣೆ ಮಾಡಿದ ಗೌರಿಶಂಕರ್ ಕುಟುಂಬದ ನಂದಿನಿ ಆನಂದ್ ಮಾತನಾಡಿ, ಮನೆಯಲ್ಲಿ ಶ್ರದ್ಧೆ ಭಕ್ತಿಯಿಂದ 16 ವಷಗಳಿಂದ ಮಂಗಳಗೌರಿ ವೃತ ಆಚರಿಸುತ್ತಿದ್ದು, ದೇವರ ಆಶೀರ್ವಾದಿಂದ ಒಳ್ಳೆಯದಾಗಿದೆ. 16 ಮುತ್ತೈದೆಯರಿಗೆ ವಿಶೇಷ ಬಾಗಿನ ನೀಡಿ ವೃತ ಸಂಪನ್ನಗೊಳಿಸಲಾಗುವುದು ಎಂದು ಹೇಳಿದರು.
ಮಂಗಳಗೌರಿ ವೃತದ ಆಚರಣೆಯನ್ನು ಮಹಿಳೆಯರು ಕ್ರಮಬದ್ಧವಾಗಿ ಮಾಡುವುದರಿಂದ ದೇವಿಯು ಸಕಲವನ್ನು ಕರುಣಿಸುತ್ತದೆ ಎಂದು ತಿಳಿಸಿದರು.
Mangala Gauri Vratha ಮಂಗಳಗೌರಿ ವೃತದಲ್ಲಿ 150ಕ್ಕೂ ಹೆಚ್ಚು ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ನವ್ಯ, ನಯನ, ಶಾರದಾ, ಆಶಾ, ಕಲ್ಪನಾ, ವೀರಭದ್ರಪ್ಪ, ಜಯರತ್ನ, ಪ್ರಸನ್ನ, ರೇಣುಕಾ, ವಸುಂಧರಾ, ಗಾಯತ್ರಿ, ಯೋಗಪಟುಗಳು ಭಾಗವಹಿಸಿದ್ದರು.