Shimoga Cycle Club ಆರೋಗ್ಯವಾಗಿರಲು ಎಲ್ಲರೂ ಕ್ರೀಡಾ ಚಟುವಟಿಕೆ ಗಳಲ್ಲಿ ಪಾಲ್ಗೊಂಡರೆ ಸದೃಡ ದೇಹ ಉತ್ತಮ ಆರೋಗ್ಯ ಹೊಂದಲು ಸಾದ್ಯ ಎಂದು ರಾಷ್ರೀಯ ದಿನಾಚರಣೆ ಅಂಗವಾಗಿ ಕ್ರೀಡಾ ಭಾರತಿ, ಶಿವಮೊಗ್ಗ ಸೈಕಲ್ ಕ್ಲಬ್ ಆಯೋಜಿಸಿದ್ದ ಸೈಕಲ್ ಸ್ವರ್ಧೆ ಉದ್ಘಾಟಿಸಿದ ಅನೀಲ್ ಕುಮಾರ್ ಬೊಮ್ಮರೆಡ್ಡಿ, ಅಡಿಷನಲ್ ಎಸ್.ಪಿ.ಯವರು ಮಾತನಾಡುತ್ತಿದ್ದರು.
ಸೈಕಲ್ ಕೂಡ ಉತ್ತಮ ಕ್ರೀಡೆ, ಮನುಷ್ಯ ಯಾವುದಾದರೂ ಒಂದು ಕ್ರೀಡೆ ಆಯ್ಕೆ ಮಾಡಿ ಕೊಳ್ಳಲೇ ಬೇಕು, ನಡೆಯುವುದು, ಓಡುವುದು, ಯೋಗ, ಬ್ಯಾಟ್ ಮಿಟನ್, ಕ್ರಿಕೇಟ್ ಹಿಗೆ ಅನೇಕ ಅಭ್ಯಾಸಗಳಿವೆ. ನನಗೆ ಮನಃಶಾಂತಿ ಮತ್ತು ಉತ್ತಮ ಆರೋಗ್ಯ ದೊರಕಿರುವುದು ಸೈಕ್ಲಿಂಗ್ ನಿಂದ, ಇಂದು ಶಿವಮೊಗ್ಗದಲ್ಲಿ ಉತ್ತಮ ಸೈಕ್ಲಿಸ್ಟ್ ನನಗೆ ದೊರಕಿದ್ದಾರೆ, ಇಲ್ಲಿ ಈ ಕಾರ್ಯಕ್ರಮ ಉದ್ಘಾಟಿಸಲು ಸಂತೋಷವಾಗುತ್ತದೆ ಎಂದರು.
ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಶಿವಮೊಗ್ಗ ದಲ್ಲಿ ಯಾವುದೇ ಕಾರ್ಯಕ್ರಮ ವಿರಲಿ ಜನಸಾಮಾನ್ಯರಿಗೆ ತಿಳುವಳಿಕೆ ಮೂಡಿಸಲು ಸೈಕಲ್ ಜಾತ ಏರ್ಪಡಿಸುತ್ತಾರೆ, ನಮ್ಮ ಕ್ಲಬ್ ನ ಎಲ್ಲಾ ಸದಸ್ಯರು ಉತ್ತಮವಾಗಿ ಸ್ವಂದಿಸಿ ಆ ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡುತ್ತಾರೆ. ಇಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ, ಅದನ್ನು ಯಶಸ್ವಿಗೊಳಿಸಲು, ಸ್ವರ್ಧಿಗಳು ಸಜ್ಜು ಗೊಂಡಿದ್ದಾರೆ, ಅವರೆಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ರೀಡಾಭಾರತಿಯ ನಾಗರಾಜ್ ಮಾತನಾಡುತ್ತ, ಹಲವಾರು ವರ್ಷಗಳಿಂದ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಈ ಬಾರಿ ಹೊಸಬಗೆಯಾಗಿ ಸೈಕಲ್ ರೇಸ್ ಆಯೋಜಿಸಿದ್ದೇವೆ, ಉತ್ತಮ ಪ್ರತಿಕೃಯೆ ದೊರಕಿದೆ ಎಂದರು.
ಸ್ವರ್ಧೆಯ ರೂಪ ರೇಷೆಯನ್ನು ಹರೀಶ್ ಪಾಟೀಲ್ ಸೂಚಿಸಿದರು.
Shimoga Cycle Club ಜಿ.ವಿಜಯಕುಮಾರ್ ನಿರೂಪಿಸಿ, ಕ್ರೀಡಾಭಾರತಿ ಕಾರ್ಯದರ್ಶಿ ರಾಘವೇಂದ್ರ ಸ್ವಾಗತಿಸಿ, ಸೈಕಲ್ ಕ್ಲಬ್ ಕಾರ್ಯದರ್ಶಿ ಗಿರೀಶ್ ಕಾಮತ್ ವಂದಿಸಿದರು, ತರುಣೋದಯ ಘಟಕದ ಛೇರ್ಮನ್ ಎಸ್.ಎಸ್.ವಾಗೇಶ್, ಸುರೇಶ್ ಕುಮಾರ್, ಹರೀಶ್ ಕಾರ್ಣಿಕ್,
ಎಸ್.ದತ್ತಾತ್ರಿ, ನರಸಿಂಹ ಮೂರ್ತಿ, ಲೋಕೇಶ್ವರ ಕಾಳೆ, ನಾಗಭೂಷಣ್, ರವೀಂದ್ರ, ಯಶ್ವಂತ್ ಇದ್ದರು, ಮೂರು ವಿಭಾಗದಲ್ಲಿ ಸುಮಾರು ಐವತ್ತು ಸೈಕಲೀಸ್ಟ್ ಭಾಗವಹಿಸಿದ್ದರು.