Thursday, December 18, 2025
Thursday, December 18, 2025

Backward Classes Welfare Department ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ಪ್ರೋತ್ಸಾಹಧನ ಕಾರ್ಯಕ್ರಮ

Date:

Backward Classes Welfare Department 2023-24ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ವಕೀಲರಿಗೆ ಪ್ರೋತ್ಸಾಹ ಧನ ಕಾರ್ಯಕ್ರಮದಡಿ ಕಾನೂನು ಪದವೀಧರ ಅಭ್ಯರ್ಥಿಗಳಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ತರಬೇತಿ ಜೊತೆಗೆ ತರಬೇತಿ ಭತ್ಯೆ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ಭತ್ಯೆ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಪ್ರವರ್ಗವಾರು ನಿಗದಿಪಡಿಸಿದ ಗುರಿಗನುಗುಣವಾಗಿ ಮೆರಿಟ್ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಸೆ. 25 ಕಡೆಯ ದಿನವಾಗಿದ್ದು ಅರ್ಜಿ ನಮೂನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಸವಚೇತನ ಬಿಲ್ಡಿಂಗ್, 100 ಅಡಿ ರಸ್ತೆ, ರವೀಂದ್ರನಗರ, ಶಿವಮೊಗ್ಗ ಜಿಲ್ಲೆ, ದೂ.ಸಂ:08182-222129.

ತರಬೇತಿ ಅವಧಿಯು 4 ವರ್ಷಗಳದ್ದಾಗಿದ್ದು, ಮಾಹೆಯಾನ ರೂ.4000 ಗಳ ತರಬೇತಿ ಭತ್ಯೆ ನೀಡಲಾಗುವುದು. ಪ್ರವರ್ಗ 2ಎ, 3ಎ ಮತ್ತು 3ಬಿ ಗಳಿಗೆ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ.2.50 ಲಕ್ಷ ಹಾಗೂ ಅಭ್ಯರ್ಥಿಯ ಗರಿಷ್ಟ ವಯೋಮಿತಿಯು ಪ್ರಕಟಣೆ ದಿನಾಂಕಕ್ಕೆ 30 ವರ್ಷಗಳನ್ನು ಮೀರಬಾರದು. ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.3.50 ಲಕ್ಷ ಆದಾಯದ ಮಿತಿಯನ್ನು ನಿಗದಿಪಡಿಸಲಾಗಿದೆ.

Backward Classes Welfare Department ಅಭ್ಯರ್ಥಿಯ ಗರಿಷ್ಟ ವಯೋಮಿತಿಯು 31 ವರ್ಷಗಳು ಮೀರಿರಬಾರದು. ತರಬೇತಿಗೆ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2 ವರ್ಷ ಅವಧಿಯ ಒಳಗಿರುವವರು ಮಾತ್ರ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿರಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...

Department of Agriculture 2026 ಜನವರಿ 6. ಕೃಷಿ ಇಲಾಖೆಯಿಂದ “ಸಿರಿಧಾನ್ಯ & ಮರೆತು ಹೋದ ಖಾದ್ಯಗಳ ಪಾಕ ತಯಾರಿ” ಸ್ಪರ್ಧೆ

Department of Agriculture ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ...

Shivamogga Police ಶಿಕಾರಿಪುರ- ಚುರ್ಚುಗುಂಡಿಯಿಂದ ಯುವಕ ನಾಪತ್ತೆ, ಪೊಲೀಸ್ ಪ್ರಕಟಣೆ

Shivamogga Police ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...