Sri Uttaradi Math ಧರ್ಮದ ವಿಷಯವಾಗಿ ಸ್ವಲ್ಪ ಅನುಮಾನಿಸಿ ನಡೆದುಕೊಂಡರೂ ಅನರ್ಥವಾಗುತ್ತದೆ. ದೇವರಲ್ಲಿ ಅತ್ಯಂತ ವಿಶ್ವಾಸ ಇರಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಮಂಗಳವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಮಹಾಭಾರತ ತಾತ್ಪರ್ಯ ನಿರ್ಣಯದ ಸ್ವರ್ಗಾರೋಹಣ ಪರ್ವದ ಮಂಗಳದಲ್ಲಿ ಅನುಗ್ರಹ ಸಂದೇಶ ನೀಡಿದರು.
ಎಂತಹ ಜ್ಞಾನಿಯಾದರೂ ದೇವರ ವಿಷಯದಲ್ಲಿ ಶ್ರದ್ಧೆ, ಜ್ಞಾನ ಕಡಿಮೆ ಆಗಬಾರದು. ಒಂದು ಸಣ್ಣ ಅಜ್ಞಾನದಿಂದ ಧರ್ಮರಾಜ ಕೂಡ ನರಕ ದರ್ಶನ ಮಾಡಬೇಕಾಯಿತು. ಹೀಗಾಗಿ ದೇವರ ಮಾತಿನ ಮೇಲೆ ಎಂದಿಗೂ ಅವಿಶ್ವಾಸ ಮಾಡಬಾರದು ಎಂಬ ಸಂದೇಶ ಮಹಾಭಾರತ ನಮಗೆ ನೀಡುತ್ತದೆ ಎಂದರು.
ಪ್ರವಚನ ನೀಡಿದ ಲಕ್ಷ್ಮೀಯಿನರಸಿಂಹಾಚಾರ್ಯ, ಜೀವನದಲ್ಲಿ ಎಷ್ಟೇ ಸುಖ, ದುಃಖಗಳು ಬರಲಿ ಸಮುದ್ರದಂತೆ ಏಕಪ್ರಕಾರವಾಗಿರಬೇಕು. ಜೇನುಹುಳಗಳು ಜೇನು ಸಂಗ್ರಹಿಸಿದoತೆ ದೇವರ ಶಾಸ್ತçಗಳ ಸಂಗ್ರಹ ಮಾಡಬೇಕು. ಕಾಡಾನೆ ಹೆಣ್ಣಾನೆಯ ಆಸೆಗೆ ಕಂದಕಕ್ಕೆ ಬೀಳುವುದನ್ನು ನೋಡಿ ಹೆಣ್ಣಿನಾಸೆ ಬಿಡಬೇಕೆಂಬ ಪಾಠ ಕಲಿಯಬೇಕು ಎಂದರು.
ಗ್ರಾಮ್ಯ ಗೀತೆಯನ್ನು ಕೇಳಿ ಅಂತ್ಯ ಕಾಣುವ ಜಿಂಕೆಯ ಸ್ಥಿತಿ ಬರಬಾರದು ಎಂದರೆ ದೇವರ ಗೀತೆಯನ್ನು ಕೇಳಿ ಉದ್ಧಾರವಾಗಬೇಕು. ಅದೇರೀತಿ ಜಿಹ್ವಾಚಾಪಲ್ಯದಿಂದ ಮೀನು ಜೀವಕ್ಕೇ ಅಪಾಯ ತಂದುಕೊಳ್ಳುತ್ತದೆ. ಹೀಗಾಗಿ ರುಚಿಯ ಹಿಂದೆ ಬೀಳಬಾರದು. ಯಾವುದೇ ಅಪೇಕ್ಷೆ ಮಾಡದೆ ದೇವರ ಧ್ಯಾನ ಮಾಡಬೇಕು ಎಂದರು.
Sri Uttaradi Math ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಹಾಸಂಸ್ಥಾನದ ದಿವಾನರಾದ ಕೂಡಲಿ ಶ್ರೀಧರಾಚಾರ್ಯ ಮಾತನಾಡಿದರು. ಶ್ರೀನಿಧಿ ಆಚಾರ್ಯ ಜಮನೀಸ್ ಪೂಜಾ ಕಾಲದಲ್ಲಿ ಪ್ರವಚನ ನೀಡಿದರು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲ್ ಮೊದಲಾದವರಿದ್ದರು.