Institute of Foundrymen ನ್ ಇನ್ಸಿಟಿಟ್ಯೂಟ್ ಆಫ್ ಫೌಂಡ್ರಿಮೆನ್, ಕಲ್ಕತ್ತಾ
ಇಂಡಿಯ ಕಿಮ್ಮನೆ ಗೋಲ್ಫ್ ಕ್ಲಬ್ ನಲ್ಲಿ ನಡೆಯುವ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸಮಾರಂಭ
9ನೇ ಸೆಪ್ಟಂಬರ್ 2023 ಶನಿವಾರ
ಭಾರತದ ಫೌಂಡ್ರಿಮೆನ್ ಶಿಕ್ಷಣ, ಸಂಶೋಧನೆ, ತರಬೇತಿ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು 1950ರಲ್ಲಿ ಸ್ಥಾಪಿತವಾದ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್ ಸಂಸ್ಥೆಯು ಗ್ರಾಹಕರು ಮತ್ತು ಸರಬುರಾಜುದಾರರಿಗೆ ಸೇವೆ ಸಲ್ಲಿಸುವ ಉದ್ದೇಶವನ್ನು ಹೊಂದಿದೆ.
ಕಲ್ಕತ್ತಾದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಈ ಸಂಸ್ಥೆ ತನ್ನ 26ಅಂಗ ಸಂಸ್ಥೆಗಳ ಮೂಲಕ ಇಡೀ ದೇಶಕ್ಕೆ ಸೇವೆಯನ್ನೊದಗಿಸುತ್ತಿದೆ. ಅದರ ಜೊತೆಗೆ ದೇಶದ್ಯಂತ ಇರುವ ರಾಜ್ಯಗಳಿಗೆ ಒಂದು ಕೇಂದ್ರವನ್ನೂ, ನವದೆಹಲಿ, ಪುಣೆ ಮತ್ತು ಚೆನೈನಲ್ಲಿ ಸ್ಥಾಪಿತವಾದ ಮೂರು ಕೇಂದ್ರಗಳನ್ನು ಮತ್ತು ಕಲ್ಕತ್ತಾ, ದೆಹಲಿ, ಮುಂಬೈ ಮತ್ತು ಚೆನೈ ನಲ್ಲಿ ಪ್ರಾಂತೀಯ ಕಛೇರಿಗಳನ್ನು ಹೊಂದಿದೆ.
ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್ ಸಂಸ್ಥೆಯು ವಿಶ್ವ ಫೌಂಡ್ರಿಮೆನ್ ಸಂಸ್ಥೆಯ ಸದಸ್ಯತ್ವ ಪಡೆದಿದೆ. ತನ್ನ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಮೂಹಿಕ ಆಕಾಂಕ್ಷೆಗಳನ್ನು ಪೂರೈಸಲು ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್ ಸಂಸ್ಥೆಯ ಶಿವಮೊಗ್ಗ ವಿಭಾಗವು ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ವರ್ಷ ದಶಮಾನೋತ್ಸವವನ್ನು ಆಚರಿಸಿಕೊಂಡಿದೆ. ದಕ್ಷಿಣ ಭಾರತದ ಮೂರು ಪ್ರಾಂತ್ಯಗಳೂ ಸಹ ಕಲ್ಕತ್ತಾದ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್‌ನ ಅಂಗ ಸಂಸ್ಥೆಗಳೇ ಆಗಿವೆ.
ನಮ್ಮ ಶಿವಮೊಗ್ಗೆಯ ಹೆಮ್ಮೆಯ ಶಾಂತಲಾ ಸ್ಪೆರೋಕಾಸ್ಟ್ ಪ್ರೈ ವೇಟ್ ಲಿಮಿಟೆಡ್ ನ ಉಪಾಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಅವರು 2023-24ರಲ್ಲಿ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಲು ಸಂತೋಷವೆನಿಸುತ್ತದೆ. ಅಲ್ಲದೆ ಇದೇ ೯ರಂದು ಶಿವಮೊಗ್ಗದಲ್ಲಿ ನಡೆಯುವ ಸರ್ವ ಸದಸ್ಯರ ಸಭೆಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಕಲ್ಕತ್ತಾದ ನವನೀತ್ ಅಗರ್‌ವಾಲ್ ಅವರು ಉಪಾಧ್ಯಕ್ಷರಾಗಿ, ಕೊಯಮತ್ತೂರಿನ ಮುತ್ತುಕುಮಾರ್ ಅವರು ಗೌರವ ಕಾರ್ಯದರ್ಶಿಯಾಗಿ ಮತ್ತು ನಾಗಪುರದ ಸುಶೀಲ್ ಶರ್ಮಾ ಅವರು ಖಜಾಂಚಿಯಾಗಿ ಸಹ ರಾಷ್ಟ್ರೀಯ ಪದಾಧಿಕಾರಿಗಳಾಗಿ ಅಧಿಕಾರ ವಹಿಸಕೊಳ್ಳಲಿದ್ದಾರೆ.
ಶಿವಮೊಗ್ಗದ ವಿಜಯಾ ಟೆಕ್ನೊಕ್ರಾಟ್‌ನ ಡಿ.ಜಿ.ಬೆನಕಪ್ಪ, ಪಿಯರ್ ಲೈಟ್ ಲೈರ‍್ಸ್ ನ ಅಂಕಿತ್ ದಿವೇಕರ್, ಶ್ರೇಯೋನಿಧಿ ಎಂಟರ್‌ಪ್ರೈ ಸಸ್‌ನ ಡಿ.ವಿ ಕಿರಣ್ ಕುಮಾರ್ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್‌ನ ರಾಷ್ಟ್ರೀಯ ಕೌನ್ಸಿಲ್‌ಗೆ ಚುನಾಯಿತರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಲ್ಲಿ ಫೌಂಡ್ರಿ ಕೈಗಾರಿಕೆಯ ಪಾಲು ಹೆಚ್ಚಿನದಾಗಿದೆ. ವಾಹನ, ಯಂತ್ರ ಕೈಗಾರಿಕೆ, ಪ್ಲಾಸ್ಟಿನ್ ಇಂಜೆಕ್ಷನ್ ಮೌಲ್ಡಿಂಗ್ ಯಂತ್ರ, ಪಂಪುಗಳು ಮತ್ತು ವಾಲ್ವ್ಗಳು, ಕಟ್ಟಡಗಳು, ರೈಲ್ವೆ, ರಸ್ತೆಗಳ ನಿರ್ಮಾಣ ಮತ್ತು ಸೇತುವೆ ನಿರ್ಮಾಣಕ್ಕೆ ಬೇಕಾದ ಬಿಡಿಭಾಗಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದೆ. ಭಾರತ ಮತ್ತು ವಿದೇಶಗಳಿಗೆ ಹೆಚ್ಚಾಗಿ ಸರಬರಾಜು ಮಾಡುತ್ತಿರುವುದು ಹೆಮ್ಮೆಯ ವಿಷಯ. ಇದೀಗ ಡಿ.ಎಸ್.ಚಂದ್ರಶೇಖರ್ ಅವರ ನಾಯಕತ್ವದಲ್ಲಿ ಶಿವಮೊಗ್ಗ ಕೈಗಾರಿಕಾ ಕೇಂದ್ರವು ರಾಷ್ಟೀಯ ಮತ್ತು ಅಂತರ ರಾಷ್ಟ್ರೀಯ ವ್ಯಾಪ್ತಿಯಲ್ಲಿ ಗುರುತಿಸಲ್ಪಡುತ್ತದೆ ಎಂಬ ನಂಬುಗೆ ನಮಗಿದೆ.
ನಮ್ಮ ಶಿವಮೊಗ್ಗದ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್ ಸಂಸ್ಥೆಯು ಈ ಪ್ರಮಾಣವಚನ ಸಮಾರಂಭವನ್ನು ಅತ್ಯಂತ ಅದ್ದೂರಿಯಾಗಿ ಕಿಮ್ಮನೆ ಗೋಲ್ಫ್ ಕ್ಲಬ್‌ನಲ್ಲಿ ಆಯೋಜಿಸಿದೆ.
ಅಧ್ಯಕ್ಷರ ಅಧಿಕಾರಾವಧಿ ಒಂದು ವರ್ಷವಾಗಿರುತ್ತದೆ. ಈ ವರ್ಷ ದಕ್ಷಣ ಭಾರತದ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್ ಪ್ರಾಂತೀಯ ಸಂಸ್ಥೆಯು ಶಿವಮೊಗ್ಗದ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್ ಜೊತೆಗೂಡಿ 2024 ರ ಫೆಬ್ರವರಿ 2,3ಮತ್ತು 4 ರಂದು ಬೆಂಗಳೂರಿನಲ್ಲಿ ಅಂತರ ರಾಷ್ಟ್ರೀಯ 72ನೇ ಸಮಾವೇಶವನ್ನು ನಡೆಸುವ ಜವಾಬ್ದಾರಿಯನ್ನು ಪಡೆದಿದೆ. ಈ ಸಮಾವೇಶದಲ್ಲಿ ರಾಷ್ಟ್ರಮಟ್ಟದ ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಫೌಂಡ್ರಿಮೆನ್‌ನ ಸದಸ್ಯರು, ನಾಲ್ಕು ವಿಭಾಗ ಮತ್ತು ೨೬ ಕೇಂದ್ರಗಳವರೂ ಸಹ ಭಾಗವಹಿಸುತ್ತಾರೆ.
Institute of Foundrymen ಇಂದು ನಡೆಯುತ್ತಿರುವ ಪತ್ರಿಕಾ ಗೋಷ್ಠಿಯಲ್ಲಿ ಡಿ.ಎಸ್.ಚಂದ್ರಶೇಖರ್, ದಾಮೋದರ್ ಬಾಳಿಗಾ, ಟಿ.ಎನ್ ಪರಮೇಶ್ವರ್, ಅಂಕಿತ್ ದಿವೇಕರ್, ಡಿ.ಜಿ.ಬೆನಕಪ್ಪ, ಶ್ರೀನಾಥ್ ಗಿರಿ ಮಾಜಿ. ಎಂ ಎನ್ ಸುರೇಶ್ ಎಂ.ವಿ.ರಾಘವೇoದ್ರ, ಡಾ.ರಾಘವೇಂದ್ರ ಹೆಬ್ಬಾರ್ ಅವರು ಉಪಸ್ಥಿತರಿದ್ದರು