Teachers Day Celebration ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನಾಗಿಸಬಲ್ಲ ಶಕ್ತಿ ಹೊಂದಿರುವವರು ಹಾಗೂ ವಿದ್ಯಾರ್ಥಿಯನ್ನು ಪ್ರಪಂಚಕ್ಕೆ ಪರಿಚಯಿಸುವುದಲ್ಲದೇ ಅಂತರoಗದ ಶಕ್ತಿಯನ್ನು ತುಂಬುವ ಪಾತ್ರ ನಿಭಾ ಯಿಸುವವರು ಶಿಕ್ಷಕರು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಗುರುಕೃಪಾ ಸಂಗೀತ ಕಲಾ ತಂಡ ಚಿಕ್ಕಮಗಳೂರು ವತಿಯಿಂದ ಮಂಗಳವಾರ ಕಾರಾಗೃಹದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಪ್ರಯುಕ್ತ ‘ಶಿಕ್ಷಣ ಮನಪರಿವರ್ತನೆಯಲ್ಲಿ ಭಾವಯಾನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣದ ಪರಿವರ್ತನೆಯು ಶಿಕ್ಷಕರಿಂದ ಪ್ರಾರಂಭವಾಗುತ್ತದೆ. ಅಧ್ಯಯನಶೀಲತೆ ಅಧ್ಯಾಪಕನಿಗೆ ಅತ್ಯಗತ್ಯ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅರಿವಿಲ್ಲದಂತೆ ವೇದಿಕೆ ಮುಂದೆ ಸಾದರಪಡಿಸುವಲ್ಲಿ ಹಾಗೂ ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶಕರಾಗಿ ಭರವಸೆಯ ದಾರಿ ಮೂಡಿಸುವವರು ಅಧ್ಯಾಪಕ ವೃಂದದವರು ಎಂದರು.
ಶಿಕ್ಷಣವು ಪ್ರತಿಯೊಬ್ಬರ ವ್ಯಕ್ತಿತ್ವ ಬದಲಾಯಿಸುತ್ತದೆ. ಇಲ್ಲಿನ ಕೈದಿಗಳು ವಿದ್ಯಾರ್ಥಿಗಳಿದ್ದಂತೆ ಕಲಿತ ಶಿಕ್ಷಣವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಅಪರಾಧಮುಕ್ತ ರಾಯಭಾರಿಗಳಾಗಿ ಗುರುತಿಸಿಕೊಳ್ಳಬೇಕು ಎಂದರು.
ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಗಣೇಶ್ ಮಾತನಾಡಿ ಜೈಲಿನ ಕೈದಿಗಳು ಕೆಟ್ಟ ಆಲೋಚನೆಗಳಿಂದ ಹೊರಬಂದು ಮನಪರಿವರ್ತನೆ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕಾರಾಗೃಹ ಕೇಂದ್ರಗಳು ಮನಪರಿವರ್ತನೆ ತಾಣವಿದ್ದಂತೆ. ಜೀವನದಲ್ಲಿ ತಪ್ಪುಗಳಾಗುವುದು ಸಹಜ. ಆದರೆ ಅವು ಮರುಕಳಿಸದಂತೆ ತಿದ್ದಿ ಕೊಂಡು ಸಮಾಜದಲ್ಲಿ ಬದುಕಬೇಕು. ಉತ್ತಮ ಆಲೋಚನೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊ ಳ್ಳಬೇಕು ಎಂದು ಸಲಹೆ ನೀಡಿದರು.
Teachers Day Celebration ಇದೇ ವೇಳೆ ಕಾರ್ಯಕ್ರಮದಲ್ಲಿ ಸುರೇಂದ್ರ ನಾಯಕ್ ಅವರ ಗುರುಕೃಪಾ ಸಂಗೀತಾ ಕಲಾ ತಂಡದಿoದ ಭಕ್ತಿಗೀತೆ, ಭಾವಗೀತೆ ಹಾಗೂ ಮನಪರಿವರ್ತನೆ ಗೀತೆಗಳನ್ನು ಹಾಡಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲ ನಟೇಶ್, ಎಐಟಿ ಕಾಲೇಜು ಪ್ರಾಂಶುಪಾಲ ಜಯದೇವ್, ಐಡಿಎಸ್‌ಜಿ ಕಾಲೇಜು ಉಪನ್ಯಾಸಕ ಮಹೇಶ್, ಜೈಲರ್ ಎಂ.ಕೆ. ನೆಲಧರಿ, ಸಂಗೀತ ಶಿಕ್ಷಕ ಜಯಣ್ಣ, ಆನಂದ್, ಭುವನೇಶ್ವರಿ ಉಪಸ್ಥಿತರಿದ್ದರು.